ಜಿಲ್ಲೆ

VIDEO: ವೀರ ಸಾವರ್ಕರ್ ಅವರಷ್ಟು ಲಾಠಿ ಏಟು ತಿಂದಿದ್ರಾ ದೊರೆಸ್ವಾಮಿ, ಸ್ವಾತಂತ್ರ್ಯ ಸಿಗುವ ವೇಳೆಗೆ ಅವರ ವಯಸ್ಸೆಷ್ಟು ಎಂದು ಪ್ರಶ್ನಿಸಿದ ಬಸನಗೌಡ ಪಾಟೀಲ್ ಯತ್ನಾಳ್

vijayavani

ಬೆಂಗಳೂರು: ಗಾಂಧಿ ಪ್ರತಿಮೆ ಎದುರು ನಿಂತು ಯತ್ನಾಳ್ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ಸಿಗರಿಗೆ ನಾಚಿಕೆ ಆಗಬೇಕು. ದೊರೆಸ್ವಾಮಿ ಎಂದಾದರೂ ವೀರ ಸಾವರ್ಕರ್ ಅವರಷ್ಟು ಲಾಠಿ ಏಟು ತಿಂದಿದ್ದಾರಾ? ಅವರಂತೆ ಕರಿನೀರಿನ ಶಿಕ್ಷೆ ಅನುಭವಿಸಿದ್ದಾರಾ?

ಹೀಗೆಂದು ಪ್ರಶ್ನಿಸಿದ್ದಾರೆ ಬಸನಗೌಡ ಪಾಟೀಲ್ ಯತ್ನಾಳ್. ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸೈನಿಕರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಸ್ವಾತಂತ್ರ್ಯವೀರ ಸಾವರ್ಕರ್ ಅವರ ಬಗ್ಗೆ ಅತ್ಯಂತ ಕ್ಷುಲ್ಲಕವಾಗಿ ಮಾತನಾಡುತ್ತಾರೆ. ಇವನ್ನೆಲ್ಲ ಸಹಿಸಿಕೊಂಡು ಕೂರಬೇಕಾ ಎಂದು ಕೇಳಿದರು.

ಇದೇ ವೇಳೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧವೂ ಹರಿಹಾಯ್ದ ಅವರು, ಅವರೇನು ಸಾಚಾನಾ? ಅವರ ಇತಿಹಾಸ ಏನಿದೆ ಅದು ಎಲ್ಲರಿಗೂ ಗೊತ್ತಿದೆ. ಅವರೆಷ್ಟು ಭೂಕಬಳಿಕೆ ಮಾಡಿದ್ದಾರೆ. ಬಹಳ ಸಾಚಾನಂತೆ ಮಾತನಾಡುತ್ತಾರೆ. ಸತ್ಯ ಹರಿಶ್ಚಂದ್ರನ 19ನೇ ತಲೆಮಾರಿನವರಂತೆ ವರ್ತಿಸುತ್ತಾರೆ ಎಂದೂ ಆರೋಪಿಸಿದರು.