ಜಿಲ್ಲೆ

ಬಪ್ಪನಾಡು ದೇವಳದಲ್ಲಿ ಮುಷ್ಟಿ ಕಾಣಿಕೆ ಸಮರ್ಪಣೆ : ಬ್ರಹ್ಮರಥ ನಿರ್ಮಾಣ, ಕ್ಷೇತ್ರಾಭಿವೃದ್ಧಿ ಕಾರ್ಯಗಳ ಪ್ರಾರಂಭಿಕ ಹಂತ

ಸೌಮ್ಯ ಆರ್

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿಗೆ ಅರ್ಪಿಸಲಿರುವ ನೂತನ ಬ್ರಹ್ಮರಥ ನಿರ್ಮಾಣ ಹಾಗೂ ಕ್ಷೇತ್ರಾಭಿವೃದ್ಧಿ ಕಾರ್ಯಗಳ ಪ್ರಾರಂಭಿಕ ಹಂತವಾಗಿ ಭಾನುವಾರ ಬೆಳಗ್ಗೆ 9 ಗಂಟೆಗೆ ದೇವಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ನಡೆದು ಮುಷ್ಟಿ ಕಾಣಿಕೆ ಸಮರ್ಪಣೆ ನಡೆಯಿತು.

ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ಪವಿತ್ರಪಾಣಿ ಅತ್ತೂರು ಬೈಲು ವೆಂಕಟರಾಜ ಉಡುಪ, ಕ್ಷೇತ್ರದ ತಂತ್ರಿ ಶಿಬರೂರು ಗೋಪಾಲಕೃಷ್ಣ ತಂತ್ರಿ, ಅರ್ಚಕರಾದ ನರಸಿಂಹ ಭಟ್, ಶ್ರೀಪತಿ ಉಪಾದ್ಯಾಯ ಅವರಿಂದ ವಿಶೇಷ ಪ್ರಾರ್ಥನೆ ನಡೆಯಿತು.

ದೇವಸ್ಥಾನದ ಆನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಮಾಜಿ ಮೊಕ್ತೇಸರ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಅರ್ಚಕ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ ಸಸಿಹಿತ್ಲು, ವಾಮನ್ ಇಡ್ಯಾ, ಮೂಲ್ಕಿ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ಕುಡ್ವ, ಜೀರ್ಣೋದ್ಧಾರ ಸಮಿತಿ ಸುನೀಲ್ ಆಳ್ವ, ಉದ್ಯಮಿ ಅರವಿಂದ ಪೂಂಜ ಕಾರ್ನಾಡ್, ಯದು ನಾರಾಯಣಶೆಟ್ಟಿ, ಶರತ್ ನರ್ಸಪ್ಪ ಸಾಲ್ಯಾನ್, ರಾಮಚಂದ್ರ ನಾಯಕ್ ಕೊಲ್ನಾಡುಗುತ್ತು, ಸುಕುಮಾರ್ ಶೆಟ್ಟಿ, ವಕೀಲ ಚಂದ್ರಶೇಖರ ಕಾಸಪ್ಪಯ್ಯನವರ ಮನೆ, ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್, ಕಿರಣ್ ಶೆಟ್ಟಿ ಕೋಲ್ನಾಡ್ ಗುತ್ತು, ಗುರುವಪ್ಪ ಕೋಟ್ಯಾನ್, ಸುಜಿತ್ ಸಾಲ್ಯಾನ್, ಪದ್ಮನಾಭ ಪಂಬದ, ಸತೀಶ್ ಶೆಟ್ಟಿ ಪೇಟೆಮನೆ, ದಿನೇಶ್ ಹೆಗ್ಡೆ ಮಾನಂಪಾಡಿ, ಗೋಪಿನಾಥ ಪಡಂಗ, ಪುರಂದರ ಶೆಟ್ಟಿಗಾರ್, ವೆಂಕಟೇಶ್ ಹೆಬ್ಬಾರ್ ಕೊಡೆತ್ತೂರು, ಗುತ್ತಿನಾರ್ ನಿತಿನ್ ಶೆಟ್ಟಿ, ಶಶೀಂದ್ರ ಸಾಲ್ಯಾನ್, ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು, ಮೂಲ್ಕಿ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಪದ್ಮಶಾಲಿ ಸಭಾದ ಪುರಂದರ ಶೆಟ್ಟಿಗಾರ್, ಸತೀಶ್ ಭಂಡಾರಿ, ಗಂಗಾಧರ ಶೆಟ್ಟಿ ಬರ್ಕೆ ತೋಟ, ಸಾಯಿನಾಥ ಶೆಟ್ಟಿ ಮುಂಡ್ಕೂರು, ಮೂಲ್ಕಿ ವಿಜಯ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಹರಿದಾಸ ಭಟ್ ತೋಕೂರು, ಮೂಲ್ಕಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್ ಬಿ.ಎಸ್.,ದನಂಜಯ ಮಟ್ಟು, ಮಹೀಮ್ ಹೆಗ್ಡೆ, ದಯಾನಂದ ಪೂಜಾರಿ ಮಟ್ಟು, ಮನೋಹರ ಕೋಟ್ಯಾನ್, ಶಿವಶಂಕರ್, ಕಿಶೋರ್ ಶೆಟ್ಟಿ ಬಪ್ಪನಾಡು, ನಾಗೇಶ್ ಬಪ್ಪನಾಡು ಮತ್ತಿತರರು ಉಪಸ್ಥಿತರಿದ್ದರು. ಭಕ್ತರು ಉಪಸ್ಥಿತರಿದ್ದರು.

ಅ.10ರವರೆಗೆ ಅವಕಾಶ

ಮುಷ್ಟಿ ಕಾಣಿಕೆ ಸಮರ್ಪಣೆ ಆರಂಭಗೊಂಡಿದ್ದು ಅಕ್ಟೋಬರ್ 10ರವರೆಗೆ ದೇವಸ್ಥಾನದಲ್ಲಿ ದೇವರಿಗೆ ಮುಷ್ಠಿ ಕಾಣಿಕೆ ಸಲ್ಲಿಸಲು ಅವಕಾಶವಿದೆ ಎಂದು ಕ್ಷೇತ್ರದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು ತಿಳಿಸಿದ್ದಾರೆ.