ಜಿಲ್ಲೆ

ಕೊಟ್ಟಿಗೆಯಲ್ಲಿ ಕಟ್ಟಿದ್ದ 1.20 ಲಕ್ಷ ರೂ. ಮೌಲ್ಯದ ಎತ್ತು, ಎಮ್ಮೆ ಕಳ್ಳತನ

Haveri - Kariyappa Aralikatti

ರಾಣೆಬೆನ್ನೂರ: ಜಮೀನಿನ ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ 1.20 ಲಕ್ಷ ರೂ. ಮೌಲ್ಯದ 1 ಎಮ್ಮೆ ಹಾಗೂ ಎರಡು ಎತ್ತುಗಳನ್ನು ಯಾರೋ ಕಳ್ಳತನ ಮಾಡಿದ ಘಟನೆ ತಾಲೂಕಿನ ಮಾಗೋಡ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಗ್ರಾಮದ ವಿಶ್ವ ಗಜೇಂದ್ರಚಾರ್ಯ ಮಾಯಚಾರಿ ಎಂಬುವರ ಎತ್ತುಗಳನ್ನು ಕಳ್ಳತನ ಆಗಿರುವುದು.

ಇವರು ಜಮೀನಿನ ದನದ ಕಟ್ಟಿಗೆಯಲ್ಲಿ ಎಮ್ಮೆ, ಎತ್ತುಗಳನ್ನು ಕಟ್ಟಿದ್ದರು. ಯಾರೋ ಖದೀಮರು ರಾತ್ರಿ ಸಮಯದಲ್ಲಿ ದನದ ಕೊಟ್ಟಿಗೆಗೆ ನುಗ್ಗಿ ಎಮ್ಮೆ, ಎತ್ತುಗಳನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.