ಜಿಲ್ಲೆ

ಡಿಸಿಸಿ ಬ್ಯಾಂಕ್ ರಣಕಣಕ್ಕೆ ಜಾರಕಿಹೊಳಿ ಪುತ್ರ ಎಂಟ್ರಿ

ಡಿ.ವಿ. ಕಮ್ಮಾರ

ಬೆಳಗಾವಿ: ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪುತ್ರ ರಾಹುಲ ಜಾರಕಿಹೊಳಿ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ರಣಕಣಕ್ಕೆ ಧುಮ್ಮುಕ್ಕಿದ್ದಾರೆ‌.
ಬೆಳಗಾವಿ ತಾಲೂಕು ಕ್ಷೇತ್ರದಿಂದ ಸೋಮವಾರ ರಾಹುಲ ಜಾರಕಿಹೊಳಿ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಂಸದ ಅಣ್ಣಸಾಹೇಬ ಜೊಲ್ಲೆ ಇತರರಿದ್ದರು.

ಪಕ್ಷದೊಳಗಿನ ಚುನಾವಣೆ ಹೊರತಾಗಿ ಸಾರ್ವಜನಿಕವಾಗಿ ನಡೆಯುವ ಚುನಾವಣೆಗಳಲ್ಲಿ ರಾಹುಲ ಜಾರಕಿಹೊಳಿ ಇದೇ ಮೊದಲ ಸಲ ಅದೃಷ್ಟ ಪರೀಕ್ಷೆಗಿಳಿದ್ದಾರೆ. ಸಹಕಾರ ಸಂಘದ ಮೂಲಕ ಚುನಾವಣಾ ರಾಜಕೀಯ ಪ್ರವೇಶ ಮಾಡಿದ್ದಾರೆ.