ಜಿಲ್ಲೆ

ಬಂಟ್ವಾಳದಲ್ಲಿ ಆವರಣ ಗೋಡೆ ಕುಸಿದು ಮನೆ ಜಖಂ

Dakshina Kannada

ಬಂಟ್ವಾಳ: ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಬಂಟ್ವಾಳದ ಕಲ್ಲಗುಡ್ಡೆ ಎಂಬಲ್ಲಿ ಮಣ್ಣು ಸಹಿತ ಆವರಣ ಗೋಡೆ ಮನೆಯೊಂದರ ಮೇಲೆ ಕುಸಿದು ಮನೆ ಮಂದಿ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಘಟನೆಯಲ್ಲಿ ಮನೆ ಸಂಪೂರ್ಣ ಜಖಂಗೊಂಡಿದೆ.

ಸೋಮನಾಥ ಕುಲಾಲ್ ಎಂಬುವರಿಗೆ ಸೇರಿದ ಮನೆ ಶುಕ್ರವಾರ ತಡರಾತ್ರಿ 12.30ರ ವೇಳೆಗೆ ಮನೆ ಪಕ್ಕದ ತಡೆಗೋಡೆ ಕುಸಿದು ಮನೆಯ ಗೋಡೆಗಳನ್ನು ಸೀಳಿ ಒಳ ಬಂದಿದೆ. ಮನೆಮಂದಿ ಪಕ್ಕದಲ್ಲೇ ಮಲ್ಲಗಿದ್ದರೂ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆ ಸಂಪೂರ್ಣ ಹಾನಿಗೀಡಾಗಿದ್ದು, ಗೋಡೆಗಳು ಕುಸಿದು ವಾಲಿ ನಿಂತಿವೆ. ಮನೆಯಲ್ಲಿದ್ದ ಫ್ಯಾನ್ ಮತ್ತಿತರ ಇಲೆಕ್ಟ್ರಾನಿಕ್ಸ್ ವಸ್ತುಗಳು, ಮನೆಯ ಹೊರ ಭಾಗದಲ್ಲಿದ್ದ ದ್ವಿಚಕ್ರ ವಾಹನಕ್ಕೂ ಹಾನಿಯಾಗಿದೆ. ಸ್ಥಳಕ್ಕೆ ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಪುರಸಭಾ ಸದಸ್ಯ ಗಂಗಾಧರ್ ಪೂಜಾರಿ, ಪ್ರಮುಖರಾದ ರಮನಾಥ ಪೈ ಮೊದಲಾದವರು ಭೇಟಿ ನೀಡಿದ್ದಾರೆ.