ಜಿಲ್ಲೆ

ಬನುಮಯ್ಯ ಸಮುದಾಯದ ಹೆಮ್ಮೆ ; ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಸ್ವಾಮೀಜಿ ಬಣ್ಣನೆ

Tumakuru

ಮಧುಗಿರಿ : ಶೋಷಿತ, ಬಡವರು ಹಾಗೂ ತಳಸಮುದಾಯಗಳ ಏಳಿಗೆಗೆ ಶ್ರಮಿಸಿದ ವಿಶ್ವಗುರು ಬಸವಣ್ಣ, ಮಾರ್ಕ್ಸ್ ಸಾಲಿಗೆ ಡಿ.ಬನುಮಯ್ಯ ಸೇರುತ್ತಾರೆ. ಇವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕಿದೆ ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಸ್ವಾಮೀಜಿ ಕರೆ ನೀಡಿದರು.

ಪಟ್ಟಣದ ಕುಂಚಿಟಿಗ ಒಕ್ಕಲಿಗ ಸಮುದಾಯ ಭವನದಲ್ಲಿ ಡಿ.ಬನುಮಯ್ಯ ಜಯಂತಿ ಆಚರಣಾ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ರಾವ್ ಬಹದ್ದೂರ್ ಧರ್ಮ ಪ್ರಕಾಶ್ ಡಿ.ಬನುಮಯ್ಯ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮೈಸೂರಿನಲ್ಲಿ ಮಹಾತ್ಮ ಗಾಂಧೀಜಿ ಅವರು ಹರಿಜನ ನಿಧಿ ಸಂಗ್ರಹ ಕಾರ್ಯಕ್ಕೆ ಬನುಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಸತ್ಯಾಗ್ರಹದ ವೇಳೆ ಚಳವಳಿಯ ರೂಪುರೇಷೆಗಳ ಬಗ್ಗೆ ಗಾಂಧೀಜಿ ಅವರು ಬನುಮಯ್ಯ ಅವರ ಬಳಿ ಚರ್ಚಿಸಿದ್ದರು. ಶಿಕ್ಷಣ ಸಂಸ್ಥೆಗಳನ್ನು ತೆರೆದು ಬಡಮಕ್ಕಳಿಗೆ ಶಿಕ್ಷಣ ನೀಡಿದ ಬನುಮಯ್ಯ ಸಮುದಾಯದ ಹೆಮ್ಮೆ ಎಂದರು.

ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ತಾಲೂಕಿನವರಾದ ಬನುಮಯ್ಯ ಸಾಮಾನ್ಯ ಕುಟುಂಬದಿಂದ ಬಂದವರು. ವ್ಯಾಪಾರದ ದೃಷ್ಟಿಯಿಂದ ಮೈಸೂರಿಗೆ ತೆರಳಿ ಹಳ್ಳಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೂರದೃಷ್ಟಿಯಿಂದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು ಎಂದು ಸ್ಮರಿಸಿದರು.

ನಾವು ಗೆದ್ದರಷ್ಟೇ ಕೆರೆಗಳಿಗೆ ನೀರು: ಎತ್ತಿನಹೊಳೆ ಕಾಮಗಾರಿ ವಿಳಂಬದಿಂದಾಗಿ ಕೆರೆಗಳಿಗೆ ನೀರು ಬರದಂತಾಗಿದೆ. ಜಿಲ್ಲೆಯಲ್ಲಿ ನಾನು, ಪರಮೇಶ್ವರ ಮತ್ತು ಜಯಚಂದ್ರ ಗೆದ್ದರಷ್ಟೇ ಎತ್ತಿನಹೊಳೆ ಕಾಮಗಾರಿಗೆ ವೇಗ ದೊರೆತು ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ 7 ಕೆರೆಗಳೂ ಸೇರಿ 54 ಕೆರೆಗಳು ಮತ್ತು ಕೊರಟಗೆರೆಯ 34 ಕೆರೆಗಳಿಗೆ ನೀರು ಹರಿಯಲಿದೆ ಎಂದು ಕೆ.ಎನ್.ರಾಜಣ್ಣ ಹೇಳಿದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ರಾಜ್ಯದಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಗೊಳಿಸುವಲ್ಲಿ ಬಿಜೆಪಿ ಸರ್ಕಾರ ಹಿಂದುಳಿದಿದೆ. ಮೇಕೆದಾಟು ಯೋಜನೆ ಜಾರಿಯಾದರೆ ತುಮಕೂರು ಜಿಲ್ಲೆಗೆ ಹೆಚ್ಚು ಅನುಕೂಲವಾಗುವುದು. ಈ ಯೋಜನೆಯಿಂದ ಜಿಲ್ಲೆ ನೀರಾವರಿ ವಿಚಾರದಲ್ಲಿ ಮಂಡ್ಯ ಜಿಲ್ಲೆಯನ್ನು ಮೀರಿಸುತ್ತದೆ ಎಂದರು.

ಡಾ.ವಸಂತ ಕುಮಾರ ತಿಮಕಾಪುರ, ಗುಟ್ಟೆ ರಮೇಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಸುವರ್ಣಮ್ಮ, ಪುರಸಭೆ ಸದಸ್ಯ ಲಾಲಾಪೇಟೆ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್.ರಾಜಗೋಪಾಲ್, ತಾಪಂ ಮಾಜಿ ಅಧ್ಯಕ್ಷರಾದ ಇಂದಿರಾ, ಕೆ.ಮಹಲಿಂಗಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಟಿ.ಗೋವಿಂದಯ್ಯ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಮುಖಂಡ ಆದಿ ನಾರಾಯಣ ರೆಡ್ಡಿ ಇತರರಿದ್ದರು.

ಕ್ಷಮೆ ಕೇಳಿದ ರಾಜಣ್ಣ : ಸಮಾಜದಲ್ಲಿನ ಬಡವರು, ರೈತರು ಹಾಗೂ ತಳ ಸಮುದಾಯಗಳಿಗೆ ಸಹಾಯ ಮಾಡಿದಾಗ ಅವರು ನೀಡುವ ಆಶೀರ್ವಾದದಲ್ಲಿ ನಾನು ದೇವರನ್ನು ನೋಡಿದ್ದೇನೆ. ನನಗೆ ಅನುಕೂಲ ಮಾಡಿಕೊಡಿ ಎಂದು ನನ್ನ ಬಳಿಗೆ ಬಂದ ಎಲ್ಲ ಬಡವರಿಗೂ ಕೈಲಾದ ಸಹಾಯ ಮಾಡಿದ್ದೇನೆ. ನನ್ನದು ಬಡವರ ಜಾತಿ. ನನ್ನ ಬಳಿ ಹಣ ಬಲವ್ಲಿ. ನನ್ನ ಶ್ರಮವೇ ನನ್ನ ಬಂಡವಾಳ. ನನಗೆ ತಿಳಿಯದೆ ಯಾರಿಗಾದರೂ ನೋವುಂಟು ಮಾಡಿದರೆ ಕ್ಷಮೆ ಇರಲಿ ಎಂದು ಮಾಜಿ ಶಾಸಕ ರಾಜಣ್ಣ ಹೇಳಿದರು.

ಅಭಿವೃದ್ಧಿ ದೃಷ್ಟಿಯಲ್ಲಿ ಪರಮೇಶ್ವರ, ಜಯಚಂದ್ರ ಮತ್ತು ರಾಜಣ್ಣ ಜಿಲ್ಲೆಯ ಮೂರು ಮುತ್ತುಗಳು. ಕೆ.ಎನ್.ರಾಜಣ್ಣ ಅವರ ಮಾತು ಕಠಿಣವಾದರೂ ಹೃದಯ ಶ್ರೆಮಂತಿಕೆ ಇದೆ. ಡಿಸಿಸಿ ಬ್ಯಾಂಕಿನಲ್ಲಿ ಸಮುದಾಯದ ಐದು ಜನರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡುವುದರ ಜತೆಗೆ 20 ಜನರಿಗೆ ಬ್ಯಾಂಕಿನಲ್ಲಿ ಉದ್ಯೋಗ ನೀಡಿದ್ದು, ಇವರ ಅಭಿವೃದ್ಧಿ ಕೆಲಸಗಳು ಹೀಗೆ ಮುಂದುವರಿಯಬೇಕು. ಶ್ರೀ ಶಾಂತವೀರ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನ ಮಠ ಕುಂಚಿಟಿಗರು ಕತ್ತಿ ಮೇಲೆ ನಡೆದಷ್ಟೇ ಒಗ್ಗಟ್ಟು ಪ್ರದರ್ಶಿಸಿ, ಡಿ.ಬನುಮಯ್ಯ ಅವರಿಗೆ ಗೌರವ ತರುವ ಕೆಲಸ ಮಾಡಬೇಕು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರು ನಮ್ಮ ಸಮುದಾಯದ ವಿದ್ಯಾವಂತರು, ರೈತರನ್ನು ಗುರುತಿಸಿ ಉದ್ಯೋಗ, ಸಾಲ ಸೌಲಭ್ಯದ ಜತೆಗೆ ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದು, ಅಂಥವರ ಜತೆ ನಮ್ಮ ಸಮುದಾಯ ನ್ಲಿಬೇಕು. ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಸಂಸದ