ಮಂಗಳೂರು : ಬ್ಯಾಂಕ್ ಆಫ್ ಬರೋಡಾದ 117ನೇ ಸಂಸ್ಥಾಪನಾ ದಿನವನ್ನು ಭಾರತೀಯ ರೆಡ್‌ಕ್ರಾಸ್ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಸುವ ಮೂಲಕ ಆಚರಿಸಲಾಯಿತು. ಬ್ಯಾಂಕ್ ಆಫ್ ಬರೋಡಾ ವಲಯ ಕಚೇರಿ- ಡಾ ಅಂಬೇಡ್ಕರ್ ವೃತ್ತ- ಬಂಟ್ಸ್ ಹಾಸ್ಟೆಲ್ -ಹಂಪನಕಟ್ಟೆ ರಸ್ತೆಯಲ್ಲಿ ನಡೆದ ವಾಕಥಾನ್ ವಲಯ ಕಚೇರಿ ಆವರಣದಲ್ಲಿ ಸಮಾಪನಗೊಂಡಿತು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್‌ಎಫ್‌ನ ಕಮಾಂಡೆಂಟ್ ಮತ್ತು ಪ್ರಧಾನ ವ್ಯವಸ್ಥಾಪಕ ರಾಜೇಶ್ ಖನ್ನಾ ಅವರು ಧ್ವಜಾರೋಹಣ ನೆರವೇರಿಸಿದರು, ಉಪ ಪ್ರಧಾನ ವ್ಯವಸ್ಥಾಪಕರಾದ ರಮೇಶ್ ಕಾನಡೆ, ಅಶ್ವಿನಿ ಕುಮಾರ್, ರಾಜಶೇಖರ್, ಪ್ರಾದೇಶಿಕ ವ್ಯವಸ್ಥಾಪಕ ಸನಿಲ್ ಕುಮಾರ್ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ ಸೈಂಟ್ ಸೆಬಾಸ್ಟಿಯನ್ ಶತಮಾನೋತ್ಸವ ಭವನದಲ್ಲಿ ನಡೆಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಪಿ.ಎಲ್. ಧರ್ಮ , ಬ್ಯಾಂಕ್‌ನ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಆರ್. ಶೆಣೈ ಮುಖ್ಯ ಅತಿಥಿಗಳಾಗಿ
ಭಾಗವಹಿಸಿದ್ದರು. ಯಕ್ಷಗಾನ, ಶಾಸ್ತ್ರೀಯ ನೃತ್ಯಗಳು, ಹುಲಿ ನೃತ್ಯ ಪ್ರದರ್ಶನ ಗೊಂಡಿತು.
ಬ್ಯಾಂಕ್ ಆಫ್ ಬರೋಡಾ ತನ್ನ ಸಿಎಸ್‌ಆರ್ ಮೂಲಕ ವೃದ್ಧಾಶ್ರಮಗಳು , ವಿಶೇಷ ಮಕ್ಕಳ ಸಾನಿಧ್ಯ ಶಾಲೆ, ಒಲವನಹಳ್ಳಿ ನಿರ್ಗತಿಕರ ಮನೆ, ಅಸೈಗೋಳಿ ಅಭಯ ಆಶ್ರಮಗಳಿಗೆ ನೆರವು ಒದಗಿಸಿದೆ. ಸಸಿ ವಿತರಣೆ , ಸಸಿ ನೆಡುವ ಕಾರ್ಯಕ್ರಮ, ಟ್ರಾಫಿಕ್ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗೆ ಕೊಡೆಗಳ ವಿತರಣೆ ಮುಂತಾದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿದೆ.