ಜಿಲ್ಲೆ

ಜಿಲ್ಲೆಯಿಂದಲೇ ಕನ್ನಡ ಹೋರಾಟದ ಕಾವು

ಕೋಲಾರ ಡೆಸ್ಕ್

ಕೋಲಾರ: ಕನ್ನಡ ನೆಲೆಸಿರುವುದು ಕೋಲಾರ ಜಿಲ್ಲೆಯಲ್ಲೇ, ತೆಲುಗು ಮಿಶ್ರಣ ಕಂಡು ಬಂದರೂ ಸಹ ಕನ್ನಡಕ್ಕೆ ಇಲ್ಲಿ ಸಿಗುವ ಗೌರವ ಬೇರೆಲ್ಲೂ ಸಿಗುವುದಿಲ್ಲ. ಯಾವುದೇ ಕನ್ನಡಪರ ಹೋರಾಟದ ಆರಂಭ ಇಲ್ಲಿಂದಲೇ ಕಾವು ಪಡೆದುಕೊಳ್ಳುತ್ತದೆ ಎಂದು ಕೃಷಿ ವಿಜ್ಞಾನಿ ಹಾಗೂ ಬರಹಗಾರ ಡಾ.ಕೆ.ಎನ್.ಗಣೇಶಯ್ಯ ಹೇಳಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಮಂಗಸಂದ್ರ ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ ರಾಜ್ಯೋತ್ಸವ ಪ್ರಯುಕ್ತ ದೇಸಿ ಆಹಾರ ಮೇಳ ಮತ್ತು ಮೂಡಲಪಾಯ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಕನ್ನಡದ ಲಿಪಿ ಮೂಲ ರಾಷ್ಟ್ರಕೂಟರದ್ದು ಆದರೆ ಕನ್ನಡದ ಭಾಷೆಯ ಮೂಲ ಅರಿಯಲು ಇನ್ನೂ ಆಳವಾದ ಅಧ್ಯಯನ ಅಗತ್ಯವಿದೆ ಎಂದರು.

ವಿವಿ ಕುಲಪತಿ ಪ್ರೊ.ನಿರಂಜನ ವಾನಳ್ಳಿ ವಾತನಾಡಿ, ಶಾಲಾ ಮಕ್ಕಳಿಗೆ ಕರ್ನಾಟಕ ಸಂ ತರಬೇತಿ ನೀಡಿ ಮೂಡಲಪಾಯ ಯಕ್ಷಗಾನ ಉಳಿಸುವ ಕೆಲಸ ವಾಡಿದೆ. ಕೃಷ್ಣಾರ್ಜನ ಕಾಳಗ ಪ್ರಸಂಗ ಅತ್ಯಂತ ಮನಮೋಹಕವಾಗಿ ಮೂಡಿ ಬಂದಿದ್ದು, ಪುಟ್ಟ ಮಕ್ಕಳು ತಮ್ಮಲ್ಲಿನ ಕಲೆಯನ್ನು ಅತ್ಯಂತ ನೈಪುಣ್ಯತೆಯಿಂದ ಪ್ರದರ್ಶಿಸಿದ್ದು, ನಿಜಕ್ಕೂ ದೊಡ್ಡ ಸಾಧನೆ ಹಾಗೂ ಅದ್ಬುತ ಎಂದು ಬಣ್ಣಿಸಿದರು.

ಜಾನಪದ ಅಕಾಡೆಮಿ ವಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ವಾತನಾಡಿ, ನಾಟಕ ನೋಡಲೆಂದೇ ನಾನು ಬಂದಿದ್ದೇನೆ, ಮಕ್ಕಳ ಈ ಅದ್ಬುತ ಪ್ರದರ್ಶನ ಮನಸೂರೆಗೊಂಡಿದ್ದು, ಈ ಮೂಡಲಪಾಯ ಯಕ್ಷಗಾನ ಕಲೆ ಉಳಿಸುವ ಕಾರ್ಯದಲ್ಲಿ ತಾವೂ ಕೈಜೋಡಿಸುವುದಾಗಿ ಘೊಷಿಸಿದರು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ವಿವಿಯ ಸಂಸ್ಥಾಪನ ದಿನದ ಅಂಗವಾಗಿ ನೀಡುವ ಉತ್ತರೋತ್ತರ ಪ್ರಶಸ್ತಿಯನ್ನು ಸಿರಿಧಾನ್ಯ ಮಹಿಳೆ ಗುಂಡಮನತ್ತ ಗ್ರಾಮದ ರತ್ನಮ್ಮ ಅವರಿಗೆ ಪ್ರದಾನ ವಾಡಲಾಯಿತು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವೆ ಡಾ.ಡಿ.ಕುಮುದಾ, ಮೌಲ್ಯವಾಪನ ಕುಲಸಚಿವ ಡಾ.ಕೆ.ತಿಪ್ಪೇಸ್ವಾಮಿ, ವಿತ್ತಾಧಿಕಾರಿ ವಸಂತಕುವಾರ್, ಕಲಾವಿದ ಮದ್ದೇರಿ ಮುನಿರೆಡ್ಡಿ ಹಾಜರಿದ್ದರು.

ಯಕ್ಷಗಾನ ಪ್ರದರ್ಶನ: ಮೂಡಲಪಾಯ ಯಕ್ಷಗಾನ ಪ್ರಸಂಗ ಕರ್ಣಾರ್ಜುನ ಕಾಳಗವನ್ನು ಮಂಡ್ಯ ಜಿಲ್ಲೆಯ ದೊಡ್ಡ ಬ್ಯಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಅಭಿನಯಿಸಿದ್ದು, ಸುವಾರು ಒಂದೂವರೆ ಗಂಟೆಗಳ ಕಾಲ ಪ್ರೇಕ್ಷರನ್ನು ಮಂತ್ರಮುಗ್ದರನ್ನಾಗಿಸಿತು. ಭಾಗವತಿಕೆ ರವಿಂದ್ರ ತಲಕಾಡು, ರಂಗ ಪರಿಷ್ಕರಣೆ ಮಂಜುನಾಥ ಎಲ್.ಬಡಿಗೇರ, ಮುಖವೀಣೆ ನಾರಾಯಣಸ್ವಾಮಿ ನಡೆಸಿಕೊಟ್ಟರು.

ದೇಸಿ ಆಹಾರಮೇಳ: ದೇಸಿ ಆಹಾರ ಮೇಳದಲ್ಲಿ ವಿವಿಯ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಅಂಗಡಿ ಮಳಿಗೆಗಳನ್ನು ಸ್ಥಾಪಿಸಿ ವ್ಯಾಪಾರ ನಡೆಸುವ ಮೂಲಕ ಎಲ್ಲರ ಗಮನ ಸೆಳೆದರು. ಮೇಳದಲ್ಲಿ ಬೊಂಡಾ, ಬಜ್ಜಿ, ಬಿರಿಯಾನಿ, ಕಾಯಿ ಹೋಳಿಗೆ, ಬೇಲ್, ಮಸಾಲೆಪುರಿ, ಚಹಾ ಮತ್ತಿತರ ನೂರಾರು ತಿನಿಸುಗಳ ವ್ಯಾಪಾರದ ಭರಾಟೆ ನಡೆಯಿತು.

ವಿಶಿಷ್ಟ ಆಚರಣೆ: ನಶಿಸಿ ಹೋಗುತ್ತಿರುವ ಮೂಡಲಪಾಯ ಯಕ್ಷಗಾನ ಕಲೆ ಉಳಿಸುವ ಪ್ರಯತ್ನವಾಗಿ ಮಂಡ್ಯ ಜಿಲ್ಲೆಯ ದೊಡ್ಡ ಬ್ಯಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಅದ್ಬುತ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಮೂಲಕ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ರಾಜ್ಯೋತ್ಸವನ್ನು ವಿಶಿಷ್ಟ ರೀತಿ ಆಚರಿಸಲಾಯಿತು.