ಬೆಂಗಳೂರು: (Bangalore rain) ಸಿಲಿಕಾನ್ ಸಿಟಿ ಬೆಂಗಳೂರು ನಿನ್ನೆ ಇದ್ದಕ್ಕಿಂದ್ದಂತೆ ಮಳೆಯಾಗಿದೆ. ಈ ಭಾರಿ ಮಳೆಗೆ ಮರ ಬುಡಸಮೇತ ಉರುಳಿ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
‘ರಕ್ಷಾ’ ಮೃತ ಮಗು. ನಿನ್ನೆ ರಾತ್ರಿ 8.10ರ ಸಮಯ ಮಳೆ ಜೋರಾಗಿ ಆರ್ಭಟಿಸುತ್ತಿದ್ದಂತೆ ಪುಲಕೇಶಿನಗರದ ಜೀವನಹಳ್ಳಿಯಲ್ಲಿ ರಸ್ತೆಯಾಗಿ ತಂದೆ ಸತ್ಯ, ತನ್ನ 3 ವರ್ಷದ ಮಗಳು ರಕ್ಷಾ ಜತೆ ಬೈಕ್ನಲ್ಲಿ ಬರ್ತಿದ್ರು.. ಜೀವಹಳ್ಳಿ ರಸ್ತೆ ಕ್ರಾಸ್ ಮಾಡೋಣ ಅನ್ನುವಷ್ಟರಲ್ಲಿ ಹೆಮ್ಮರವೊಂದು ಬುಡ ಸಮೇತ ಕಿತ್ತು ಬೈಕ್ ಮೇಲೆ ಬಿದ್ದಿತ್ತು.
ಮರ ಬಿದ್ದ ರಭಸಕ್ಕೆ ಬಾಲಕಿಯ ತಲೆಗೆ ಗಂಭೀರವಾಗಿ ಪೆಟ್ಟಾಗಿ ರಕ್ತ ಸೋರ್ತಿತ್ತು. ಅರೆ ಪ್ರಜ್ಞೆಯಲ್ಲಿದ್ದ ತಂದೆ ಮಗಳನ್ನ ಸ್ಥಳೀಯರು ರಕ್ಷಣೆ ಮಾಡಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ರು.. ಆದ್ರೆ ಅಷ್ಟರಲ್ಲೇ ರಕ್ಷಾ ಉಸಿರು ನಿಂತು ಬಿಟ್ಟಿತ್ತು.. ಮುದ್ದಾದ ಮಗಳನ್ನ ಕಳೆದುಕೊಂಡ ಕುಟುಂಬ ಕಣ್ಣೀರು ಸುರಿಸಿದೆ. ಸದ್ಯ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ, ಮರ ತೆರವು ಮಾಡಿಸಿದ್ದಾರೆ.
ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರಿನ ಹಲವೆಡೆ ಸುಮಾರು 48 ಮರಗಳು ಧರೆಗೆ ಉರುಳಿರೋ ಮಾಹಿತಿ ಇದೆ. ಇನ್ನು ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಚಿಕ್ಕಬಳ್ಳಾಪುರ, ಕೋಲಾರ, ಮತ್ತು ರಾಮನಗರದಲ್ಲೂ ಮಳೆ ಆಗಮನ ಆಗಿದೆ.