ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು ಕೆರೆ ತುಂಬಿ ಹರಿದ ಹಿನ್ನೆಲೆ ಶಾಸಕ ಕೃಷ್ಣನಾಯ್ಕ ಬಾಗಿನ ಅರ್ಪಿಸಿದರು. ಜಿಪಂ ಮಾಜಿ ಸದಸ್ಯ ಶಾನಭೋಗರ ಗುರುಸಿದ್ದಪ್ಪ, ತಾಪಂ ಮಾಜಿ ಅಧ್ಯಕ್ಷ ಸಿದ್ದಲಿಂಗನಗೌಡ, ಮುಖಂಡರಾದ ಲಿಂಗರಾಜು, ಮಹಾದೇವಪ್ಪ, ಡಾ.ಬಾಲಪ್ಪ, ಮುದೇಗೌಡ್ರು ವಿರೂಪಾಕ್ಷಪ್ಪ, ಮುದೇಗೌಡ್ರು ಉಮೇಶ ಇತರರಿದ್ದರು. 
ಜಿಲ್ಲೆ

ಬನ್ನಿಕಲ್ಲು ಕೆರೆಗೆ ಬಾಗಿನ

ರುದ್ರಪ್ಪ ವಾಲಿ

ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ ಎರಡುದಿನಗಳಿಂದ ಸುರಿಯುತ್ತಿರುವ ಮಳೆಗೆ ಬನ್ನಿಕಲ್ಲು ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಶನಿವಾರ ಕೋಡಿ ಬಿದ್ದ ಕಾರಣ ರೈತರು ಹರ್ಷಗೊಂಡಿದ್ದಾರೆ.

ಕೆರೆ ಕೋಡಿಬಿದ್ದ ಹಿನ್ನೆಲೆಯಲ್ಲಿ ಶಾಸಕ ಕೃಷ್ಣನಾಯ್ಕ ತುಂಬಿ ಹರಿಯುತ್ತಿರುವ ಗಂಗೆಗೆ ಬಾಗಿನ ಅರ್ಪಿಸಿದರು. ಬಳಿಕ ಮಾತನಾಡಿ, ಗ್ರಾಮದವರ ಬೇಡಿಕೆಯಂತೆ ಕೆರೆಯತ್ತ ಸಾರ್ವಜನಿಕರು ಓಡಾಡಲು ರಸ್ತೆ ಅಭಿವೃದ್ಧಿ ಪಡಿಸಲಾಗುವುದು, ಕೆರೆಯನ್ನು ಇನ್ನಷ್ಟು ಭದ್ರವಾಗಿರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಖಂಡರಾದ ಬಡಿಗೇರ್ ಸಿದ್ದಪ್ಪ, ಮಂಗನಳ್ಳಿ ವೀರನಗೌಡ, ಶ್ರೀಪತಿಯಪ್ಪ, ಬಿ.ಎಚ್.ಎಂ.ಸಿದ್ದಲಿಂಗಸ್ವಾಮಿ, ಬಿ.ಎಚ್.ಎಂ.ಚನ್ನಬಸಯ್ಯ, ಕಳ್ಳಳ್ಳಿ ಕೊಟ್ರೇಶಪ್ಪ, ಜಿ.ಗೋವಿಂದಪ್ಪ, ಎಸ್.ರಾಜಪ್ಪ, ಕಾಡ್ಲ ದುರುಗಪ್ಪ ಇತರರು ಇದ್ದರು.