ಬೆಳಗಾವಿ: ಸೈಬರ್ ಅಪರಾಧಿಗಳು ಕೇವಲ ಒಂದು ದಿನದ ಯೋಜನೆಯೊಂದಿಗೆ ಬ್ಯಾಂಕ್ ದೋಚುವುದಿಲ್ಲ. ಆದರೆ, ಇದಕ್ಕಾಗಿ ಹಲವು ದಿನಗಳಿಂದ ಯೋಜನೆ ರೂಪಿಸಿ ಕೃತ್ಯ ಎಸಗುತ್ತಾರೆ. ಹೀಗಾಗಿ ಬ್ಯಾಂಕ್ ಸಿಬ್ಬಂದಿ ಬಹಳ ಜಾಗೃತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಪುಣೆಯ ಕೋಮಲ ಇನ್ಫೋಟೆಕ್ ಕಂಪನಿಯ ಹೇಮಂತ ದೇಶಮುಖ ಹೇಳಿದರು.
ನಗರದ ಮರಾಠ ಬ್ಯಾಂಕಿನ ಛತ್ರಪತಿ ಶಿವಾಜಿ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್ ಸಂವು ಈಚೆಗೆ ಹಮ್ಮಿಕೊಂಡಿದ್ದ ಒಂದು ದಿನದ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸೈಬರ ಅಪರಾಧಿಗಳು ಬ್ಯಾಂಕಿನ ದತ್ತಾಂಶಗಳನ್ನು ಕದ್ದು ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಬ್ಯಾಂಕಿನ ಪಾಸ್ವರ್ಡ್ ಕನಿಷ್ಠ 12 ರಿಂದ 16 ಅರಗಳಷ್ಟು ಉದ್ದವಾಗಿರಬೇಕು. ಆದ್ದರಿಂದ ಅದನ್ನು ಸುಲಭವಾಗಿ ಊಹಿಸಲಾಗುವುದಿಲ್ಲ ಎಂದರು.
ಜಿಲ್ಲಾ ಬ್ಯಾಂಕ್ ಸಂದ ಉಪಾಧ್ಯ ಬಾಳಾಸಾಹೇಬ ಕಾಕತಕರ, ಮರಾಠ ಬ್ಯಾಂಕ್ ಅಧ್ಯ ಬಾಳಾರಾಮ ಪಾಟೀಲ, ಪಯೋನೀಯರ್ ಬ್ಯಾಂಕ್ ಅಧ್ಯ ಪ್ರದಿಪ ಅಷ್ಟೇಕರ, ಬಸವೇಶ್ವರ ಬ್ಯಾಂಕ್ ಅಧ್ಯ ರಮೇಶ ಕಳಸಣ್ಣವರ, ತುಕಾರಾಮ ಬ್ಯಾಂಕ್ ಅಧ್ಯ ಪ್ರಕಾಶ ಮರಗಾಳೆ , ದೈವ ಬ್ಯಾಂಕಿನ ಮಂಜುನಾಥ ಸೇಠ, ವಿಸೆಲ ಇನ್ಫೋಟೆಕ್ ಕಂಪನಿಯ ಸಚಿನ ಗುಂಜಿಕರ, ಫ್ಯೂಚರ್ ಕಮ್ಯೂನಿಕೇಷನ್ಸ್ ಪ್ರತಿನಿಧಿ ನಿತಿನ ಕದಂ, ಇನ್ನೋವೇವ್ ಕಂಪನಿಯ ಅಮಿತ್ ಲೋಕ್ರೆ ಮತ್ತು ಎಫಿನಿಕ್ಸ್ನ ಡಾ.ಪವನ ಫಲಕ್ ಇತರರಿದ್ದರು.