ಜಿಲ್ಲೆ

ಬಾರ್ಜ್ ಸೇವೆ ಬೇಡಿಕೆಗೆ ಮರುಜೀವ

ಇಂದಿರಾ ಎನ್ ಕೆ

ಕುಂದಾಪುರ: ಕುಂದಾಪುರ ನಗರದಿಂದ ಮೀನುಗಾರಿಕಾ ಬಂದರು ಪಟ್ಟಣ ಗಂಗೊಳ್ಳಿ ಸಂಪರ್ಕಿಸಲು ಪಂಚಗಂಗಾವಳಿಯಲ್ಲಿ ಬಾರ್ಜ್ ಸೇವೆ ಆರಂಭಿಸಬೇಕೆಂದು ಒತ್ತಾಯಿಸುತ್ತಿದ್ದ ಬೇಡಿಕೆಗೆ ಮರುಜೀವ ಬಂದಿದೆ. ಸಿಗಂದೂರು ಸೇತುವೆ ನಿರ್ವಾಣದ ಬಳಿಕ ನಿರುಪಯುಕ್ತವಾಗುವ ಬಾರ್ಜ್, ಲಾಂಚ್ ಗಳ ಪೈಕಿ ಒಂದನ್ನು ಇಲ್ಲಿಗೆ ನೀಡುವಂತೆ ಒತ್ತಾಯ ಕೇಳಿ ಬಂದಿದೆ.

ಸಿಗಂದೂರಿನಲ್ಲಿ ಸೇತುವೆ ನಿರ್ವಾಣವಾದ ಹಿನ್ನೆಲೆಯಲ್ಲಿ ಬಾರ್ಜ್‌ಗಳ ಓಡಾಟ ನಿಲ್ಲಿಸಲಾಗಿವೆ. ಆದರೆ ಇವುಗಳನ್ನು ಹಿನ್ನೀರಿನಲ್ಲಿ ಯೋಜನೆ ಸಿದ್ಧಪಡಿಸಲಾಗಿದ್ದು, ಮೂರು ಬಾರ್ಜ್‌ಗಳ ಪೈಕಿ ಒಂದನ್ನು ಕುಂದಾಪುರಕ್ಕೆ ಕೊಡಬಹುದು ಎಂಬ ನಿರೀಕ್ಷೆಯಿದೆ. ಬಾರ್ಜ್ ಸೇವೆ ಆರಂಭಿಸಿದರೆ ಕುಂದಾಪುರ ಮತ್ತು ಗಂಗೊಳ್ಳಿ ನಡುವೆ ಹೂಳೆತ್ತುವ ಕೆಲಸ ಆಗಬೇಕಾಗುತ್ತದೆ. ಬಾರ್ಚ್ ಸೇವೆ ಆರಂಭವಾದರೆ ಕುಂದಾಪುರದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ಸಿಕ್ಕಿದಂತಾಗುತ್ತದೆ. ಸಂಸದ ರಾವೇಂದ್ರ ಅವರು ಮುತುವರ್ಜಿ ವಹಿಸಬಹುದು ಎಂಬುದು ಜನರ ಅಭಿಪ್ರಾಯ.

ಸೇತುವೆ ನಿರ್ವಾಣ ಪ್ರಸ್ತಾವ ಕೇಂದ್ರದ ಮುಂದೆ

ಗಂಗೊಳ್ಳಿ-ಕುಂದಾಪುರ ನಡುವೆ ಸೇತುವೆ ನಿರ್ವಾಣಕ್ಕೆ ಪ್ರಬಲ ಬೇಡಿಕೆ ಇದೆ. ಈ ಪ್ರಸ್ತಾವನೆ ಕೇಂದ್ರದ ಮುಂದೆ ಇದ್ದು, ಸೇತುವೆ ನಿರ್ವಾಣವಾದರೆ ಕುಂದಾಪುರದಿಂದ ಗಂಗೊಳ್ಳಿಗೆ 17 ಕಿ.ಮೀ. ಕ್ರಮಿಸುವ ಬದಲು ಕೇವಲ ಒಂದೇ ಕಿ.ಮೀ. ಕ್ರಮಿಸಿ ತಲುಪಬಹುದು. ಆದರೆ ಸೇತುವೆ ನಿರ್ವಾಣಕ್ಕೆ ದೊಡ್ಡ ಮೊತ್ತ ಬೇಕಾಗುವ ಕಾರಣ, ಗಂಗೊಳ್ಳಿಗೆ ಪರ್ಯಾಯ ರಸ್ತೆ ಇರುವ ಕಾರಣ ಬೇಡಿಕೆಗೆ ಹೆಚ್ಚಿನ ಬಲ ಬರಲಿಲ್ಲ.

ಸಮಯ, ಇಂಧನ ಉಳಿತಾಯ

ಕುಂದಾಪುರ-ಗಂಗೊಳ್ಳಿ ನಡುವೆ ಪಂಚಗಂಗಾವಳಿ ನದಿಯ ಮೂಲಕ ಹೋದರೆ 20 ನಿಮಿಷ ರಸ್ತೆ ಮೂಲಕ 17 ಕಿ.ಮೀ. ದೂರ 45 ನಿಮಿಷದ ಪ್ರಯಾಣ. ಕೆಲವೊಮ್ಮೆ ಒಂದು ಗಂಟೆಯಾಗುವುದೂ ಇದೆ. ಅದೆಷ್ಟೋ ಜೀವಗಳನ್ನು ಆಸ್ಪತ್ರೆಗೆ ಸಾಗಿಸುವಾಗ ವಾರ್ಗ ಮಧ್ಯೆ ಹೆಣವಾಗಿ ಮನೆಗೆ ಬಂದಿವೆ. ಶಿಕ್ಷಣ, ಆಸ್ಪತ್ರೆ, ತಾಲೂಕು ಕಚೇರಿ ಮೊದಲಾದ ಕೆಲಸಗಳಿಗೆ ದಿನನಿತ್ಯ ಓಡಾಡಬೇಕಾಗಿದೆ. ಹೀಗಾಗಿ ಗಂಗೊಳ್ಳಿ-ಕುಂದಾಪುರ ಸೇತುವೆಗೆ ಬಹಳ ವರ್ಷಗಳಿಂದ ಬೇಡಿಕೆಯಿದೆ.

ಮೊದಲು ಫೆರಿ ಸೇವೆ ಇತ್ತು

1960ರಲ್ಲಿ ಪಂಚಗಂಗಾವಳಿಯ 5 ಸೇತುವೆಗಳು ಆಗುವ ತನಕ ಈ ಎರಡು ಪಟ್ಟಣ ನಡುವೆ ಫೆರಿ ಸೇವೆ ಜನಪ್ರಿಯ. ಕುಂದಾಪುರದ ಮಸೀದಿ ಪಕ್ಕದ, ಪುರಸಭೆ ಪಾರ್ಕ್ ಇರುವ ಜಾಗದಿಂದ ಗಂಗೊಳ್ಳಿಗೆ 1973ರವರೆಗೆ ಒಬ್ಬರಿಗೆ 20 ಪೈಸೆಗೆ ಫಲದೋಣಿ ಇತ್ತು. ಸ್ಥಳೀಯಾಡಳಿತ ಏಲಂ ಮೂಲಕ ವಹಿಸಿ, ಬಿದಿರು ಜಲ್ಲೆ ಮೂಲಕವೇ ದೋಣಿ ಚಲಾಯಿಸಿ ಒಂದು ಟ್ರಿಪ್ಪಿಗೆ 10ರಿಂದ 12 ಜನರಂತೆ ಗಂಗೊಳ್ಳಿಗೆ ಕರೆದೊಯ್ದು ಸಂಜೆ 6ರವರೆಗೆ ನಿರಂತರ ಸೇವೆ ಇತ್ತು, ಹೆದ್ದಾರಿ, ಸೇತುವೆಗಳ ನಂತರ ಈ ಸೇವೆ ಸ್ಥಗಿತವಾಗಿ ಸಾರಿಗೆ, ಸ್ವಂತ ವಾಹನಗಳ ಬಳಕೆ ಹೆಚ್ಚಿತು. ದುಬಾರಿ ದುನಿಯಾದಲ್ಲಿ ಫೆರಿ ಸೇವೆ ಅನುಕೂಲ ಎನ್ನುತ್ತಾರೆ ಸ್ಥಳೀಯರು.

ಗಂಗೊಳ್ಳಿ-ಕುಂದಾಪುರ ಸಮೀಪವಾಗುವಂತಹ ಸಂಪರ್ಕದ ಅವಶ್ಯವಿದೆ. ಸೂಕ್ತ ಯೋಜನೆಗಾಗಿ ಲೋಕೋಪಯೋಗಿ ಸಚಿವರಿಗೆ ಮನವಿ ನೀಡಲಾಗಿದೆ. ಬೇರೆ ಯೋಚನೆ, ಯೋಜನೆಗಳೂ ಪರಿಶೀಲನೆ ಹಂತದಲ್ಲಿದ್ದು, ಸಂಸದರ ಮೂಲಕ ಚರ್ಚಿಸಲಾಗಿದೆ. ತಾತ್ಕಾಲಿಕವಾಗಿ ಕಡಿಮೆ ದರದಲ್ಲಿ ಬಾರ್ಜ್ ಸೇವೆ ಸಾಧ್ಯವಾದರೆ ಹಾಗೆಯೂ ಪ್ರಯತ್ನಿಸಲಾಗುವುದು. ಗುರುರಾಜ್ ಗಂಟೆಹೊಳೆ, ಬೈಂದೂರು ಶಾಸಕ https://www.vijayavani.net/consent-to-provide-barge-service https://www.vijayavani.net/students-need-to-value-culture