ಜಿಲ್ಲೆ

ಸಾಲ ಮರುಪಾವತಿಯಿಂದ ಬ್ಯಾಂಕ್ ಅಭಿವೃದ್ಧಿ

ಬಸವರಾಜ ವೀರಪ್ಪ ಗರಗ

ಕುಂದಗೋಳ: ಸಹಕಾರಿ ಸಂಘಗಳನ್ನು ಮುನ್ನಡೆಸುವುದು ಸವಾಲಿನ ಪ್ರಶ್ನೆಯಾಗಿದೆ. ಈ ಬ್ಯಾಂಕು ರೈತರ ನಡುವೆ ಅನನ್ಯವಾದ ಸಂಬಂಧ ಹೊಂದಿದೆ. ಬ್ಯಾಂಕ್ ಅಭಿವೃದ್ಧಿಗೊಳ್ಳಬೇಕಾದರೆ ಸಾಲ ಪಡೆದವರು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಬೇಕು ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು

ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆವರಣದಲ್ಲಿ ಬುಧವಾರ ಬ್ಯಾಂಕ್​ನ 61ನೇ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ಅರವಿಂದ ಕಟಗಿ ಮಾತನಾಡಿ, ಈ ಭಾಗದ ರೈತರು ಬ್ಯಾಂಕ್​ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಾಲ ವಸೂಲಾತಿಯಲ್ಲಿ ಕಳೆದ ವರ್ಷ ರಾಜ್ಯದಲ್ಲಿಯೇ ನಮ್ಮ ಬ್ಯಾಂಕ್ ಪ್ರಥಮ ಸ್ಥಾನ ಪಡೆದಿದೆ. ಪ್ರಸಕ್ತ ವರ್ಷ ಎರಡನೇ ಸ್ಥಾನದಲ್ಲಿ ಪ್ರಗತಿ ಕಂಡಿದೆ ಎಂದರು.

ರಾಜ್ಯ ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಉಳವಪ್ಪ ದಾಸನೂರ ಮಾತನಾಡಿ, ಜಿಲ್ಲೆಯಲ್ಲಿ ಪಿಎಲ್​ಡಿ ಬ್ಯಾಂಕ್​ಗಳು ಆರ್ಥಿಕವಾಗಿ ಉತ್ತಮ ಹಂತದಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಸಾಲ ನೀಡಲು ರಾಜ್ಯ ಸಮಿತಿಯಲ್ಲಿ ತೀರ್ವನಿಸಲಾಗಿದೆ ಎಂದರು.

ಸಹಕಾರಿ ಧುರೀಣ ಉಮೇಶ ಹೆಬಸೂರ ಮಾತನಾಡಿದರು. ಪಿಎಲ್​ಡಿ ಬ್ಯಾಂಕ್ ಉಪಾಧ್ಯಕ್ಷ ಕೆ.ಆರ್. ಡಗಲಿ, ರಾಜು ಶಿವಳ್ಳಿ, ಬಸಪ್ಪ ಸಂಭೋಜಿ, ಮಹದೇವಪ್ಪ ಇಚ್ಚಂಗಿ, ಶಂಕರಗೌಡ ಪಾಟೀಲ, ಮಲ್ಲಪ್ಪ ತಡಸದ, ಗದಿಗೆಪ್ಪ ಮೇಲಿನಮನಿ, ಶಾಬುದ್ದೀನ್ ನದಾಫ್, ಅನಸವ್ವ ಕೊಪ್ಪದ, ಸಿದ್ದೇಶ್ವರ ನೇಗಿನಾಳ, ಚೇತನ ಕುಮಾರ ಗೌರಣ್ಣವರ, ಮಹಾಂತೇಶ ಶ್ಯಾಗೋಟಿ, ಸೋಮರಾವ್ ದೇಸಾಯಿ, ನಾಗರಾಜ ದೇಶಪಾಂಡೆ, ಇತರರಿದ್ದರು.

ಬ್ಯಾಂಕ್ ವ್ಯವಸ್ಥಾಪಕ ಸಂತೋಷ ಚಚಡಿ ಬ್ಯಾಂಕಿನ ಪ್ರಗತಿ ಕುರಿತು ಮಾತನಾಡಿದರು. ಪ್ರಕಾಶ ಕೂಬಿಹಾಳ ಪ್ರಸಕ್ತ ಸಾಲಿನ ಬ್ಯಾಂಕಿನ ವ್ಯವಹಾರ ವಾಚನ ಮಾಡಿದರು.