ಬೀಳಗಿ: ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ 826.16 ಕೋಟಿ ರೂ. ದುಡಿಯುವ ಬಂಡವಾಳ, 19.32 ಕೋಟಿ ರೂ. ಶೇರು ಬಂಡವಾಳ ಹಾಗೂ 724.74 ಕೋಟಿ ರೂ. ಠೇವು ಹೊಂದುವ ಮೂಲಕ ರೈತರು, ಹಿಂದುಳಿದ ಜನಾಂಗದ ಏಳಿಗೆಗೆ ಶ್ರಮಿಸುತ್ತಿದೆ. ಕೆಲ ದಿನಗಳಲ್ಲಿ ಈ ಬ್ಯಾಂಕ್ ಜಿಲ್ಲೆಯಲ್ಲೇ ನಂ.1 ಆಗಲಿದೆ ಎಂದು ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.
ಪಟ್ಟಣದ ಶ್ರೀ ಸಿದ್ಧೇಶ್ವರ ದೇವಸ್ಥಾನದಲ್ಲಿ ಭಾನುವಾರ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ 27ನೇ ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಥೆಯು ಬಡ, ಮಧ್ಯಮ ವರ್ಗ ಹಾಗೂ ಶೋಷಿತ ಸಮುದಾಯದವರ ಆರ್ಥಿಕ ಸುಧಾರಣೆ ತಂದಿದೆ. ಗ್ರಾಮೀಣ ಪ್ರದೇಶವಾದ ಬಾಡಗಂಡಿ ಗ್ರಾಮದಲ್ಲೇ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆ, ಸಕ್ಕರೆ ಕಾರ್ಖಾನೆ, ಸಹಕಾರಿ ಕ್ಷೇತ್ರದ ಬ್ಯಾಂಕ್, ಹೈಟೆಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ವೈದ್ಯಕೀಯ ಮಹಾವಿದ್ಯಾಲಯ ಆರಂಭವಾಗಿವೆ. ಇದು ಇಡೀ ವಿಶ್ವದಲ್ಲೇ ಬೀಳಗಿ ತಾಲೂಕಿನ ಕೀರ್ತಿ ಹೆಚ್ಚಿಸಿದೆ. ಜಿಲ್ಲೆಯಲ್ಲಿ ಬೀಳಗಿ ಮಾದರಿ ತಾಲೂಕಾಗಲಿದೆ. ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಧಾನ ಕಚೇರಿ ನವೀಕರಣದ ಕಟ್ಟಡ ಕಾಮಗಾರಿ ಮುಕ್ತಾಯವಾಗಿದ್ದು, ಅದರ ಪ್ರಯುಕ್ತ 25ನೇ ವರ್ಷದ ರಜತ ಮಹೋತ್ಸವ(ಬೆಳ್ಳಿ ಹಬ್ಬ) ಆಚರಣೆ ಕಾರ್ಯಕ್ರಮ ಶೀಘ್ರ ನಡೆಯಲಿದೆ. ರಾಜ್ಯಾದ್ಯಂತ ಸಂಸ್ಥೆ ಶಾಖೆಗಳನ್ನು ತೆರೆಯಲಾಗುವುದು. ಈ ಭಾಗದ ಜನರ, ಪ್ರೀತಿ, ವಿಶ್ವಾಸ ಹಾಗೂ ಆಡಳಿತ ಮಂಡಳಿ ಸಲಹೆ, ರೇವುದಾರ ಹಾಗೂ ಗ್ರಾಹಕರ ಸಹಕಾರದಿಂದ ಈ ಸಂಸ್ಥೆ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ ಎಂದು ತಿಳಿಸಿದರು.
ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಎಲ್.ಬಿ. ಕುರ್ತಕೋಟಿ ವರದಿ ವಾಚಿಸಿ, ನಮ್ಮ ಬ್ಯಾಂಕಿನ ಸದಸ್ಯರ ಮಕ್ಕಳು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ಸಾಧಕ ಮಕ್ಕಳಿಗೆ ಅಧ್ಯಕ್ಷರ ಸೂಚನೆಯಂತೆ ಹೆಚ್ಚಿನ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.
ಉಪಾಧ್ಯಕ್ಷ ಸತ್ಯಪ್ಪ ಮೇಲ್ನಾಡ, ಆಡಳಿತಾಧಿಕಾರಿ ಐ.ವಿ. ಬಸರಕೋಡ, ಬಾಹ್ಯಮೂಲ ಸದಸ್ಯರಾದ ಎಂ.ಎಸ್. ಪಾಟೀಲ, ಪಿ.ಡಿ. ಜತ್ತಿ, ಬಿ.ಎನ್. ನಾಗನಗೌಡ, ಬ್ಯಾಂಕಿನ ನಿರ್ದೇಶಕ ಕೆ.ಎಸ್. ಪ್ರತಿ, ಎನ್.ಎನ್. ಪಾಟೀಲ, ಎಸ್.ಕೆ. ಯಡಹಳ್ಳಿ, ಹೇಮಾದ್ರಿ ಕೊಪ್ಪಳ, ಭೀಮಸಿ ಮುಕಾಶಿ, ಎಂ.ಎನ್. ಕೆಂಪಲಿನ್ನವರ, ಗಂಗಪ್ಪ ಕೆರೂರ, ಎಸ್.ಎ. ನೀರಲಗಿ, ಬಿ.ಬಿ. ಕೂಗಟಿ, ಪಿ.ಬಿ. ಗುರಾಣಿ, ಡಿ.ಬಿ. ಮಮದಾಪೂರ, ಎ.ಎಚ್. ಬೀಳಗಿ, ಎಸ್.ಎಸ್. ರಂಗನಗೌಡರ, ವಿ.ಪಿ.ಆಯಾಚಿತ, ವಿ.ಎಸ್. ಮುರಾಳ ಇತರರಿದ್ದರು.
ಸಿದ್ಧೇಶ್ವರ ಬ್ಯಾಂಕಿನ ಉಪಾಧ್ಯಕ್ಷ ಅಣವೀರಯ್ಯ ಪ್ಯಾಟಿಮಠ ಹಾಗೂ ಪರ್ತಕರ್ತ ಕಾಶಿನಾಥ ಸೋಮನಕಟ್ಟಿ ಬ್ಯಾಂಕಿನ ಬೆಳವಣಿಗೆ ಕುರಿತು ಮಾತನಾಡಿದರು. ಎಸ್.ಎಸ್.ಎಲ್.ಸಿ, ಪಿಯು, ಡಿಗ್ರಿ, ಕ್ರೀಡೆ, ಉತ್ತಮ ಗ್ರಾಹಕರಿಗೆ ಮತ್ತು ಉತ್ತಮ ಠೇವುದಾರರಿಗೆ ಗೌರವ ಸನ್ಮಾನ ಮಾಡಲಾಯಿತು.