ಕಲಘಟಗಿ: ಬ್ಯಾಂಕ್ನ ಉತ್ತಮ ಸೇವೆ ಹಾಗೂ ಗ್ರಾಹಕರ ವಿಶ್ವಾಸದ ಫಲವಾಗಿ ಠೇವಣಿ 2.53 ಕೋಟಿ ರೂ. ಹೆಚ್ಚಿದೆ ಎಂದು ಸಂಸ್ಥೆ ಉಪಾಧ್ಯಕ್ಷ ಜೆ.ಕೆ. ಕಡ್ಲಾಸ್ಕರ ಹೇಳಿದರು.
ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಲಘಟಗಿ ಅರ್ಬನ್ ಕೋ-ಆಪ್ ಬ್ಯಾಂಕ್ನ ಪ್ರಸಕ್ತ ಸಾಲಿನ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಬ್ಯಾಂಕ್ 35.15 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. 32 ಕೋಟಿ ರೂ. ಠೇವು ಸಂಗ್ರಹವಾಗಿದೆ. 3 ಕೋಟಿ ರೂ. ಕಾಯ್ದಿಟ್ಟ ಹಾಗೂ ಇತರೆ ನಿಧಿಗಳಿದ್ದು, 1.17 ಕೋಟಿ ರೂ.ಗಳ ಷೇರು ಬಂಡವಾಳ ಹೊಂದಿದೆ. ರೈತರು ಹಾಗೂ ವ್ಯಾಪಾರಿಗಳಿಗೆ 17.8 ಕೋಟಿ ರೂ. ಸಾಲ ನೀಡುವ ಮೂಲಕ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಿದೆ ಎಂದು ವಿವರಿಸಿದರು.
ವ್ಯವಸ್ಥಾಪಕ ಗಂಗಾಧರ ಅಂಗಡಿ ಮಾತನಾಡಿ, ಗ್ರಾಹಕರು ಸಕಾಲದಲ್ಲಿ ಸಾಲ ಮರುಪಾವತಿಸಿ ಬ್ಯಾಂಕ್ನ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಬ್ಯಾಂಕ್ನ ನಿವೃತ್ತ ಅಧಿಕಾರಿ ಎ.ಎನ್. ಬಡಿಗೇರ, ಸಂಗೀತ ಕಲಾವಿದ ಅಶೋಕ ಅರ್ಕಸಾಲಿ, ಮಲ್ಲಯ್ಯ ಪೂಜಾರ ಅವರನ್ನು ಸನ್ಮಾನಿಸಲಾಯಿತು.
ಬ್ಯಾಂಕ್ ಅಧ್ಯಕ್ಷ ಎನ್.ಎಸ್. ಭರಮಗೌಡ್ರ, ನಿರ್ದೇಶಕರಾದ ಪ್ರಭಾಕರ ರಘಪ್ಪನವರ, ವೃಷಭೇಂದ್ರ ಪಟ್ಟಣಶೆಟ್ಟಿ, ಎಂ.ಜಿ. ಚೌಧರಿ, ಮಂಜುಳಾ ದೇವಲಾಪುರ, ಆರ್.ಎಸ್. ರೊಟ್ಟಿ, ಆರ್.ಸಿ. ಶೀಲವಂತರ, ದೇವರಾಜ ಗಬ್ಬೂರ, ಸಿ.ಬಿ. ಸಂಗೇದೇವರಕೊಪ್ಪ, ಪ್ರಮುಖರಾದ ಮುರುಗೆಪ್ಪ ಕಟ್ಟಿ, ಮಾದೇವ ಮೇಟಿ, ಎಸ್.ಬಿ. ಅಮರಗೋಳ, ನಿಂಗಪ್ಪ ನಿಂಬಣ್ಣವರ, ರವಿ ಕೊಳೇಕರ, ಪ್ರಭಾಕರ ನಾಯಕ, ಮುರಳಿ ವರ್ಕ, ರಾಕೇಶ ಅಳಗವಾಡಿ, ಮಾಧವ ಹಡಪದ, ಡಾ.ವೈ.ಬಿ. ಡಂಬಳ, ಕರುಣಾಕರ ಶೆಟ್ಟಿ, ವಿ.ಬಿ. ಶಿವನಗೌಡ್ರ, ಕೆ.ಬಿ. ಗುಡಿಹಾಳ, ಮಂಜುನಾಥ ಧನಿಗೊಂಡ ಎ.ಬಿ. ಮಿಠಾಯಿಗಾರ, ಎಸ್.ಎಸ್. ಅಮರಗೋಳ, ಫರಿದಾ ಬೇಪಾರಿ, ಅನಂತ ರಘಪ್ಪನವರ, ಕೆ.ಎಂ. ಚುಟಗೇನವರ, ಐ.ಆರ್. ಮಳ್ಳೂರ ಇತರರಿದ್ದರು.