ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಸಾರ್ವಜನಿಕ ವಲಯ ಮುಂಚೂಣಿ ಬ್ಯಾಂಕ್ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಮಹಾರಾಷ್ಟ್ರದ ಗೋಕುಲ ರಸ್ತೆ ಶಾಖೆಯ ಉದ್ಘಾಟನೆ ಇತ್ತೀಚೆಗೆ ನಡೆಯಿತು.
ಮೈಕ್ರೊಫಿನಿಶ್ ಗ್ರುಪ್ ಸಿಎಂಡಿ ತಿಲಕ ವಿಕಂಶಿ, ಜೆಕೆ ಎಂಟರ್ಪ್ರೖೆಸಿಸ್ನ ಪಾಲುದಾರ ಹಿರಾಚಂದ ಜೈನ್, ಶ್ರೀ ಬಾಲಾಜಿ ಸಾಯಿ ಸ್ಟಿಲ್ಸ್ನ ಸಿಎಂಡಿ ಸುನೀಲ ಮತ್ರೇಜಾ, ಬ್ಯಾಂಕ್ ಆಫ್ ಮಹಾರಾಷ್ಟ್ರದ ಹುಬ್ಬಳ್ಳಿ ವಲಯ ವ್ಯವಸ್ಥಾಪಕ ಸುಚೇತ ಡಿಸೋಜಾ ಹಾಗೂ ಶಾಖೆ ವ್ಯವಸ್ಥಾಪಕ ಶ್ರೀವಾಸ್ತವ ರಚಕೊಂಡ ಇದ್ದರು.
ಗೋಕುಲ ರಸ್ತೆ ಶಾಖೆಯು ರಾಜ್ಯದಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರದ 83ನೇ ಶಾಖೆಯಾಗಿದೆ. ಗ್ರಾಹಕರಿಗೆ ಸಾಮಾನ್ಯ ಬ್ಯಾಂಕಿಂಗ್ ವ್ಯವಹಾರಗಳ ಜತೆಗೆ ಕೃಷಿ, ರಿಟೇಲ್, ಎಂಎಸ್ಎಂಇ ವಲಯಗಳಿಗೆ ಹಣಕಾಸು ಸೇವೆಗಳನ್ನು ಒದಗಿಸುವ ಅತ್ಯಾಧುನಿಕ ಶಾಖೆ ಇದಾಗಿದೆ. 19 ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಹುಬ್ಬಳ್ಳಿ ವಲಯದಲ್ಲಿ 38ನೇ ಶಾಖೆಯಾಗಿದ್ದು, 35 ಎಟಿಎಂಗಳಿವೆ ಎಂದು ಬ್ಯಾಂಕ್ ತಿಳಿಸಿದೆ.
ದೇಶಾದ್ಯಂತ 2.7 ಕೋಟಿ ಗ್ರಾಹಕರು ಇದ್ದಾರೆ. 2300ಕ್ಕೂ ಅಧಿಕ ಶಾಖೆಗಳು ಹಾಗೂ 2500ಕ್ಕೂ ಹೆಚ್ಚು ಎಟಿಎಂಗಳಿವೆ ಎಂದು ಹೇಳಿದೆ.