ಕೊಪ್ಪಳದಲ್ಲಿ ಶನಿವಾರ ಜಿಲ್ಲಾಡಳಿತದಿಂದ ಸಂತ ಸೇವಾಲಾಲ್ ಜಯಂತಿ ಆಚರಿಸಲಾಯಿತು. ಎಡಿಸಿ ಸಿದ್ರಾಮೇಶ್ವರ, ಡಿಡಿಪಿಯು ಜಗದೀಶ್, ಆಹಾರ ಇಲಾಖೆ ಡಿಡಿ ಸೋಮಶೇಖರ್ ಬಿರಾದರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿರಿ ಸುಧಾಕರ ವಾನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ತಹಸೀಲ್ದಾರ್ ವಿನಾಯಕ್ ಗೋಡಬೊಲೆ ಇದ್ದರು.  
ಜಿಲ್ಲೆ

ಬಂಜಾರರ ಆರಾಧ್ಯ ದೈವ ಸಂತ ಸೇವಾಲಾಲ್-ಎಡಿಸಿ ಸಿದ್ರಾಮೇಶ್ವರ ಅಭಿಮತ

ಶ್ರೀನಾಥ

ಕೊಪ್ಪಳ: ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಆಚರಿಸಲಾಯಿತು.

ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಸೇವಾಲಾಲರು ಬಂಜಾರ ಸಮುದಾಯದ ಆರಾಧ್ಯ ದೈವ ಹಾಗೂ ಪವಾಡ ಪುರುಷ. ಇವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದರು.

ಡಿಡಿಪಿಯು ಜಗದೀಶ್, ಆಹಾರ ಇಲಾಖೆ ಡಿಡಿ ಸೋಮಶೇಖರ್ ಬಿರಾದರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿರಿ ಸುಧಾಕರ ವಾನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ತಹಸೀಲ್ದಾರ್ ವಿನಾಯಕ್ ಗೋಡಬೊಲೆ, ಡಿಸಿ ಕಚೇರಿ ಶಿರಸ್ತೇದಾರ ಜಗದೀಶ, ರೇಷ್ಮೆ ಇಲಾಖೆ ರಾಜಶೇಖರ ಮತ್ತು ಬಂಜಾರ ಸಮುದಾಯ ಮುಖಂಡರಾದ ಯಮನೂರಪ್ಪ, ಪರಸಪ್ಪ, ಹನುಮಂತಪ್ಪ ಮಡ್ಡಿ, ಯಮನಪ್ಪ, ಸೋವ್ಲಾ ನಾಯ್ಕ, ರಾಜು ನಾಯ್ಕ, ಎಕ್ಸಸ್ ಬ್ಯಾಂಕ್‌ನ ಅಸಿಸ್ಟೆಂಟ್ ವ್ಯಾನೇಜರ್ ರವಿ ನಾಯ್ಕ ಇತರರಿದ್ದರು.