ಮೆಗ್ಗಾನ್ ಆಸ್ಪತ್ರೆಯಲ್ಲಿ ಬಾರ್ ಬೆಂಡಿಂಗ್ ಮೇಸ್ತ್ರಿ ಪ್ರಶಾಂತ್ ಗೆ ಶಸ್ತ್ರಚಿಕಿತ್ಸೆ ನೆಡೆಸಿದ ವೈದ್ಯರು. 
ಜಿಲ್ಲೆ

ಬಾರ್ ಬೆಂಡಿಂಗ್ ಮೇಸ್ತ್ರಿ ಮೇಲೆ ಮಚ್ಚಿನಿಂದ ಹಲ್ಲೆ

ನವೀನ ಬಿ.ಎಂ

ಶಿವಮೊಗ್ಗ: ನಗರದ ಹೊರವಲಯದ ಹರಿಗೆಯಲ್ಲಿ ಊಟಕ್ಕೆಂದು ತೆರಳಿದ್ದ ವ್ಯಕ್ತಿ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿದ್ದು ಗಾಯಗೊಂಡವನ ಸ್ಥಿತಿ ಗಂಭೀರವಾಗಿದೆ. ಬೀಸಿದ ಮಚ್ಚು ನೆತ್ತಿಯಲ್ಲಿಯೇ ಸಿಕ್ಕಿಕೊಂಡಿದ್ದು ಹೊರ ತೆಗೆಯಲು ವೈದ್ಯರು ಹರಸಾಹಸ ಪಟ್ಟರು.

ಬಾರ್ ಬೆಂಡಿಂಗ್ ಮೇಸ್ತ್ರಿ ಪ್ರಶಾಂತ್(40) ಮೇಲೆ ಮಚ್ಚಿನ ದಾಳಿ ನಡೆಸಲಾಗಿದೆ. ಏಳು ಜನ ಸ್ನೇಹಿತರೊಂದಿಗೆ ಪ್ರಶಾಂತ್ ಭಾನುವಾರ ರಾತ್ರಿ ಹರಿಗೆಗೆ ಊಟಕ್ಕೆ ತೆರಳಿದ್ದನು. ಈ ವೇಳೆ ಬಂದ ಅಪರಿಚಿತನೊಬ್ಬ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಗಾಯಗೊಂಡ ಪ್ರಶಾಂತ್‌ನನ್ನು ಸ್ಥಳೀಯರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರು.
ನಂತರ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪರಿಚಯಸ್ಥನಿಂದಲೇ ಬಂದ ಕರೆಯಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ತಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಮಚ್ಚನ್ನು ಸೋಮವಾರ ಮಧ್ಯಾಹ್ನ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದು ಪ್ರಶಾಂತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.