ಜಿಲ್ಲೆ

ಕುರಿಗಾಹಿಯ ಬರ್ಬರ ಹತ್ಯೆ

ಕ್ಯಾಲನೂರು: ಕೋಲಾರ ತಾಲೂಕಿನ ಚನ್ನಸಂದ್ರದ ಹೊರವಲಯದಲ್ಲಿ ಕುರಿಗಾಹಿಯನ್ನು ದುಷ್ಕರ್ಮಿಗಳು ಶುಕ್ರವಾರ ಬರ್ಬರವಾಗಿ ಕೊಲೆಮಾಡಿದ್ದಾರೆ.

ಚನ್ನಸಂದ್ರ ಗ್ರಾಮದ ನಾಗರಾಜ್​ (45) ಹತ್ಯೇಗಿಡಾದವರು. ನಾಗರಾಜ್​ ಅವರು ಕುರಿ ಮೇಯಿಸುವುದರ ಜತೆಗೆ ೈನಾನ್ಸ್​ ವ್ಯವಹಾರದಲ್ಲಿಯೂ ತೊಡಗಿಸಿಕೊಂಡಿದ್ದರು. ತಮ್ಮ ಬಳಿ ಎಷ್ಟೇ ಹಣವಿದ್ದರೂ ಮನೆಯಲ್ಲಿರಿಸದೆ ಜೇಬಿನಲ್ಲೇ ಇರಿಸಿಕೊಳ್ಳುವ ಹವ್ಯಾಸ ಹೊಂದಿದ್ದರು. ಅದರಂತೆ ಶುಕ್ರವಾರ ಯಾರೋ 2 ಲಕ್ಷ ರೂ. ಸಾಲವನ್ನು ನಾಗರಾಜ್​ ಅವರಿಗೆ ಮರಳಿಸಿದ್ದು, ಈ ಹಣ ದೋಚಲೆಂದೇ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಇನ್ನು ನಾಗರಾಜ್​ ಅವರಿಂದ ಸಾಲ ಪಡೆದವರು ವಾಪಸ್​ ಮಾಡಲಾಗದೆ ಹತ್ಯೆಗೈದಿರಬಹುದೆಂದೂ ಶಂಕಿಸಲಾಗಿದೆ. ಸ್ಥಳಕ್ಕೆ ಕೋಲಾರ ಎಸ್ಪಿ ಬಿ.ನಿಖಿಲ್​ ಭೇಟಿ ನೀಡಿ, ಪರಿಶೀಲಿಸಿದ್ದು, ವೇಮಗಲ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.