ಸಿಂಧನೂರು: ನಗರದಲ್ಲಿ ಬ್ಯಾನರ್, ಬಂಟಿಂಗ್, ಕಟೌಟ್, ಸ್ಟಿಕ್ಕರ್, ಧ್ವಜಗಳ ಅಳವಡಿಕೆಗೆ ಕಡ್ಡಾಯವಾಗಿ ನಗರಸಭೆ ಪರವಾನಗಿ ಪಡೆಯಬೇಕೆಂದು ಪೌರಾಯುಕ್ತ ಮಂಜುನಾಥ ಗುಂಡೂರು ತಿಳಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧ ನಗರದಲ್ಲಿ ಕಾನೂನುಬಾಹಿರವಾಗಿ ವಿವಿಧ ರಾಜಕೀಯ ಪಕ್ಷಗಳ ಬ್ಯಾನರ್, ಸ್ಟಿಕ್ಕರ್, ಕಟೌಟ್, ಧ್ವಜಗಳನ್ನು ಅಂಟಿಸದಂತೆ ಕ್ರಮವಹಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಹೀಗಾಗಿ ನಗರಸಭೆಗೆ ಶುಲ್ಕ ಪಾವತಿಸಿ ಪರವಾನಗಿ ಪಡೆಯಬೇಕು. ಅನಧಿಕೃತವಾಗಿ ಅಳವಡಿಸಿದ್ದಲ್ಲಿ ಸಂಬಂಧಿಸಿದವರಿಗೆ ದಂಡ ವಿಧಿಸಲಾಗುವುದು. ಪ್ರಚಾರಕರು, ಮುದ್ರಕರು ಹಾಗೂ ಅಳವಡಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.