ಬೆಂಗಳೂರು: ಬೆಂಗಳೂರಿನ ಕೆಟಿಪಿಓ ಆವರಣದಲ್ಲಿ ಎರಡು ದಿನಗಳ ಕಾಲ ನಡೆದಿದ್ದ ಕನೆಕ್ಟೆಡ್ ಅಟೋನಮಸ್ ಆ್ಯಂಡ್ ಎಲೆಕ್ಟ್ರಿಕ ವೆಹಿಕಲ್ ಎಕ್ಸ್‌ಪೋದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಮತ್ತೆರೆಡು ಪ್ರಶಸ್ತಿಗಳು ಲಭಿಸಿವೆ.
ಸದರಿ ಎಕ್ಸ್‌ಪೋ ಅತ್ಯಾಧುನಿಕ ಟೆಲಿಮ್ಯಾಟಿಕ್ಸೃ್ ಮತ್ತು ಸ್ಮಾರ್ಟ್ ಮೂಲಸೌಕರ್ಯದಿಂದ ಹಿಡಿದು ವಿದ್ಯುತ್ ಮತ್ತು ಸ್ವಯಂ ಚಾಲನಾ ವಾಹನಗಳಲ್ಲಿನ ಪ್ರಮುಖ ಪ್ರಗತಿಯವರೆಗೆ ಆಟೋಮೋಟಿವ್ ತಂತ್ರಜ್ಞಾನದಲ್ಲಿನ ಇತ್ತೀಚಿನ ಆವಿಷ್ಕಾರಗಳನ್ನು ಪ್ರದರ್ಶಿಸಿತು. ಈ ಎಕ್ಸ್‌ಪೋ ಜಾಗತಿಕ ಉದ್ಯಮದ ನಾಯಕರು ಮತ್ತು ತಜ್ಞರನ್ನು ಒಟ್ಟುಗೂಡಿಸಿ ಚಲನಶೀಲತೆಯ ಭವಿಷ್ಯವನ್ನು ಚರ್ಚಿಸುವ ವೇದಿಕೆಯಾಗಿತ್ತು.
ಈ ಮೇಳದಲ್ಲಿ ಬಿಎಂಟಿಸಿಗೆ ಪಯೋನಿರಿಂಗ್ ಇನ್ ಗ್ರೀನ್ ಪಬ್ಲಿಕ್ ಟ್ರಾನ್ಸಪೋರ್ಟ್ ಪ್ರಶಸ್ತಿ ಮತ್ತು ನೆಕ್ಸ್ಟ್ ಜೆನ್ ಕಮ್ಯೂಟರ್ ಕನ್ವಿನಿಯನ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಈ ಪ್ರಶಸ್ತಿಯು ಬಿಎಂಟಿಸಿ ಸಾರ್ವಜನಿಕ ಸಾರಿಗೆಯನ್ನು ಸುಧಾರಿಸಲು ಮತ್ತು ಹೆಚ್ಚಿನ ಪ್ರವೇಶ ವಿಧಾನದ ಆವಶ್ಯಕತೆಗೆ ಡಿಜಿಟಲ್ ಸಾಧನಗಳನ್ನು ಸ್ವೀಕರಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪೂರಕವಾಗಿದೆ.
ಬಿಎಂಟಿಸಿ ಕೇಂದ್ರೀಯ ವಲಯದ ಡಿಸಿ ಜಗದೀಶ್.ಎಂ ಮತ್ತು ಕಾರ್ಯನಿರ್ವಾಹಕ ವ್ಯವಸ್ಥಾಪಕ ಶರಣಬಸವರಾಜ್ ಕೆ.ಎಂ, ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.