ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಐಜಿ ಚಂದ್ರಶೇಖರ್​, ಎಸ್​ಪಿ ವಂಶಿಕೃಷ್ಣ, ಎಎಸ್ಪಿ ಲಕ್ಷಿ$್ಮಗಣೇಶ್​, ನೆಲಮಂಗಲ ಡಿವೆಎಸ್ಪಿ ಗೌತಮ್​, ಮಾದನಾಯಕನಹಳ್ಳಿ ಪಿಐ ಮಂಜುನಾಥ್​ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. 
ಜಿಲ್ಲೆ

ಗಾಂಜಾ ದಂಧೆಯಲ್ಲಿ ಕಾಲೇಜು ವಿದ್ಯಾರ್ಥಿಗಳು! : ಆಫ್ರಿಕನ್​ ಪ್ರಜೆಗಳಿಂದ ಮಾದಕವಸ್ತು ಖರೀದಿ

ಬೆಂಗಳೂರು ಗ್ರಾಮಾಂತರ: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಗಾಂಜಾ ದಂಧೆಕೋರರ ಬೆನ್ನುಬಿದ್ದಿರುವ ಜಿಲ್ಲಾ ಪೊಲೀಸರಿಗೆ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳೇ ಈ ದಂಧೆಯಲ್ಲಿ ಸಕ್ರಿಯರಾಗಿರುವ ಆಘಾತಕಾರಿ ಅಂಶ ಪತ್ತೆಯಾಗಿದೆ.


ಮಾದನಾಯನಹಳ್ಳಿ ಠಾಣಾ ವ್ಯಾಪ್ತಿಯ ತಮ್ಮೇನಹಳ್ಳಿಯ ಖಾಸಗಿ ಕಾಲೇಜಿನ ಬಳಿ ಮಾದಕ ಪದಾರ್ಥ ಮಾರಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರಿಗೆ ಕೇರಳ ಮತ್ತು ಆಂಧ್ರ ಮೂಲದ ಬಿಬಿಎ, ಬಿಎ, ಎಂಬಿಎ, ಇಂಜಿನಿಯರಿಂಗ್​ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ವಿದ್ಯಾರ್ಥಿಗಳು ಆಫ್ರಿಕನ್​ ಪ್ರಜೆಗಳಿಂದ ಮಾದಕ ವಸ್ತುಗಳನ್ನು ಖರೀದಿಸಿ, ಬೆಂಗಳೂರಿನ ಎಂಜಿ ರಸ್ತೆ, ಕೋರಮಂಗಲ, ಇಂದಿರಾನಗರ ಸೇರಿ ವಿವಿಧೆಡೆ ಪ್ರತಿಷ್ಠಿತರ ಪಾರ್ಟಿಗಳಲ್ಲಿ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜತೆಗೆ ಆಂಧ್ರಪ್ರದೇಶದ ವಿಶಾಖಪಟ್ಟಣಂ, ಒಡಿಶಾ ಗಡಿ ಭಾಗದಿಂದ ಗಾಂಜಾ ತಂದು ಕಾಲೇಜು ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ಮಾಡುತ್ತಿದ್ದರು. ಇದರ ಜತೆಗೆ ಲಾರಿ ಚಾಲಕರನ್ನೇ ಗುರಿಯಾಗಿಸಿಕೊಂಡು ವ್ಯವಹಾರ ಕುದುರಿಸಿಕೊಂಡಿದ್ದರು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.
ಆರೋಪಿಗಳಿಂದ 10 ಲ ರೂ.ಬೆಲೆ ಬಾಳುವ 62 ಗ್ರಾಂ ಎಡಿಎಂಎ, 1 ಕೆಜಿ ಗಾಂಜಾ, 4 ಮೊಬೆಲ್​, 1 ಬೆಕ್​ ಜಪ್ತಿ ಮಾಡಲಾಗಿದೆ.


ಡ್ರಗ್ಸ್​ ಪೆಡ್ಲರ್​ಗಳ ಬಂಧನ: ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್​, ಗಾಂಜಾ, ಎಂಡಿಎಂಎ ಮಾರಾಟ ಮಾಡುತ್ತಿದ್ದ ಜಾಲವನ್ನು ಗ್ರಾಮಾಂತರ ಜಿಲ್ಲಾ ಪೊಲೀಸರು ಭೇದಿಸಿದ್ದು, ಅಂತಾರಾಜ್ಯ ಡ್ರಗ್ಸ್​ ಪೆಡ್ಲರ್​ಗಳನ್ನು ಬಂಧಿಸಲಾಗಿದೆ ಎಂದು ಐಜಿಪಿ ಎಂ.ಚಂದ್ರಶೇಖರ್​ ತಿಳಿಸಿದರು. ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 3 ಪ್ರತ್ಯೇಕ ಪ್ರಕರಣಗಳ ತನಿಖೆಯಲ್ಲಿ 66 ಕೆಜಿ ಗಾಂಜಾ, 62ಗ್ರಾಂ ಎಂಡಿಎಂಎ ಸೇರಿ 25 ಲ ಬೆಳೆಬಾಳುವ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು. ಮಾದಾವರದ ನವಿಲೆ ಲೇಔಟ್​ ಬಳಿ ಗಾಂಜಾ ಮಾರುತ್ತಿದ್ದ 3 ಆರೋಪಿಗಳನ್ನು ಬಂಧಿಸಿದ್ದು, ಇದರಲ್ಲಿ ಪ್ರಮುಖ ಆರೋಪಿ ಆರ್​ಟಿ ನಗರ ನಿವಾಸಿಯಾಗಿದ್ದು, ಕೊಲೆ, ಅಪಹರಣ ಸೇರಿ 3 ಪ್ರಕರಣಗಳು ದಾಖಲಾಗಿವೆ. ಜತೆಗೆ, ಈ ಹಿಂದೆ ನಡೆದ ಡಿಜೆ ಹಳ್ಳಿ ಪ್ರಕರಣದಲ್ಲಿ ಸೇನಾ ವಾಹನ ಸುಟ್ಟು ಹಾಕಿದ ಪ್ರಕರಣದ ಆರೋಪಿಯಾಗಿದ್ದು ಇವರಿಂದ 25 ಲ ರೂ.ಮೌಲ್ಯದ 61 ಕೆಜಿ ಗಾಂಜಾ, 1 ಕಾರು, 1 ಬೆಕು, 3 ಮೊಬೆಲ್​ ವಶಪಡಿಸಿಕೊಳ್ಳಲಾಗಿದೆ.

ಸರಣಿ ಮನೆಗಳವು ಆರೋಪಿಗಳ ಸೆರೆ: ನೆಲಮಂಗಲ, ಕಾಚೋಹಳ್ಳಿ, ಮಾಚೋಹಳ್ಳಿ, ಗಂಗೊಂಡನಹಳ್ಳಿ, ದೊಂಬರಹಳ್ಳಿ, ನಾರಾಯಣಪ್ಪನಪಾಳ್ಯ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ ಹಾಗೂ ಮಾ.3ರಂದು ಮಾದನಾಯಕನಹಳ್ಳಿ ಗ್ರಾಮದ ಗಂಗಣ್ಣರ ಮನೆಯಲ್ಲಿ ಕಳ್ಳತನ ಪ್ರಕರಣ ತನಿಖೆ ನಡೆಸಿದ್ದು ಸ್ಥಳದಲ್ಲಿ ಸಿಕ್ಕ ಬೆರಳು ಮುದ್ರೆ ಆಧಾರವಾಗಿ ಮಾದನಾಯಕನಹಳ್ಳಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇವರಿಂದ 500ಗ್ರಾಂ ಚಿನ್ನಾಭರಣ, ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳ ನಾನಾ ಪ್ರಕರಣಗಳಡಿ 22 ಆರೋಪಿಗಳನ್ನು ಬಂಧಿಸಿದ್ದು, 50ಲ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಗ್ರಾಮಾಂತರ ಎಸ್ಪಿ ಡಾ.ಕೆ.ವಂಶಿಕಷ್ಣ ನೇತತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತಂಡದಲ್ಲಿ ಎಎಸ್ಪಿ ಲಕ್ಷ್ಮೀ ಗಣೇಶ್​, ನೆಲಮಂಗಲ ಡಿವೆಎಸ್ಪಿ ಗೌತಮ್​, ಮಾದನಾಯಕನಹಳ್ಳಿ ಪಿಐ ಮಂಜುನಾಥ್​, ಪಿಎಸ್​ಐಗಳಾದ ರೇಣುಕಾಪ್ರಸಾದ್​, ದಾಳೇಗೌಡ, ಸಿಬ್ಬಂದಿ ಎಎಸ್​ಐ ಕೆಂಪಣ್ಣ, ಮಲ್ಲಗೊಂಡಿ, ಚಂದ್ರು, ನರೇಶ್​ಕುಮಾರ್​, ಪರ್ವಿಜ್​ಪಾಷ, ಪೆರೋಜ್​, ವೆಂಕಟೇಶ್​, ಹಾಜಿಮಲಂಗ, ಭಾಗ್ಯ ಇದ್ದರು.