ಜಿಲ್ಲೆ

ಮಿಕ್ಚರ್​ ಕೊಡದಿದ್ದಕ್ಕೆ ಬಾರ್​ ಕ್ಯಾಷಿಯರ್​ ಕೊಲೆ

ಕೋಲಾರ ಡೆಸ್ಕ್

ಲಕ್ಕೂರು:ಮಾಲೂರು ತಾಲೂಕು ಲಕ್ಕೂರು ಗ್ರಾಮದ ಬಾರ್​ನಲ್ಲಿ ಮಿಕ್ಚರ್​ ಕೊಡಲಿಲ್ಲ ಎಂಬ ಕಾರಣಕ್ಕೆ ಬಾರ್​ ಕ್ಯಾಷಿಯರ್​ನನ್ನು ಕೊಲೆ ಮಾಡಲಾಗಿದೆ.

ಹಾಸನ ಮೂಲದ ಕುಮಾರ್​(45) ಕೊಲೆಯಾದವರು. ಆರೋಪಿ ಲಕ್ಕೂರು ಗ್ರಾಮದ ಸುಭಾಷ್​ ತಲೆಮರೆಸಿಕೊಂಡಿದ್ದಾನೆ.

ಕೊಲೆಯಾದ ಕುಮಾರ್​ ಹಾಸನದಿಂದ ಬಂದು ಲಕ್ಕೂರಿನಲ್ಲಿ ನೆಲೆಸಿದ್ದು, ಬಾರ್​ನಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಮದ್ಯ ಸೇವನೆ ಮಾಡುವ ವೇಳೆ ಆರೋಪಿ ಮಿಕ್ಚರ್​ ಕೇಳಿದ್ದಾನೆ. ಈ ವೇಳೆ ಹಣ ನೀಡುವಂತೆ ಕ್ಯಾಷಿಯರ್​ ಕೇಳಿದಾಗ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಇದಾದ ನಂತರ ಕ್ಯಾಷಿಯರ್​ ಮನೆಗೆ ಹೋಗುವುದನ್ನೇ ಕಾದು ಮನೆಯವರೆಗೂ ಹಿಂಬಾಲಿಸಿದ್ದಾನೆ. ಇನ್ನೇನು ಮನೆ ಬಾಗಿಲು ತೆಗೆದು ಒಳ ಸೇರುವಷ್ಟರಲ್ಲಿ ಸುಭಾಷ್​ ಬಂದು ಕ್ಯಾಷಿಯರ್​ ಪತ್ನಿ, ಮಕ್ಕಳ ಎದುರೇ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತದೇಹವನ್ನು ಮಾಲೂರು ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀೆ ನಂತರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಮಾಲೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.