ಬೆಂಗಳೂರು: ಅನಗತ್ಯವಾಗಿ ಓಡಾಡುತ್ತಿದ್ದ 5,106 ದ್ವಿಚಕ್ರ ವಾಹನ, 181 ಆಟೋರಿಕ್ಷಾ ಹಾಗೂ 263 ನಾಲ್ಕು ಚಕ್ರದ ವಾಹನ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಲಾಕ್ಡೌನ್ ವೇಳೆ ಅಗತ್ಯ ಸೇವೆ ಪೂರೈಸá-ವವರಿಗೆ ಡಿಸಿಪಿ ಕಚೇರಿಗಳಲ್ಲಿ ನೀಡಲಾಗುತ್ತಿದ್ದ ಸಾಮಾನ್ಯ ಪಾಸ್ಗಳು ದುರ್ಬಳಕೆಯಾಗುತ್ತಿವೆ ಎಂದು ಟ್ವಿಟರ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಗತ್ಯ ಕಾರಣಕ್ಕೆ ಓಡಾಡುವವರಿಗೆ ಪಾಸ್ ನೀಡಲಾಗಿತ್ತು. ಆದರೆ, ಕೆಲವರು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾವು ಲಾಠಿ ಉಪಯೋಗಿಸುತ್ತಿಲ್ಲ. ತುಂಬಾ ತಾಳ್ಮೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.
ಅನಗತ್ಯವಾಗಿ ಓಡಾಡುತ್ತಿರುವ ವಾಹನಗಳನ್ನು ವಶಕ್ಕೆ ಪಡೆಯಲು ನಿರ್ಧರಿಸಿದ್ದೇವೆ. ಸಣ್ಣ-ಪುಟ್ಟ ಕಾರಣಗಳಿಗೆ ವಿನಾಯಿತಿ ಕೊಡಲು ಸಾಧ್ಯವಿಲ್ಲ. ದಯವಿಟ್ಟು ನಿಮ್ಮ ಕಾರು ಚಾಲಕರು, ವಾಚ್ವುನ್, ಮನೆಗೆಲಸಗಾರರನ್ನು ಪ್ರತಿನಿತ್ಯ ಮನೆಯಿಂದ ಹೊರಗೆ ಕಳಿಸಬೇಡಿ. ನಿಮ್ಮ ಮನೆಯಲ್ಲೇ ಇರಲು ವ್ಯವಸ್ಥೆ ಕಲ್ಪಿಸಿ. ಅಂತವರಿಗೆ ಓಡಾಡಲು ಪ್ರತ್ಯೇಕ ಪಾಸ್ ಕೇಳಬೇಡಿ ಎಂಬುದಾಗಿ ಮನೆ ಮಾಲೀಕರಿಗೆ ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ.
ತಪಾಸಣೆ ಮತ್ತಷ್ಟು ಬಿಗಿಗೊಳಿಸಲು ಸೂಚನೆ: ವಾಯುವಿಹಾರಕ್ಕೆ ತೆರಳುವ ದಿರಿಸಿನಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಭಾಸ್ಕರ್ ರಾವ್ ವಾಹನ ತಪಾಸಣೆ ನಡೆಸಿ, ಕೆಲ ವಾಹನಗಳನ್ನು ಜಪ್ತಿ ಮಾಡಿದರು. ಟೌನ್ಹಾಲ್ ಬಳಿ ತಪಾಸಣೆ ನಡೆಸಿದ ಭಾಸ್ಕರ್ ರಾವ್, ಎಲ್ಲಿಂದ ಬರ್ತಾ ಇರೋದು, ಗಾಡಿ ಸೈಡ್ಗೆ ಹಾಕಿ, ಪಾಸ್ ಇದೆಯೇ ಎಂದು ವಾಹನ ಮಾಲೀಕರನ್ನು ತಡೆದು ವಿಚಾರಿಸಿದರು. ತಪಾಸಣೆ ಸರಿಯಾಗಿ ಆಗುತ್ತಿಲ್ಲ. ಮತ್ತಷ್ಟು ಬಿಗಿಗೊಳಿಸಿ ಎಂದು ಸಿಬ್ಬಂದಿಗೆ ಸೂಚಿಸಿದರು.
ಐದು ಪ್ರಕರಣ ದಾಖಲು: ಹೋಂ ಕ್ವಾರಂಟೈನ್ನಲ್ಲಿದ್ದರೂ ಮನೆಯಿಂದ ಹೊರ ಬಂದವರ ವಿರುದ್ಧ ನಗರದಲ್ಲಿ ಇದುವರೆಗೆ ಒಟ್ಟಾರೆ ಐದು ಪ್ರಕರಣಗಳು ದಾಖಲಾಗಿವೆ ಎಂದು ಕಮಾಂಡ್ಸೆಂಟರ್ ಡಿಸಿಪಿ ಇಶಾ ಪಂತ್ ತಿಳಿಸಿದ್ದಾರೆ.
ನಿಜಾಮುದ್ದೀನ್ಗೆ ಹೋದವರ ಪಟ್ಟಿ ತಯಾರು: ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದ ಧಾರ್ವಿುಕ ಸಭೆಗೆ ಹೋಗಿ ಬಂದವರ ಪಟ್ಟಿ ಮಾಡಲಾಗುತ್ತಿದೆ. ಬೆಂಗಳೂರಿನಿಂದ ಹೋದವರನ್ನು ನಾವೇ ಹೋಗಿ ಕೇಳುತ್ತೇವೆ. ವೈದ್ಯರ ಜತೆ ರ್ಚಚಿಸಿ ಅವರನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಬೇಕೋ ಅಥವಾ ಸರ್ಕಾರಿ ಕ್ವಾರಂಟೈನ್ಗೆ ಒಳಪಡಿಸಬೇಕೋ ಎಂಬ ಬಗ್ಗೆ ತೀರ್ವನಿಸಲಾಗುವುದು. ನಾವು ಅವರನ್ನು ಹೆದರಿಸಲು ಹೋಗುತ್ತಿಲ್ಲ. ಅವರ ವಿರುದ್ಧ ಪ್ರಕರಣವನ್ನೂ ದಾಖಲಿಸುವುದಿಲ್ಲ. ಅವರ ಬಳಿ ಈ ಬಗ್ಗೆ ಮನವಿ ಮಾಡುತ್ತೇವೆ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.