ಬಂಟಕಲ್ಲು ಗಣೇಶೋತ್ಸವದಲ್ಲಿ ಹಲವರನ್ನು ಸನ್ಮಾನಿಸಲಾಯಿತು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅನಂತ ಮೂಡಿತ್ತಾಯ ಮೊದಲಾದವರಿದ್ದರು 
ಜಿಲ್ಲೆ

ಬಂಟಕಲ್ಲು ಗಣೇಶೋತ್ಸವದಲ್ಲಿ ಸನ್ಮಾನ

ಇಂದಿರಾ ಎನ್ ಕೆ

ಶಿರ್ವ: ಬಂಟಕಲ್ಲು 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಏರ್ಪಡಿಸಿದ ಧಾರ್ಮಿಕ ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಸತ್ಯಸಾಯಿ ಪ್ರಸಾದ್, ಪ್ರಗತಿಪರ ಕೃಷಿಕ ರಘುರಾಮ ನಾಯಕ್ ಸಡಂಬೈಲು, ಯಕ್ಷಗಾನ ಸಂಘಟಕ ರವಿ ಆಚಾರ್ಯ, ವ್ಯಾಪಾರಿ ಜಯಕರ ನಾಯಕ್ ಪಾಲಮೆ ಅವರನ್ನು ಸನ್ಮಾನಿಸಲಾಯಿತು.ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ನಿವೃತ್ತ ಪ್ರಾಂಶುಪಾಲ ಅನಂತ ಮೂಡಿತ್ತಾಯ ಶಿರ್ವ, ಪತ್ರಕರ್ತ ವಾಲ್ಟರ್ ನಂದಳಿಕೆ ಶುಭ ಹಾರೈಸಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್, ಗೌರವಾಧ್ಯಕ್ಷ ಶಂಕರ ನಾಯಕ್, ಕಾರ್ಯದರ್ಶಿ ದಿನೇಶ್ ದೇವಾಡಿಗ, ಸಾಂಸ್ಕೃತಿಕ ಕಾರ್ಯದರ್ಶಿ ಮಾಧವ ಆಚಾರ್ಯ, ಉಪಾಧ್ಯಕ್ಷ ನಿತ್ಯಾನಂದ ಆಚಾರ್ಯ ಉಪಸ್ಥಿತರಿದ್ದರು.