ಸಿ.ರೋಡ್‌ನಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘದ ಸಭೆ ನಡೆಯಿತು. ತಹಸೀಲ್ದಾರ್ ಡಿ.ಅರ್ಚನಾ ಭಟ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ಮೊದಲಾದವರಿದ್ದರು. 
ಜಿಲ್ಲೆ

ನಾರಿಯರ ನಾಯಕತ್ವ : ಬಂಟ್ವಾಳ ತಹಸೀಲ್ದಾರ್ ಡಿ.ಅರ್ಚನಾ ಭಟ್ ಶ್ಲಾಘನೆ

ಬಂಟ್ವಾಳ: ಮಹಿಳೆಯರು ನಾಯಕತ್ವ ಬೆಳೆಸಿ ಮನೆಯಲ್ಲಿ ಯಜಮಾನಿಯಾಗಿ, ಸಮಾಜದ ಮುಖ್ಯ ವಾಹಿನಿಗೆ ಬಂದು ಆಡಳಿತ ವ್ಯವಸ್ಥೆಯಲ್ಲಿ ನಾಯಕರಾಗಿ ಬೆಳೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ಬಂಟ್ವಾಳ ತಹಸೀಲ್ದಾರ್ ಡಿ.ಅರ್ಚನಾ ಭಟ್ ಹೇಳಿದರು.

ಬಿ.ಸಿ.ರೋಡಿನ ಸ್ತ್ರೀಶಕ್ತಿ ಭವನದಲ್ಲಿ ಗುರುವಾರ ನಡೆದ ಬಂಟ್ವಾಳ ಹಾಗೂ ಉಳ್ಳಾಲ ಸುಗ್ರಾಮ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಂಘದ ಅಧ್ಯಕ್ಷೆ ಶಕೀಲ ಕೃಷ್ಣಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ವಲಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ಮಾತನಾಡಿ, ಪ್ರತಿ ಗ್ರಾಪಂ ಬಾಲ್ಯವಿವಾಹಮುಕ್ತ, ಅಪೌಷ್ಟಿಕತೆಮುಕ್ತ, ಬಾಲ ಕಾರ್ಮಿಕ ಪದ್ಧತಿಮುಕ್ತವಾಗಬೇಕು. ಮಕ್ಕಳ ಹಾಗೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಸಂಪೂರ್ಣ ತಡೆಗಟ್ಟಲು ಗ್ರಾಮಮಟ್ಟದಲ್ಲಿ ಗ್ರಾಪಂ ಮಹಿಳಾ ಸದಸ್ಯರು ಕಟ್ಟಿಬದ್ಧರಾಗಬೇಕು. ಗ್ರಾಮಮಟ್ಟದಲ್ಲಿ ಕುಂದು ಕೊರತೆಗಳು ಎದುರಾದರೆ ನೇರವಾಗಿ ಇಲಾಖೆಯ ಸಹಕಾರ ಪಡೆದುಕೊಳ್ಳಬೇಕು ಎಂದರು.

ಬಂಟ್ವಾಳ ಹಾಗೂ ಉಳ್ಳಾಲ ತಾಲೂಕಿನ ಆಯ್ದ ಗ್ರಾಮ ಪಂಚಾಯಿತಿಗಳ ಚುನಾಯಿತ ಮಹಿಳಾ ಸದಸ್ಯರು, ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ ಭಾಗವಹಿಸಿದ್ದರು.

ಸುಗ್ರಾಮ ಸಂಯೋಜಕ ಚೇತನ್ ಕಾರ್ಯಕ್ರಮ ಸಂಯೋಜಿಸಿದರು. ಕ್ಷೇತ್ರ ಸಂಘಟಕಿ ಕಾವೇರಿ ಸಹಕರಿಸಿದರು. ಸುಗ್ರಾಮ ಸಂಘದ ಕಾರ್ಯದರ್ಶಿ ವಿಜಯ ವಂದಿಸಿದರು.