ಜಿಲ್ಲೆ

ಬಡಾವಣೆ ಅಭಿವೃದ್ಧಿಗೆ ಶ್ರಮಿಸುವೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಸ್ಥೆಗಳಿಂದ ಬಡಾವಣೆಗಳ ಅಭಿವೃದ್ಧಿಗೆ ವೇಗ ಸಿಗಲಿದೆ. ಸರ್ಕಾರ ನಾಗರಿಕರ ಮೂಲ ಸೌಲಭ್ಯಕ್ಕೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗ ಪಡೆಯಬೇಕು. ಬಡಾವಣೆಯ ಸಂಪೂರ್ಣ ಅಭಿವೃದ್ಧಿಗೆ ಅಗತ್ಯವಿರುವ ಸೌಕರ್ಯಗಳನ್ನು ಪೂರೈಸಲಾಗುವುದು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ನಗರದ ಆಯುಷ್ಯ ವಿಹಾರ ಬಡಾವಣೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಆಯುಷ್ಯ ವಿಹಾರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಸಂಘಗಳಿಂದ ಜನರು ಒಗ್ಗಟ್ಟಾಗಿ ಪರಸ್ಪರ ತಮ್ಮ ವಿಚಾರಗಳನ್ನು ಒಂದೇ ವೇದಿಕೆಯಲ್ಲಿ ವ್ಯಕ್ತಪಡಿಸಲು ಅನುಕೂಲ ಎಂದರು.
ಪಾಲಿಕೆ ಸದಸ್ಯೆ ಚಂದ್ರಕಲಾ ಕೊಟಬಾಗಿ ಮಾತನಾಡಿ, ಬಡಾವಣೆಗೆ ಬೀದಿ ದೀಪ, ಇತರ ಎಲ್ಲ ಸೌಕರ್ಯ ಪೂರೈಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಂತೇಶ ಚಿಕ್ಕಲಕಿ ಮಾತನಾಡಿ, ಬಡಾವಣೆ ಅಭಿವೃದ್ಧಿಗೆ ಸಂಘವನ್ನು ಸ್ಥಾಪಿಸಿದ್ದು, ಸಂಘದ ಮೂಲಕ ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದು ಬಡಾವಣೆ ಅಭಿವೃದ್ಧಿಗೆ ಅಗತ್ಯವಿರುವ ಕಾರ್ಯಗಳ ಮಂಜೂರಾತಿಗೆ ಬಡಾವಣೆ ನಾಗರಿಕರು ಒಟ್ಟಾಗಿ ಸಾಗುವುದು ಅವಶ್ಯಕವಾಗಿದೆ ಎಂದರು.
ಪಾಲಿಕೆ ಸದಸ್ಯರಾದ ಶಂಕರ ಶೇಳಕೆ, ಅನಿತಾ ಚಳಗೇರಿ ಮಾತನಾಡಿದರು. ಶ್ರೀ ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್​ ಕಮಿಟಿ ಅಧ್ಯಕ್ಷ ರುದ್ರಗೌಡ ಪಾಟೀಲ, ಶಂಕರ ಕೋಟ್ರೆ, ನಾಗೇಶ ತಲವಾಯಿ, ರುದ್ರಯ್ಯ ಕಲ್ಮಠ, ಯಲ್ಲಪ್ಪ ಮೇದಾರ, ಮಲ್ಲಿಕಾರ್ಜುನ ಓತಗೇರಿ, ರವಿ ಗರಗದ, ಪದಾಧಿಕಾರಿಗಳು, ಬಡಾವಣೆ ನಿವಾಸಿಗಳು, ಇತರರು ಇದ್ದರು.
ವಿಜಯಲಕ್ಷ್ಮೀ ರೊಡ್ಡಣ್ಣವರ ಸ್ವಾಗತಿಸಿದರು. ಬಸವರಾಜ ರೊಡ್ಡಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಕ ಜೋಡಂಗಿ ವಂದಿಸಿದರು.