ಜಿಲ್ಲೆ

ಸಮುದ್ರದ ಒಡಲು ಸೇರುತ್ತಿವೆ ತಡೆಗೋಡೆ ಕಲ್ಲುಗಳು

ಇಂದಿರಾ ಎನ್ ಕೆ

ಪಡುಬಿದ್ರಿ: ಮುಂಗಾರಿನ ಮಳೆ ಗಾಳಿಯ ಅಬ್ಬರದೊಂದಿಗೆ ಕಾಪು ತಾಲೂಕಿನ ಹೆಜವಾಡಿ ಹಾಗೂ ಮೂಳೂರಿನಲ್ಲಿ ಕಡಲ್ಕೊರೆತ ಉಂಟಾಗಿದೆ.

ಮೂಳೂರಿನ ತೊಟ್ಟಂ ಮತ್ತು ಲಕ್ಷ್ಮೀನಾರಾಯಣ ಭಜನಾ ಮಂದಿರ ಪ್ರದೇಶದ ಒಂದು ಕಿಲೋ ಮೀಟರ್ ಪ್ರದೇಶದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಅಲೆಗಳ ಹೊಡೆತಕ್ಕೆ ಹಾಕಿರುವ ಕಲ್ಲುಗಳು ಸಮುದ್ರ ಪಾಲಾಗುತ್ತಿದೆ. ಮನೆಗಳು ಹಾಗೂ ತೆಂಗಿನ ಮರಗಳು ಅಪಾಯದಲ್ಲಿವೆ. ಹೆಜವಾಡಿಯ ಆನಂದ ಎಂಬುವರ ಮನೆ ಪರಿಸರದಲ್ಲಿಯೂ 100 ಮೀಟರ್ ಪ್ರದೇಶದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಈ ಹಿಂದೆ ಹಾಕಿದ್ದ ತಡೆಗೋಡೆ ಕಲ್ಲುಗಳು ಸಮುದ್ರ ಒಡಲು ಸೇರುತ್ತಿವೆ.

ಕೊರೆತದಿಂದ ಆನಂದ ಎಂಬುವರ ಮನೆ ಅಪಾಯದಲ್ಲಿದೆ. ಸ್ಥಳಕ್ಕೆ ತಹಸೀಲ್ದಾರ್ ಪ್ರತಿಭಾ ಆರ್ ಭೇಟಿ ನೀಡಿ ತುರ್ತು ಕಾಮಗಾರಿ ನಡೆಸುವ ಸಲುವಾಗಿ ಶಾಸಕರು ಹಾಗೂ ಮೀನುಗಾರಿಕಾ ಇಲಾಖಾ ಅಧಿಕಾರಿಗಳೊಂದಿಗೆ ವಾತುಕತೆ ನಡೆಸಿದ್ದಾರೆ. ಕಂದಾಯ ನಿರೀಕ್ಷಕ ಇಜಾಜ್ ಸಾಬಿರ್, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಾಣೇಶ್ ಹೆಜವಾಡಿ, ಪಾಂಡುರಂಗ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.