ಜಿಲ್ಲೆ

Bannerghatta ಸಫಾರಿ ವಾಹನದ ಮೇಲೆ ಎಗರಿದ ಚಿರತೆ ! ಪ್ರವಾಸಿಗರು ಶಾಕ್​ ವಿಡಿಯೋ ವೈರಲ್​

Webdesk - Savina Naik

ಬೆಂಗಳೂರು:ಬನ್ನೇರುಘಟ್ಟ ( Bannerghatta ) ಜೈವಿಕ ಉದ್ಯಾನವನದಲ್ಲಿ ಎಂದಿನಂತೆ ನಿನ್ನೆ ಕೂಡಾ ಪ್ರವಾಸಿಗರು ಸಫಾರಿವಾಹನದ ಮೇಲೆರಿ ಕಾನನ ನಡುವೆ ವನ್ಯಜೀವಿಗಳಾದ ಆನೆ, ಜಿಂಕೆ, ಕಾಡೆಮ್ಮೆ,  ಸಿಂಹ ಸೇರಿದಂತೆ ಅಪರೂಪದ ವನ್ಯಜೀವಿಗಳನ್ನು ಕಣ್ತುಂಬಿಕೊಂಡು ಮುಂದೆ ಸಾಗಿದ್ದರು. ಆದರೆ ಮಾರ್ಗ ಮಧ್ಯೆ ಪ್ರವಾಸಿಗರಿಗೆ ಚಿರತೆ ಎದುರಾಗಿದೆ.

ಚಿರತೆಯನ್ನು ಸಮೀಪದಿಂದ ನೋಡಲು ಸಫಾರಿ ವಾಹನ ನಿಲ್ಲಿಸಿದ್ದಾರೆ. ಚಿರತೆ ವಾಹನದ ಮೇಲೆ ದಾಳಿ ಮಾಡಿದೆ. ಈ ವೇಳೆ ವಾಹನದಲ್ಲಿದ್ದ ಪ್ರವಾಸಿಗರ ಜೀವ ಕೈಗೆ ಬಂದಂತಾಗಿದೆ. ಈ ಘಟನೆ ನಡೆದಿರುವುದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ( Bannerghatta ) ಜೈವಿಕ ಉದ್ಯಾನವನದ ಚಿರತೆ ಸಫಾರಿಯಲ್ಲಿ.

ಚಿರತೆ ಸಫಾರಿವಾಹನದ ಮೇಲೆ ದಾಳಿ ಮಾಡುತ್ತಿರುವುದುನ್ನು ಹಿಂದಿನ ವಾಹನದಲ್ಲಿದ್ದ ಪ್ರವಾಸಿಗರು ಸೆರೆ ಹಿಡಿದಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.