ಜಿಲ್ಲೆ

ಸೇಟ್- ಸಿ ರಹೀಂ ಕಾಂಪೌಂಡ್‌ನಲ್ಲಿ ಅಭಿವೃದ್ಧಿ ಮರೀಚಿಕೆ

ಕೋಲಾರ ಡೆಸ್ಕ್

ಜಿ.ನಾಗರಾಜ್ ಬೂದಿಕೋಟೆ

ಬಂಗಾರಪೇಟೆಯ ಸೇಟ್ ಕಾಂಪೌಂಡ್ ಮತ್ತು ಸಿ ರಹೀಂ ಕಾಂಪೌಂಡ್ ಬಡಾವಣೆಯಲ್ಲಿ ಚರಂಡಿ ಸೇರಿ ಹತ್ತು ಹಲವು ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಪುರಸಭೆ ಸಮಸ್ಯೆಗೆ ಮುಕ್ತಿ ಕಾಣಲು ಮುಂದಾಗಿಲ್ಲ.

ಪಟ್ಟಣದ ಪುರಸಭೆ ಹಾಗೂ ತಾಲೂಕು ಕಚೇರಿಗೆ ಸಮೀಪವಿರುವ ಸೇಟ್ ಕಾಂಪೌಂಡ್ ಮತ್ತು ಸಿ ರಹೀಂ ಕಾಂಪೌಂಡ್ ಒಂದು ರೀತಿಯಲ್ಲಿ ಆಧುನಿಕತೆಗೆ ತಕ್ಕಂತೆ ಮುಂದುವರೆಯದ ವಾರ್ಡ್‌ಗಳಾಗಿ ರೂಪುಗೊಂಡಿವೆ. ಎರಡೂ ವಾರ್ಡ್‌ಗಳಲ್ಲಿ ಹೆಚ್ಚಾಗಿ ಮುಸ್ಲಿಂ ಸಮುದಾಯದವರೇ ಹೆಚ್ಚಾಗಿ ವಾಸವಿದ್ದು, ಸೇಟ್ ಕಾಂಪೌಂಡ್‌ಗೆ ಶಂಷುದ್ದೀನ್ ಬಾಬು ಮತ್ತು ಸಿ ರಹೀಂ ಕಾಂಪೌಂಡ್‌ಗೆ ಸಾಧಿಕ್ ಇಬ್ಬರೂ ಮುಸ್ಲಿಂ ಸಮುದಾಯದವರೇ ಪುರಸಭೆ ಸದಸ್ಯರಾಗಿ ಆಯ್ಕೆಯಾದರೂ ಅಭಿವೃದ್ಧಿಗೆ ಒತ್ತು ನೀಡದಿರುವುದು ದುರಂತ.

ರಾಜಕಾಲುವೆ ನೀರು ಮನೆಗಳಿಗೆ: ಸೇಟ್ ಕಾಂಪೌಂಡ್‌ಗೆ ಹೊಂದಿಕೊಂಡಂತೆ ರಾಜಕಾಲುವೆ ಇದ್ದು, ಕೋಲಾರ ಮುಖ್ಯ ರಸ್ತೆಯಿಂದ ಇಲ್ಲಿನ ರಾಜಕಾಲುವೆಗೆ ಪಟ್ಟಣದ ತ್ಯಾಜ್ಯ ನೀರು ಹರಿದು ಬರುತ್ತದೆ. ಹೀಗೆ ಹರಿಯುವ ತ್ಯಾಜ್ಯ ನೀರಿಗೆ ಕಾಲುವೆ ಇಲ್ಲದೇ ಮಳೆಗಾಲದಲ್ಲಿ ಚರಂಡಿ ಮತ್ತು ಮಳೆಯ ನೀರು ಮನೆಗಳಿಗೆ ನುಗ್ಗುತ್ತದೆ. ಮನೆಯಲ್ಲಿನ ದವಸ ಧಾನ್ಯಗಳು, ಬಟ್ಟೆ ಸೇರಿ ಅಗತ್ಯ ವಸ್ತುಗಳು ನೀರು ಪಾಲಾಗುವುದು ಸಾಮಾನ್ಯವಾಗಿದೆ. ಈ ಕಾರಣದಿಂದ ಇಲ್ಲಿನ ನಿವಾಸಿಗಳು ಮನೆಗಳಲ್ಲಿ ವಾಸಿಸಲು ಭಯಪಡುತ್ತಾರೆ. ಈ ಬಗ್ಗೆ ಹಲವು ಬಾರಿ ಪುರಸಭೆಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯ ನಾಗರಿಕರು.

ಮಾರುಕಟ್ಟೆಯದೇ ಸಮಸ್ಯೆ: ಹಲವು ದಶಕಗಳ ಹಿಂದೆ ನಿರ್ಮಿಸಿದ ವಾರುಕಟ್ಟೆಯ ಅಂಗಡಿಗಳು ಶಿಥಿಲಾವಸ್ಥೆ ತಲುಪಿವೆ. ವಾರುಕಟ್ಟೆಯಲ್ಲಿ ಸಮರ್ಪಕ ಸ್ವಚ್ಛತೆ ಇಲ್ಲದ ಕಾರಣ ದುರ್ನಾತ ಬೀರುತ್ತದೆ. ಜತೆಗೆ ವಾರುಕಟ್ಟೆಯಿಂದ ಬರುವ ತ್ಯಾಜ್ಯ ಹಾಗೂ ಇತರೆ ವಾಲಿನ್ಯಕಾರಕ ಪದಾರ್ಥಗಳು, ರಕ್ತ ಇತ್ಯಾದಿ ಚರಂಡಿಗೆ ಸೇರುವುದರಿಂದ ವಾಲಿನ್ಯ ಹೆಚ್ಚಾಗುತ್ತಿದೆ. ಅಲ್ಲಲ್ಲಿ ಕಸದ ರಾಶಿಗಳ ದರ್ಶನವಾಗುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

ಸೇಟ್ ಕಾಂಪೌಂಡ್‌ನಲ್ಲಿ ನಿವಾಸಿಗಳಿಗೆ ಚರಂಡಿ ವ್ಯವಸ್ಥೆಯೇ ಇಲ್ಲ. ಹಲವು ವರ್ಷಗಳಿಂದ ಸಮಸ್ಯೆ ನಿವಾರಿಸಲು ಸಂಬಂಧಪಟ್ಟವರಿಗೆ ಮನವಿ ವಾಡಿದರೂ ಬಗೆಹರಿಸಿಲ್ಲ. ಇದರಿಂದ ವಾರ್ಡ್‌ನ ನಿವಾಸಿಗಳು ಮಳೆ ಬಂದರೆ ಸಮಸ್ಯೆ ಎದುರಿಸುವುದು ಸಾವಾನ್ಯವಾಗಿದೆ. ಜತೆಗೆ ಚಿಕನ್ ವಾರುಕಟ್ಟೆಯಿಂದ ಸಮಸ್ಯೆ ಬಿಗಡಾಯಿಸಿದ್ದು, ಶ್ರೀ ವಾರುಕಟ್ಟೆ ಸ್ಥಳಾಂತರಿಸಬೇಕು. - ಶಿವ ಸ್ಥಳೀಯ ನಿವಾಸಿ ಸೇಟ್ ಕಾಂಪೌಂಡ್ ತಗ್ಗು ಪ್ರದೇಶದಲ್ಲಿದ್ದು, ಮಳೆಗಾಲದಲ್ಲಿ ಕೆಲ ಮನೆಗಳಿಗೆ ಮಳೆ ಹಾಗೂ ಚರಂಡಿ ನೀರು ನುಗ್ಗಲಿದೆ. ತುಂಬಾ ತಗ್ಗು ಪ್ರದೇಶದಲ್ಲಿ ಇರುವಂತಹ ಮನೆಗಳನ್ನು ಸ್ಥಳಾಂತರಿಸುವಂತೆ ಕುಟುಂಬಸ್ಥರಿಗೆ ಮನವಿ ವಾಡಿದರೂ ಸ್ಪಂದಿಸುತ್ತಿಲ್ಲ. ಹಾಗಾಗಿ ಶಾಸಕರಿಗೆ ಚರಂಡಿ ವ್ಯವಸ್ಥೆ ಸರಿಪಡಿಸಲು ಮನವಿ ಮಾಡಲಾಗಿದೆ. ಅದರಂತೆ ಪುರಸಭೆಯಿಂದ ಚರಂಡಿ ಅಭಿವೃದ್ಧಿಪಡಿಸಲಾಗುತ್ತದೆ. ಶ್ರೀ ವಾಂಸದ ವಾರುಕಟ್ಟೆಯನ್ನು ಪ್ರತ್ಯೇಕವಾಗಿ ನಿರ್ಮಿಸಿ ಹಳೆಯ ವಾರುಕಟ್ಟೆಯ ಕಟ್ಟಡ ನೆಲಸಮಗೊಳಿಸಲಾಗುವುದು. - ಶಂಷುದ್ದೀನ್ ಬಾಬು ವಾರ್ಡ್ ಸದಸ್ಯ ಶಾಸಕರ ನೇತೃತ್ವದಲ್ಲಿ ಕೋಳಿ ಮತ್ತು ಮೀನು ಮಾಂಸ ಮಾರಾಟಕ್ಕೆ ಒಂದೇ ಕಡೆ ನೂತನ ವಾರುಕಟ್ಟೆ ನಿರ್ಮಿಸಲಾಗಿದೆ. ಮನೆ ಮತ್ತು ಚರಂಡಿ ಕಾಮಗಾರಿ ಸರಿಯಾಗಿ ನಿರ್ಮಿಸದ ಕಾರಣ ಮಳೆ ಬಂದರೆ ಕೆಲ ಏರಿಯಾಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗುವುದು ಸಾವಾನ್ಯವಾಗಿದೆ. ಕೆಲ ಮನೆಗಳನ್ನು ನೆಲಸಮಗೊಳಿಸಿ ಹೊಸದಾಗಿ ನಿರ್ಮಿಸಲು ಕ್ರಮಕ್ಕೆ ಮುಂದಾದರೆ ಮನೆಗಳಿಗೆ ಯಾವುದೇ ದಾಖಲೆಗಳು ಇಲ್ಲ. ಅಧ್ಯಕ್ಷರು ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ. - ಸಾಧಿಕ್ ಪುರಸಭೆ ಸದಸ್ಯ