ನಗರದ ಬಣ್ಣದ ಮನೆ ಸಾಂಸತಿಕ ವೇದಿಕೆ ಆಶ್ರಯದಲ್ಲಿ ನಗರದ "ಆರ್ಟ ಅಡ್ಡಾ' ಸಭಾಂಗಣದಲ್ಲಿ ಶನಿವಾರ ರಾಜ್ಯ ಮಟ್ಟದ ಚಿಣ್ಣರ ಚಿತ್ರ ಚಿತ್ತಾರ ಚಿತ್ರಕಲೋತ್ಸವದ ಮೆಲಕು ಕಾರ್ಯಕ್ರಮ ಜರುಗಿತು. ಶಿವಪ್ಪ ಕುರಿ, ಬಾಹುಬಲಿ ಜೈನರ್​, ಶರಣಪ್ಪ ನಾಗರಳ್ಳಿ, ವಿಜಯ ಕಿರೇಸೂರ, ಶಾಂತಕುಮಾರ ಭಜಂತ್ರಿ ಇತರರು ಇದ್ದರು. 
ಜಿಲ್ಲೆ

ರಾಷ್ಟ್ರಮಟ್ಟದ ಚಿತ್ರಕಲೋತ್ಸವ ಗದುಗಿನ ಹೆಮ್ಮೆ: ಶಿವಪ್ಪ ಕುರಿ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಗದಗ
ಕಲೆ, ಸಾಹಿತ್ಯ, ಸಂಸತಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ ಕಳೆದ ವರ್ಷ ನಗರದಲ್ಲಿ ರಾಜ್ಯ ಮಟ್ಟದ ಚಿಣ್ಣರ ಚಿತ್ರ ಚಿತ್ತಾರ ಚಿತ್ರಕಲೋತ್ಸವದ ಮೂಲಕ 40ಸಾವಿರಕ್ಕೂ ಅಧಿಕ ವಿದ್ಯಾಥಿರ್ಗಳಿಗೆ ಕಲೆಯ ಬಗೆಗೆ ಆಸಕ್ತಿ ಮೂಡಿಸುವ ಕಾರ್ಯ ನಡೆದಿತ್ತು, ಈ ಬಾರಿ ರಾಷ್ಟ್ರಮಟ್ಟದ ಚಿತ್ರಕಲೋತ್ಸವದ ಮೂಲಕ ಜಿಲ್ಲೆ ಮತ್ತೊಂದು ದಾಖಲೆ ಕಾರ್ಯಕ್ರಮಕ್ಕೆ ಸಾಯಾಗಲಿ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯ, ಪ್ರಾಚಾರ್ಯ ಡಾ. ಶಿವಪ್ಪ ಕುರಿ ಹೇಳಿದರು.
ಬಣ್ಣದ ಮನೆ ಸಾಂಸತಿಕ ವೇದಿಕೆ ಆಶ್ರಯದಲ್ಲಿ ನಗರದ ಹಾಕಿ ಮೈದಾನದ ಬಳಿ ಇರುವ "ಆರ್ಟ ಅಡ್ಡಾ' ಸಭಾಂಗಣದಲ್ಲಿ ಶನಿವಾರ ನಡೆದ 2022&23ನೇ ಸಾಲಿನ ರಾಜ್ಯ ಮಟ್ಟದ ಚಿಣ್ಣರ ಚಿತ್ರ ಚಿತ್ತಾರ ಚಿತ್ರಕಲೋತ್ಸವದ ಮೆಲಕು ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಮ್ಮೇಳನ ಆಯೋಜನೆ ಮೂಲಕ ಗಮನ ಸೆಳೆದ ಗದಗ ಜಿಲ್ಲೆ, ಚಿತ್ರಕಲೋತ್ಸವದ ಮೂಲಕ ಲಾಂತರ ಚಿತ್ರಕಲಾ ಆಸಕ್ತ ವಿದ್ಯಾಥಿರ್ಗಳ ಕನಸಿಗೆ ಬಣ್ಣ ತುಂಬುವ ಕಾರ್ಯ ಮಾಡಲು ಮುಂದಾಗಿರುವುದು ಶ್ಲಾನೀಯ. ಇದಕ್ಕೆ ಜಿಲ್ಲೆಯ ಜನತೆ ಸಹಕಾರ ಅವಶ್ಯಕವಾಗಿದ್ದು, ಯಶಸ್ವಿ ಚಿತ್ರಕಲೋತ್ಸವಕ್ಕೆ ಎಲ್ಲರೂ ಶ್ರಮಿಸೋಣ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂದ ನಿರ್ದೇಶಕ ಡಿ.ಎಸ್​. ತಳವಾರ ಮಾತನಾಡಿ, ಚಿಣ್ಣರ ಚಿತ್ರ ಚಿತ್ತಾರ ನಮಗೆ ಸಾಕಷ್ಟು ಅನುಭವ ನೀಡಿದೆ. ಪ್ರತಿಯೊಂದು ವಿಚಾರದಲ್ಲಿ ನಾವು ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದೇವೆ. ಜೊತೆಗೆ ಸಂತಸ ಪಟ್ಟಿದ್ದೇವೆ. ಕಳೆದ ಬಾರಿಗಿಂತ ಈ ಬಾರಿ ಇನ್ನು ಹೆಚ್ಚಿನ ರೀತಿಯಲ್ಲಿ ಸಂಟನೆಯ ಮೂಲಕ ಚಿಣ್ಣರ ಚಿತ್ರ ಚಿತ್ತಾರ ರಾಷ್ಟ್ರಮಟ್ಟದ ಚಿತ್ರಕಲೋತ್ಸವ ಯಶಸ್ವಿಗೊಳಿಸೋಣ ಎಂದರು.
ಬಣ್ಣದ ಮನೆ ಸಾಂಸತಿಕ ವೇದಿಕೆಯ ಬಾಹುಬಲಿ ಜೈನರ್​ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಬಾರಿ ಚಿತ್ರಕಲೋತ್ಸವ ಯಶಸ್ಸಿಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಸಂಯೋಜಕರಾಗಿ ಕಾರ್ಯನಿರ್ವಹಿಸಿ ಮೊದಲ ಪ್ರಯತ್ನದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥಿರ್ಗಳು ಭಾಗವಹಿಸುವಂತೆ ಮಾಡಿದ ಕೀತಿರ್ ಜಿಲ್ಲಾ ಸಂಯೋಜಕರಿಗೆ ಸಲ್ಲುತ್ತದೆ ಎಂದರು.
2022&23ನೇ ಸಾಲಿನ ಚಿಣ್ಣರ ಚಿತ್ರ ಚಿತ್ತಾರ ರಾಜ್ಯ ಮಟ್ಟದ ಚಿತ್ರಕಲೋತ್ಸವದಲ್ಲಿ ಜಿಲ್ಲಾ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದ ಸಂಟಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಪ್ರೌಢ ಶಾಲಾ ಶಿಕರ ಸಂದ ತಾಲೂಕು ಅಧ್ಯ ಶರಣಪ್ಪ ನಾಗರಳ್ಳಿ, ಬಣ್ಣದ ಮನೆಯ ವಿಜಯ ಕಿರೇಸೂರ, ಕೇಂದ್ರ ದಲಿತ ಸಾಹಿತ್ಯ ಪರಿಷತ್​ ಜಿಲ್ಲಾಧ್ಯ ಶಾಂತಕುಮಾರ ಭಜಂತ್ರಿ ಇತರರು ಇದ್ದರು.