ಜಿಲ್ಲೆ

ಮಹಾರಾಷ್ಟ್ರ ಬ್ಯಾಂಕ್ ನಲ್ಲಿ ಹಿಂದಿ ದಿವಸ ಆಚರಣೆ

ಹುಬ್ಬಳ್ಳಿ: ದೇಶದ ಸಾರ್ವಜನಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರ ಪುಣೆ ಶಾಖೆಯಲ್ಲಿ ಇತ್ತೀಚೆಗೆ ಹಿಂದಿ ದಿವಸ ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಆಫ್ ಮಹಾರಾಷ್ಟ್ರ ಸಿಇಒ ಹಾಗೂ ಎಂಡಿ ಎ.ಎಸ್. ರಾಜೀವ ಅವರು, ಬ್ಯಾಂಕಿನ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ಒದಗಿಸುವಲ್ಲಿ ಹಿಂದಿ ಹಾಗೂ ಸ್ಥಳಿಯ ಭಾಷೆಯ ಬಳಕೆ ಮಹತ್ವದ್ದಾಗಿದೆ. ಹಿಂದಿಯು ಹೆಚ್ಚಿನ ಜನರಿಗೆ ತಲುಪಬಹುದಾದ ಭಾಷೆಯಾಗಿದೆ ಎಂದರು.

ಅತಿಥಿಯಾಗಿದ್ದ ಖ್ಯಾತ ಸಿನಿಮಾ ತಾರೆ ಆರ್ಯ ಶರ್ಮಾ, ಹಿಂದಿ ಭಾಷೆ ಬೆಳವಣಿಗೆಯಲ್ಲಿ ಸಿನೆಮಾ, ಟಿವಿಗಳ ಪಾತ್ರ ಅಧಿಕವಾಗಿದೆ. ಹಿಂದಿಯು ಅತ್ಯಂತ ಸರಳ ಭಾಷೆಯಾಗಿದೆ. ದೇಶಕ ಅನೇಕ ರಾಜ್ಯಗಳಲ್ಲಿ ಇದನ್ನು ಬಳಸಲಾಗುತ್ತದೆ ಎಂದರು.

ಮಹಾಬ್ಯಾಂಕ್ ಸಂವಾದ ಸರಿತಾ ಎಂಬ ಬ್ಯಾಂಕ್ ಮ್ಯಾಗಜಿನ್ ಬಿಡುಗಡೆ ಮಾಡಲಾಯಿತು. ಹಿಂದಿ ದಿವಸ ಅಂಗವಾಗಿ ಅಖಿಲ ಭಾರತ ಮಟ್ಟದಲ್ಲಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯನಿರ್ವಾಹಕ ನಿರ್ದೇಶಕ ಆಶೀಶ್ ಪಾಂಡೆ, ರೋಹಿತ ರಿಷಿ, ಅಮಿತ ಶ್ರೀವಾಸ್ತವ ಇತರರು ಪಾಲ್ಗೊಂಡಿದ್ದರು.

ಪ್ರಧಾನ ವ್ಯವಸ್ಥಾಪಕ ಕೆ. ರಾಜೇಶಕುಮಾರ ಸ್ವಾಗತಿಸಿದರು. ಉಪಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಶ್ರೀವಾಸ್ತವ ಕಾರ್ಯಕ್ರಮ ನಿರೂಪಿಸಿದರು. ವಲಯ ವ್ಯವಸ್ಥಾಪಕ ರಾಹುಲ್ ವಾಘ್ಮಾರೆ ವಂದಿಸಿದರು.