ಚಿಕ್ಕಮಗಳೂರು: ಬ್ಯಾಂಕುಗಳೂ ಸೇರಿದಂತೆ ಹಣಕಾಸು ಸಂಸ್ಥೆಗಳಲ್ಲಿ ಕನ್ನಡ ಭಾಷೆ ಬಲ್ಲವರನ್ನೆ ಕಡ್ಡಾಯವಾಗಿ ನಿಯೋಜಿಸಬೇಕು ಎಂದು ಬಸವತತ್ವ ಪೀಠದ ಅಧ್ಯಕ್ಷರಾದ ಡಾ.ಶ್ರೀಬಸವಮರುಳಸಿದ್ದ ಸ್ವಾಮೀಜಿ ತಿಳಿಸಿದರು.
ನಗರದ ಪಟ್ಟಣ ಸಹಕಾರ ಬ್ಯಾಂಕ್‌ನ ಪ್ರಥಮ ಶಾಖೆ ಕಲ್ಯಾಣ ನಗರದ ವೀರಶೈವ ಮಹಾಸಭಾ ಕಾಂಪ್ಲೆಕ್ಸ್ನಲ್ಲಿ ಆರಂಭಗೊAಡಿದ್ದು, ಶಾಖೆಯ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಬ್ಯಾಂಕ್‌ಗಳಲ್ಲಿ ಎಲ್ಲ ರೀತಿಯ ಜನರು ವ್ಯವಹರಿಸುವುದು ಇಂದು ಅನಿವಾರ್ಯವಾಗಿದೆ. ಬಹುತೇಕ ರಾಷ್ಟಿçÃಕೃತ ಬ್ಯಾಂಕ್‌ಗಳಲ್ಲಿ ಉತ್ತರಭಾರತದ ಸಿಬ್ಬಂದಿ ಕಾಣುತ್ತೇವೆ. ಬಹಳಷ್ಟು ಸಿಬ್ಬಂದಿಗೆ ಕನ್ನಡ ಬರುವುದಿಲ್ಲ. ಅನಕ್ಷರಸ್ಥರು, ವಯೋವೃದ್ಧರು, ರೈತಾಪಿವರ್ಗಕ್ಕೆ ಇಂಗ್ಲಿಷ್ ಅಥವಾ ಹಿಂದಿ ಭಾಷೆ ಗೊತ್ತಿರುವುದಿಲ್ಲ ಎಂದರು.
ವ್ಯವಹಾರಕ್ಕೆ ಸ್ಥಳೀಯ ಭಾಷೆಯನ್ನು ಬಳಸಬೇಕೆಂಬ ಕನಿಷ್ಟ ತಿಳುವಳಿಕೆಯನ್ನಾದರೂ ಹೊಂದಬೇಕು. ಸೇವೆಯ ಉz್ದೆÃಶ ಸಫಲವಾಗಬೇಕಾದರೆ ಜನರಿಗೆ ಗೊತ್ತಿರುವ ಭಾಷೆಯಲ್ಲಿ ಸಿಬ್ಬಂದಿ ವ್ಯವಹಾರ ಮಾಡಬೇಕು. ರಾಷ್ಟಿçÃಕೃತ ಬ್ಯಾಂಕ್‌ಗಳು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವಾಗ ಸಿಬ್ಬಂದಿ ಇಲ್ಲಿಯ ಕನ್ನಡ ಭಾಷೆಯನ್ನು ಕಲಿತಿರಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.
ಸಹಕಾರಿ ಸಂಘ ಮತ್ತು ಬ್ಯಾಂಕ್‌ಗಳು ನಾಗರಿಕರಿಗೆ ಸುಲಭವಾಗಿ ಎಟಕುತ್ತವೆ. ಸ್ಥಳೀಯ ಸಿಬ್ಬಂದಿ ಹಾಗೂ ಆಡಳಿತಮಂಡಳಿ ಸದಸ್ಯರು ಇರುವುದರಿಂದ ಜನರ ಅಗತ್ಯತೆಯ ಅರಿವು ಹೊಂದಿರುತ್ತಾರೆ. ವಿಶೇಷವಾಗಿ ರಾಷ್ಟಿçÃಕೃತ ಬ್ಯಾಂಕ್‌ಗಳಲ್ಲಿ ವ್ಯವಹರಿಸಲು ಅನೇಕ ಕಾಯ್ದೆ ಕಟ್ಟಳೆಗಳು ರೋಸು ಹಿಡಿಸುತ್ತವೆ. ಸಾಲ ಪಡೆಯುವಾಗ ಅವರು ಕೇಳುವ ದಾಖಲಾತಿಗಳನ್ನು ಹೊಂದಿಸಿಕೊಡಲು ಬಹಳಷ್ಟು ಸಮಯವೇ ಬೇಕಾಗುತ್ತದೆ. ತುರ್ತು ಅಗತ್ಯತೆಗೆ ಅನುಗುಣವಾಗಿ ನಂಬಿಕೆ-ವಿಶ್ವಾಸಾರ್ಹತೆಯನ್ನೂ ಪರಿಗಣಿಸಿ ಸ್ಥಳೀಯ ಬ್ಯಾಂಕ್‌ಗಳಲ್ಲಿ ಶೀಘ್ರದಲ್ಲೆ ಸಾಲ ಸಿಗುತ್ತದೆ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ ಎಂದು ಸ್ವಾಮೀಜಿ ಅಭಿಪ್ರಾಯಿಸಿದರು.
ಶಾಖೆಯನ್ನು ಲೋಕಾರ್ಪಣೆಗೊಳಿಸಿದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಸಹಕಾರಿ ಬ್ಯಾಂಕ್‌ಗಳು ಶ್ರೀಸಾಮಾನ್ಯರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದೆ. ವಿಫುಲ ಜನಸಂಖ್ಯೆ ಹೊಂದಿರುವ ಭಾರತದಂಥ ಬೃಹತ್ ದೇಶಕ್ಕೆ ಸಹಕಾರಿ ವ್ಯವಸ್ಥೆ ಉಪಯುಕ್ತ. ಪರಸ್ಪರ ಸಹಕಾರದಿಂದ ಬೆಳೆಯುವ ಆಶೋತ್ತರಗಳನ್ನು ಹೊಂದಿರುವ ಸಹಕಾರಿ ಸಂಸ್ಥೆಗಳು ಜನಸಾಮಾನ್ಯರ ಪ್ರೀತಿ ವಿಶ್ವಾಸವನ್ನು ಗಳಿಸಿವೆ ಎಂದು ನುಡಿದರು.
ಚಿಕ್ಕಮಗಳೂರಿನಲ್ಲಿ ಸ್ವಾತ್ರಂತ್ರö್ಯಹೋರಾಟಗಾರ ಸಿ.ಎಂ.ಎಸ್.ಶಾಸ್ತಿçಯವರ ನೇತೃತ್ವದಲ್ಲಿ ಊರಿನ ಹಿರಿಯರು ಪ್ರಾರಂಭಿಸಿದ ಜಿಲ್ಲೆಯ ಪ್ರಪ್ರಥಮ ಪಟ್ಟಣ ಸಹಕಾರಬ್ಯಾಂಕ್ ನಿರಂತರ ಲಾಭದಾಯಕವಾಗಿ ಮುನ್ನಡೆದಿರುವುದು ಅದರ ಜನಪ್ರಿಯತೆಯನ್ನು ತೋರಿಸುತ್ತದೆ. ಈಭಾಗದ ಷೇರುದಾರರ ಆಗ್ರಹದ ಮೇರೆಗೆ ಮೊದಲ ಶಾಖೆಯನ್ನು ಇಲ್ಲಿ ಆರಂಭಿಸಿರುವುದು ಹರ್ಷದಾಯಕ. ಬೈಪಾಸ್ ರಸ್ತೆಯಲ್ಲಿ ಈಗಾಗಲೇ ಸಾಕಷ್ಟು ವ್ಯಾಪರ ವಹಿವಾಟು ನಡೆಯುತ್ತಿದ್ದು, ವಿಶೇಷವಾಗಿ ವ್ಯಾಪಾರಸ್ಥರಿಗೆ ವ್ಯವಹಾರ ನಡೆಸಲು ಸಹಕಾರಿಯಾಗಿದೆ ಎಂದು ಬ್ಯಾಂಕ್ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.
ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ನಂಜೇಗೌಡ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ೨೭ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬ್ಯಾಂಕ್ ೪೨ ಸಾವಿರಕ್ಕೂ ಹೆಚ್ಚು ಷೇರುದಾರರನ್ನು ಹೊಂದಿದೆ. ೭೪ಕೋಟಿ ರೂ.ಠೇವಣಿಯನ್ನು ಬ್ಯಾಂಕಿನ ಮೇಲೆ ವಿಶ್ವಾಸವಿಟ್ಟು ಜನ ನೀಡಿದ್ದಾರೆ. ವಿವಿಧ ರೀತಿಯ ಸೇವೆಗಳನ್ನು ಗ್ರಾಹಕರಿಗೆ ಒದಗಿಸಲು ಆಡಳಿತಮಂಡಳಿ ಸದಾ ಕಾರ್ಯಪ್ರವೃತ್ತವಾಗಿದೆ. ಹೆಚ್ಚು ಜನರಿಗೆ ಬ್ಯಾಂಕಿನ ಸೇವಾಸೌಲಭ್ಯಗಳು ಸಿಗಬೇಕೆಂಬ ಆಶಯದೊಂದಿಗೆ ಇಲ್ಲಿ ಮೊದಲ ಶಾಖೆಯನ್ನು ಆರಂಭಿಸಲಾಗಿದೆ ಎಂದರು.
ಸಹಕಾರ ಇಲಾಖೆಯ ಉಪನಿಬಂಧಕಿ ತೇಜಸ್ವಿನಿಗೌಡ ಮತ್ತು ಸಹಾಯಕ ನಿಬಂಧಕ ಎ.ಆರ್.ರಘು, ಬ್ಯಾಂಕ್ ಉಪಾಧ್ಯಕ್ಷ ಬಿ.ಎಚ್.ಶ್ರೀಕಾಂತಪೈ, ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ವಿ.ರಾಘವೇಂದ್ರ, ನಿರ್ದೇಶಕರಾದ ಭಗವತಿ ಹರೀಶ್, ಜಿ.ರಘು, ಶಶಿಧರ್, ಧರ್ಮರಾಜು, ಸಿ.ಆರ್.ಮಂಜುನಾಥ್, ಕೆ.ಡಿ.ಪುಟ್ಟಣ್ಣ, ಕೆ.ಟಿ.ಮಂಜುನಾಥ್, ಶಾಖಾ ವ್ಯವಸ್ಥಾಪಕ ಅಶೋಕ, ಶೈಲಾ ಉಪಸ್ಥಿತರಿದ್ದರು.