ಮಂಗಳೂರು : ಉದಯೋನ್ಮುಖ ಭಾರತೀಯ ಟೆನಿಸ್ ಆಟಗಾರ ಸುಮಿತ್ ನಾಗಲ್ ಅವರನ್ನು ಬ್ಯಾಂಕ್ ಆಫ್ ಬರೋಡಾ ಬ್ರಾೃಂಡ್ ರಾಯಭಾರಿಯಾಗಿ ನೇಮಕ ಮಾಡಿಕೊಂಡಿದೆ. ಪ್ರತಿಭಾನ್ವಿತ ಭಾರತೀಯ ಕ್ರೀಡಾಪಟುಗಳನ್ನು ಅವರ ವೃತ್ತಿಜೀವನದ ಆರಂಭಿಕ ಹಂತದಲ್ಲಿಯೇ ಬೆಂಬಲಿಸುವುದು ಬ್ಯಾಂಕಿನ ದೀರ್ಘಕಾಲದ ಸಂಪ್ರದಾಯವಾಗಿದೆ. ಭಾರತದ ಅಗ್ರ ಶ್ರೇಯಾಂಕದ ಟಿನೆಸ್ ಆಟಗಾರರಾಗಿರುವ ಸುಮಿತ್ ಇವರ ರಾಯಭಾರಿಯಿಂದ, ಹೊಸ ಪೀಳಿಗೆಯ ಉತ್ಪನ್ನಗಳೊಂದಿಗೆ ತನ್ನ ಗ್ರಾಹಕರನ್ನು ವಿಸ್ತರಿಸುವುದು ಬ್ಯಾಂಕಿನ ಗುರಿಯಾಗಿದೆ.
26ರ ಹರೆಯದ ಸುಮಿತ್ ಇತ್ತೀಚೆಗೆ ವೃತ್ತಿಜೀವನದ ಉನ್ನತ ವಿಶ್ವ ಶ್ರೇಯಾಂಕದಲ್ಲಿ 71ನೇ ಸ್ಥಾನಕ್ಕೆ ಏರಿದ್ದು, ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸುಮಿತ್ ಅವರು ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಮತ್ತು ಕ್ರಿಕೆಟ್ ಯುವ ಐಕಾನ್ ಶೆಫಾಲಿ ವರ್ಮಾ ಅವರನ್ನು ಒಳಗೊಂಡಿರುವ ಬ್ಯಾಂಕ್ ಆಫ್ ಬರೋಡಾದ ಪ್ರಭಾವಶಾಲಿ ಶ್ರೇಣಿಯನ್ನು ಸೇರಿದ್ದಾರೆ.