ಮಂಗಳವಾರ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ದ.ಕ. ಜಿಲ್ಲಾ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಜಿ.ಪಂ. ಸಿಇಒ ನರ್ವಾಡೆ ವಿನಾಯಕ ಕರ್ಬಾರಿ, ಆರ್‌ಬಿಐನ ಎಜಿಎಂ ಅರುಣ್ ಕುಮಾರ್, ಅ˜ಕಾರಿಗಳಾದ ಸಂಗೀತಾ ಕರ್ತ, ವೆಂಕಟ ವರಪ್ರಸಾದ್, ಗೀತಾ ಯಶೋಧರ್ ಇದ್ದರು.
- ಲೀಡ್ ಬ್ಯಾಂಕ್ ಸಭೆಯಲ್ಲಿ ಸಿಇಒ ವಿನಾಯಕ ಕರ್ಭಾರಿ ಸೂಚನೆ
- ಜಿಲ್ಲೆಯ 673 ಬ್ಯಾಂಕ್ ಶಾಖೆಗಳು ಒಟ್ಟು 21,45,470.30 ಕೋಟಿ ರೂ. ವ್ಯವಹಾರ
- ಜಿಲ್ಲಾಮಟ್ಟದ ಉನ್ನತ ಅ˜ಕಾರಿಗಳು ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು
ಮಂಗಳೂರು: ಬ್ಯಾಂಕುಗಳು ಗ್ರಾಮೀಣ ಭಾಗದ ಶಾಖೆಗಳಲ್ಲಿ ಗ್ರಾಹಕರಿಗೆ ನಗುಮೊಗದ ಉತ್ತಮ ರೀತಿಯ ಸೇವೆ ನೀಡಬೇಕು. ಅದರೊಂದಿಗೆ ತಮಗೆ ನೀಡ್ಟಿಉವ ಪ್ರಗತಿಯ ಗುರಿಗಳನ್ನು ಸಾ˜ಸುವತ್ತಲೂ ಚಿತ್ತ ವಹಿಸಬೇಕು ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ˜ಕಾರಿ ನರ್ವಾಡೆ ವಿನಾಯಕ ಕರ್ಬಾರಿ ಅವರು ಬ್ಯಾಂಕ್ ಅ˜ಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ದ.ಕ. ಜಿಲ್ಲಾ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಹಕರಿಗೆ ಉತ್ತಮ ಸೇವೆಯ ಜೊತೆಗೆ ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಬ್ಯಾಂಕ್ ಅ˜ಕಾರಿಗಳು ಗಮನ ಹರಿಸಬೇಕು ಎಂದು ಸಿಇಒ ಸೂಚಿಸಿದರು.
ವಿವಿಧ ಯೋಜನೆಗಳಿಗೆ ಸಂಬಂ˜ಸಿದ ಯಾವುದೇ ಅರ್ಜಿಗಳನ್ನು ಪೆಂಡಿಂಗ್ ಇರಿಸಬಾರದು, ಸಲ್ಲಿಕೆಯಾದ ಅರ್ಜಿಗಳನ್ನು ಸ್ವೀಕರಿಸುವುದು ಅಥವಾ ತಿರಸ್ಕಾರ ಮಾಡಬೇಕು. ಪೆಂಡಿಂಗ್ ಇಟ್ಟು ಗ್ರಾಹಕರನ್ನು ಸತಾಯಿಸಬಾರದು ಎಂದು ಸಿಇಒ ಸೂಚಿಸಿದರು.
ಉದ್ಯೋಗಿನಿ ಯೋಜನೆಯ ಒಟ್ಟು 72 ಗುರಿ ಪೈಕಿ, 22 ಅರ್ಜಿಗಳಿಗೆ ಸಾಲ ನೀಡಿದ್ದು, 10 ತಿರಸ್ಕರಿಸಿ, 19 ಅರ್ಜಿ ಬ್ಯಾಂಕಿನಲ್ಲಿ ಬಾಕಿಯಾಗಿವೆ. ಪಿಎಂ ವಿಶ್ವಕರ್ಮ ಯೋಜನೆಗೆ ಒಟ್ಟು 5292 ಅರ್ಜಿ ಸಲ್ಲಿಕೆಯಾಗಿದ್ದು, 3692 ಸ್ವೀಕೃತವಾಗಿವೆ. 1450 ತಿರಸ್ಕೃತಗೊಂಡಿವೆ ಎಂದು ಅ˜ಕಾರಿಗಳು ಮಾಹಿತಿ ನೀಡಿದರು.
ಗೈರಾದವರಿಗೆ ನೋಟಿಸ್
ಸಭೆಯಲ್ಲಿ ಕೆಲವು ಬ್ಯಾಂಕ್‌ಗಳ ಅ˜ಕಾರಿಗಳು ಗೈರು ಹಾಜರಾಗಿದ್ದರು. ಈ ಬಗ್ಗೆ ಪ್ರಶ್ನಿಸಿದ ಸಿಇಒ, ಬ್ಯಾಂಕ್‌ಗಳ ಜಿಲ್ಲಾ ಮಟ್ಟದ ಉನ್ನತ ಅ˜ಕಾರಿಗಳು ಸಭೆಗೆ ಕಡ್ಡಾಯವಾಗಿ ಭಾಗವಹಿಸಬೇಕು. ಹಾಜರಾಗದೇ ಇದ್ದಲ್ಲಿ ಕಾರಣವನ್ನು ಮೊದಲೇ ತಿಳಿಸಬೇಕು. ಗೈರಾದ ಅ˜ಕಾರಿಗಳಿಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದರು.
ಸಾಲ ವಿತರಣೆಯಲ್ಲಿ ಕಾಣದ ಪ್ರಗತಿ
ಬೆಂಗಳೂರು ಆರ್‌ಬಿಐನ ಎಜಿಎಂ ಅರುಣ್ ಕುಮಾರ್ ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗದ ಕೆಲ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿದ ವೇಳೆ ಅಲ್ಲಿ ಅವರ ಕಾರ್ಯಚಟುವಟಿಕೆ ತೃಪ್ತಿಕರವಾಗಿರಲಿಲ್ಲ. ಸಾಲ ವಿತರಣೆ ಬಗ್ಗೆ ಪರಿಶೀಲನೆ ವೇಳೆ ಆ ಶಾಖೆಯಲ್ಲಿ ಯಾವುದೇ ಸಾಲ ವಿತರಣೆ ಆಗದೇ ಇರುವುದು ಕಂಡುಬಂದಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ವ್ಯವಹಾರದಲ್ಲಿ ಶೇ. 9.29 ಪ್ರಗತಿ
2026ರ ಮಾ.31ರ ವರೆಗೆ ಜಿಲ್ಲೆಯ 673 ಬ್ಯಾಂಕ್ ಶಾಖೆಗಳು ಒಟ್ಟು 21,45,470.30 ಕೋಟಿ ರೂ. ವ್ಯವಹಾರ ಮಾಡುವ ಮೂಲಕ ಶೇ.9.29 ಪ್ರಗತಿ ಸಾ˜ಸಿವೆ. 85,873.50 ಕೋಟಿ ರೂ. ಠೇವಣಿ ಸಂಗ್ರಹಿಸಿ, ಶೇ. 12.48ರಷ್ಟು ಪ್ರಗತಿ ಸಾ˜ಸಿವೆ. 59,596.80 ಕೋಟಿ ರೂ. ಸಾಲ ನೀಡಿ, ಶೇ. 7.19 ಬೆಳವಣಿಗೆ ಕಂಡಿವೆ ಎಂದು ಅ˜ಕಾರಿಗಳು ತಿಳಿಸಿದರು.
ಬ್ಯಾಂಕ್‌ಗಳ ಸಾಲ- ಠೇವಣಿ ಅನುಪಾತ 2025ರಲ್ಲಿ ಶೇ. 72.83 ಇದ್ದು, ಅದು 2026ರಲ್ಲಿ ಶೇ. 69.40 ಆಗಿ, ಶೇ. 4.71 ಕುಸಿತ ಕಂಡಿದೆ. ಆದ್ಯತೆ ಮತ್ತು ಆದ್ಯತೇತರ ವಲಯಗಳಿಗೆ ಒಟ್ಟು 49,231.36 ಕೋಟಿ ರೂ. ವಿತರಣೆ ಮಾಡಿದ್ದು, ಶೇ. 76.32 ಸಾಧನೆಯಾಗಿದೆ. ಕೃಷಿ ವಲಯದಲ್ಲಿ 14,798.67 ಕೋಟಿ ರೂ. ವಿತರಣೆ ಮೂಲಕ ಶೇ. 110.96ರಷ್ಟು ಹೆಚ್ಚಳವಾಗಿದೆ. ಎಂಎಸ್‌ಎಂಇ ವಲಯದಲ್ಲಿ 8,605.61 ಕೋಟಿ ರೂ. ವಿತರಿಸಿ, ಶೇ. 109.43ರಷ್ಟು ಸಾ˜ಸಲಾಗಿದೆ.
ಆದ್ಯತೆಯ ಶಿಕ್ಷಣ ವಲಯದಲ್ಲಿ 188.25 ಕೋಟಿ ರೂ. ವಿತರಿಸಿ, ಶೇ. 85.97ರಷ್ಟು, ಆದ್ಯತಾ ವಸತಿ ವಲಯದಲ್ಲಿ 535.12 ಕೋಟಿ ರೂ. ವಿತರಿಸಿ, ಶೇ. 79.73 ಸಾಧನೆಯಾಗಿದೆ. ಆದ್ಯತಾ ವಲಯದಲ್ಲಿ ಒಟ್ಟು 26,272.19 ಕೋಟಿ ರೂ. ವಿತರಿಸಿ, ಶೇ. 113.38 ಸಾಧನೆಯಾಗಿದೆ ಎಂದು ಅ˜ಕಾರಿಗಳು ಮಾಹಿತಿ ನೀಡಿದರು.
ನಬಾರ್ಡ್ ಡಿಡಿಎಂ ಸಂಗೀತಾ ಕರ್ತ, ಕೆನರಾ ಬ್ಯಾಂಕ್ ಡಿಜಿಎಂ ವೆಂಕಟ ವರಪ್ರಸಾದ್, ಗೀತಾ ಯಶೋಧರ್ ಉಪಸ್ಥಿತರಿದ್ದರು.