ಬನ್ನೂರು ಪುರಸಭೆಯ ಸಿಡಿಎಸ್ ಭವನದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಕೃಷ್ಣೇಗೌಡ ಆಯವ್ಯಯ ಮಂಡಿಸಿದರು. ನಾಗರತ್ನಾ ಪ್ರಭಾಕರ್, ಆರ್.ಹೇಮಂತ್‌ರಾಜ್ ಇದ್ದರು. 
ಜಿಲ್ಲೆ

ಬನ್ನೂರು ಪುರಸಭೆಯಲ್ಲಿ 89 ಲಕ್ಷ ರೂ. ಉಳಿತಾಯ ಬಜೆಟ್

ತಿ.ನರಸೀಪುರ; ತಾಲೂಕಿನ ಬನ್ನೂರು ಪುರಸಭೆ ಅಧ್ಯಕ್ಷ ಕೃಷ್ಣೇಗೌಡ  2025-26ನೇ ಸಾಲಿಗೆ 89,99,198 ರೂ.ಗಳ ಉಳಿತಾಯ ಬಜೆಟ್ ಮಂಡಿಸಿದರು.

ಪುರಸಭೆಯ ಸಿಡಿಎಸ್ ಭವನದಲ್ಲಿ ಆಯೋಜಿಸಿದ್ದ ಆಯವ್ಯಯ ಮಂಡನೆ ಸಭೆಯಲ್ಲಿ ಮಾತನಾಡಿದ ಅವರು, ಪ್ರಮುಖ ಆದಾಯಗಳಲ್ಲಿ (ಪುರಸಭೆ ಸ್ವಂತ ಆದಾಯ) ಆಸ್ತಿ ತೆರಿಗೆ ಮತ್ತು ದಂಡ 1.13 ಕೋಟಿ ರೂ., ಮಳಿಗೆಗಳ ಬಾಡಿಗೆ ಮತ್ತು ಶೌಚಗೃಹ ಹರಾಜು ಬಾಡಿಗೆ 7 ಲಕ್ಷ ರೂ., ಕಟ್ಟಡ ಪರವಾನಗಿ ಶುಲ್ಕ 17.50 ಲಕ್ಷ ರೂ., ಅಭಿವೃದ್ಧಿ, ಸುಧಾರಣೆ ಹಾಗೂ ದಂಡ 6 ಲಕ್ಷ ರೂ., ಉದ್ದಿಮೆ ಪರವಾನಗಿ ಮತ್ತು ಇತರ ಪರವಾನಗಿ ಶುಲ್ಕ 5 ಲಕ್ಷ ರೂ., ನೀರು, ನೀರು ಸರಬರಾಜು ಸಂಪರ್ಕ, ಒಳಚರಂಡಿ ಸಂಪರ್ಕದಿಂದ 41 ಲಕ್ಷ ರೂ., ಘನತಾಜ್ಯ ನಿರ್ವಹಣೆಯಿಂದ 22 ಲಕ್ಷ ರೂ., ಖಾತೆ ಬದಲಾವಣೆಯಿಂದ 11 ಲಕ್ಷ ರೂ., ನೆಲಬಾಡಿಗೆ, ಶುದ್ಧ ಕುಡಿಯುವ ನೀರಿನ ಘಟಕ, ಮಾರುಕಟ್ಟೆ ಹರಾಜು 9 ಲಕ್ಷ ರೂ., ಬ್ಯಾಂಕ ಖಾತೆಗಳಿಂದ ಬರುವ ಬಡ್ಡಿ 15 ಲಕ್ಷ ರೂ. ಹಾಗೂ ಇತರ ಶುಲ್ಕ 31.15 ಲಕ್ಷ ರೂ. ನಿರೀಕ್ಷಿಸಲಾಗಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಸ್‌ಎಫ್‌ಸಿ ವೇತನ ಅನುದಾನ 5 ಕೋಟಿ ರೂ., ಎಸ್‌ಎಫ್‌ಸಿ ವಿದ್ಯುತ್ ಅನುದಾನ, ನೀರು ಸರಬರಾಜು 1.74 ಕೋಟಿ ರೂ., ಬೀದಿ ದೀಪ 76 ಲಕ್ಷ ರೂ., ಮುಕ್ತನಿಧಿ ಅನುದಾನ 19 ಲಕ್ಷ ರೂ., ನಲ್ಮ್ ಅನುದಾನ 15 ಲಕ್ಷ ರೂ., ಸ್ವಚ್ಛ ಭಾರತ್ ಮಿಷನ್ ಅನುದಾನ 65 ಲಕ್ಷ ರೂ., 15ನೇ ಹಣಕಾಸು ಅನುದಾನ 1.22 ಕೋಟಿ ರೂ., ಕುಡಿಯುವ ನೀರಿಗೆ 10 ಲಕ್ಷ ರೂ., ಶಾಸಕರ ಪ್ರದೇಶಾಭಿವೃದ್ಧಿಯಿಂದ 5 ಲಕ್ಷ ರೂ., ಪೌರಕಾರ್ಮಿಕ ಗೃಹಭಾಗ್ಯದಿಂದ 15.00 ಲಕ್ಷ ರೂ.ಹಾಗೂ ವಿಶೇಷ ಅನುದಾನವೆಂದು 6.50 ಕೋಟಿ ರೂ. ಬಂದಿದೆ ಎಂದು ಮಾಹಿತಿ ನೀಡಿದರು.

ರಸ್ತೆ, ಪಾದಚಾರಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗಾಗಿ 10.85 ಕೋಟಿ ರೂ., ಬೀದಿ ದೀಪ ಕಾಮಗಾರಿಗಾಗಿ 20 ಲಕ್ಷ ರೂ., ಮಳೆ ನೀರು ಚರಂಡಿ ಕಾಮಗಾರಿಗಾಗಿ 20 ಲಕ್ಷ ರೂ., ಸಾರ್ವಜನಿಕ ಶೌಚಗೃಹಗಳ ಕಟ್ಟಡಗಳ ಕಾಮಗಾರಿಗಾಗಿ 5 ಲಕ್ಷ ರೂ., ನೈರ್ಮಲ್ಯ ವಾಹನಗಳ ಖರೀದಿ/ಸಲಕರಣೆ ಖರೀದಿಗಾಗಿ 70.50 ಲಕ್ಷ ರೂ., ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ 70 ಲಕ್ಷ ರೂ., ಘನ ತ್ಯಾಜ್ಯವಸ್ತು ನಿರ್ವಹಣೆ ಘಟಕ ಅಭಿವೃದ್ಧಿ ಕಾಮಗಾರಿಗಾಗಿ 32.50 ಲಕ್ಷ ರೂ., ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ., ನೀರು ಸರಬರಾಜು ಅಭಿವೃದ್ಧಿ ಮತ್ತು ಯಂತ್ರೋಪಕರಣಗಳಿಗೆ 95 ಲಕ್ಷ ರೂ., ಪೌರಕಾರ್ಮಿಕರ ವಿಶ್ರಾಂತಿ ಗೃಹ, ಇಂದಿರಾ ಕ್ಯಾಂಟೀನ್‌ಗೆ ಮೂಲ ಸೌಲಭ್ಯ, ಇ-ಆಫೀಸ್ ಅಭಿವೃದ್ಧಿ ಹಾಗೂ ಕಚೇರಿ ಮೂಲ ಸೌಲಭ್ಯಗಳಿಗೆ 95 ಲಕ್ಷ ರೂ., ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ರೂ., ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ 10 ಲಕ್ಷ ರೂ., ಪರಿಶಿಷ್ಟ ಜಾತಿ-ಪಂಗಡ, ಆರ್ಥಿಕ ಹಿಂದುಳಿದ ವರ್ಗ, ಅಂಗವಿಕಲರ ಅಭಿವೃದ್ಧಿಗಾಗಿ 21 ಲಕ್ಷ ರೂ., ಭತ್ಯೆ ಪಾವತಿಗಾಗಿ 5 ಕೋಟಿ ರೂ.ಸೇರಿದಂತೆ ಇತರ ಖರ್ಚು ವೆಚ್ಚಗಳನ್ನು ಆಯ-ವ್ಯಯದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರಲ್ಲದೆ ಅನುಮೋದನೆ ನೀಡುವಂತೆ ಮನವಿ ಮಾಡಿದರು.

ಮುಖ್ಯಾಧಿಕಾರಿ ಆರ್.ಹೇಮಂತರಾಜ್ ಮಾತನಾಡಿ, 2025-26ನೇ ಸಾಲಿಗೆ ಎಲ್ಲ ಮೂಲಗಳಿಂದ ಗಳಿಸಬಹುದಾದ ಆದಾಯದಲ್ಲಿ ವೆಚ್ಚ ಮಾಡಬಹುದಾದ ಮೊತ್ತಗಳನ್ನು ಕಳೆದು ಉಳಿತಾಯ ಮಾಡಲಾಗಿದೆ ಎಂದರು.

ಪುರಸಭೆಗೆ ಸರ್ಕಾರದಿಂದ ನಾಮ ನಿರ್ದೇಶನಗೊಂಡ ಸದಸ್ಯರಾದ ಆರ್.ಶಿವಣ್ಣ, ಬಿ.ಎಂ.ಮಹೇಶ್, ಎನ್.ನಾಗರಾಜಚಾರ್ ಹಾಗೂ ಅಸಸ್ ಅಲಿ ಅವರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷೆ ನಾಗರತ್ನಾ ಪ್ರಭಾಕರ್, ಸದಸ್ಯರಾದ ಎಸ್.ಭಾಗ್ಯಾ, ಎಂ.ಕೆ.ಮಹೇಶ್, ಬಿ.ಕೆ.ಆನಂದ್, ಎಂ. ಆರ್.ಸೌಮ್ಯಾರಾಣಿ, ನಂಜುಂಡಸ್ವಾಮಿ, ಬಿ.ಆರ್.ಶ್ರೀನಿವಾಸ್, ಅನಂತಮೂರ್ತಿ, ಶೋಭಾ ಸತೀಶ್, ದಿವ್ಯಾ, ಪೈಲ್ವಾನ್ ಚಂದ್ರು, ಫಿರ್ದೋಸ್, ಬಿ.ಎಸ್. ಲೋಕಂಬಿಕಾ ಶಿವಮೂರ್ತಿ, ಪುಷ್ಪವತಿ, ಮೂರ್ತಿ, ಶಿವಣ್ಣ, ಚೆಲುವರಾಜು, ಸಿ.ಎಸ್.ವಿಜಯ ಕುಮಾರ್, ಸಿ.ಸಿ.ಸುರೇಶ್ ಇತರರಿದ್ದರು.