ಜಿಲ್ಲೆ

ದೇಶಾಭಿಮಾನದಿಂದ ರಾಷ್ಟ್ರಧ್ವಜ ಖರೀದಿಸಿ

Bengaluru Rural

ಬೆಂಗಳೂರು ಗ್ರಾಮಾಂತರ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಆ.13ರಿಂದ 15ರವರೆಗೆ ಪ್ರತಿ ಮನೆಯಲ್ಲಿಯೂ ರಾಷ್ಟ್ರಧ್ವಜ ಹಾರಿಸುವ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಖಾದಿ ಅಥವಾ ಇತರೆ ಬಟ್ಟೆಗಳ ರಾಷ್ಟ್ರಧ್ವಜವನ್ನು ಬಳಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.


ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಗುರುವಾರ ವಿಶ್ವನಾಥಪುರ ಗ್ರಾಮ ಪಂಚಾಯತಿಯ ಜಾಗೃತಿ ಸಂಜೀವಿನಿ ಗ್ರಾಮ ಪಂಚಾಯತಿ ಒಕ್ಕೂಟ ವತಿಯಿಂದ ತೆರೆಯಲಾದ ರಾಷ್ಟ್ರಧ್ವಜ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.


ಹರ್ ಘರ್ ತಿರಂಗಾ ಅಭಿಯಾನ ಹಿನ್ನೆಲೆಯಲ್ಲಿ ಖಾದಿ ಹಾಗೂ ಖಾದಿಯೇತರ ಧ್ವಜಗಳ ಮಾರಾಟಕ್ಕೂ ಅವಕಾಶವಿರುವುದರಿಂದ ರಾಷ್ಟ್ರಧ್ವಜ ಮಾರಾಟ ಉತ್ತಮವಾಗಿ ಸಾಗುತ್ತಿದೆ. ಶಾಲಾ-ಕಾಲೇಜುಗಳು, ಸಂಘ ಸಂಸ್ಥೆಗಳು, ಸರ್ಕಾರಿ ಸಾಮ್ಯದ ಉದ್ದಿಮೆಗಳು, ಸರ್ಕಾರಿ ಕಚೇರಿಗಳಲ್ಲಿ ಖಾದಿಯಿಂದ ನೇಯಲ್ಪಟ್ಟಿದ್ದ ರಾಷ್ಟ್ರಧ್ವಜವನ್ನೇ ಹಾರಿಸುತ್ತಾ ಬಂದಿದ್ದು, ಈ ಬಾರಿಯೂ ಖಾದಿ ಬಟ್ಟೆಯಿಂದ ತಯಾರಿಸಿರುವ ಧ್ವಜಗಳನ್ನೇ ಬಳಸಬೇಕು ಎಂದು ತಿಳಿಸಿದರು.