ಚಾಮರಸ ಪಾಟೀಲ್ ಬೆಟ್ಟದೂರು. 
ಜಿಲ್ಲೆ

ಬೆಂಗಳೂರಿನಲ್ಲಿ 21ರಂದು ಬೃಹತ್ ರ‌್ಯಾಲಿ ನಡೆಸುವುದಾಗಿ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಪಾಟೀಲ್ ಮಾಹಿತಿ

ಮಾನ್ವಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡನೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.21 ರಂದು ಬೆಂಗಳೂರು ರೈಲ್ವೆ ನಿಲ್ದಾಣದಿಂದ ಫ್ರೀಡ್‌ಂ ಪಾರ್ಕ್‌ವರಗೆ ಬೃಹತ್ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಪಾಟೀಲ್ ಬೆಟ್ಟದೂರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ರಾಜ್ಯ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟಗಳು ಸೇರಿದಂತೆ 6 ಬಣಗಳ ನೇತೃತ್ವದಲ್ಲಿ ಅಹೋರಾತ್ರಿ ರಾತ್ರಿ ಧರಣಿ ನಡೆಸಲಾಗುತ್ತಿದೆ. ರೈತರು ಬೆಳೆದಿರುವ ಹತ್ತಿಯನ್ನು ಖರೀದಿಸಲು ಮಾನ್ವಿಯಲ್ಲಿ ಸಿಸಿಐ ಕೇಂದ್ರವನ್ನು ಪ್ರಾರಂಭಿಸಬೇಕು. ಕರೊನಾದಿಂದ ಸಂಕಷ್ಟಕ್ಕೆ ಗುರಿಯಾದ ರೈತರಿಗೆ ಪಾವತಿಸಬೇಕಾದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಪರಿಹಾರ ಒದಗಿಸಿಬೇಕು. ಸೆ.23 ರಂದು ಬಲ್ಲಟಗಿ ಗ್ರಾಮದಲ್ಲಿ ರೈತ ಹೋರಾಟಗಾರ ದಿ. ಸೂಗನಗೌಡ ಪಾಟೀಲ್ ಅವರ ನೆನಪಿನ ದಿನಾಚರಣೆ ಹಾಗೂ ಸೆ.25 ರಂದು ರಾಯಚೂರು ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಸೂಗೂರಯ್ಯ ಆರ್.ಎಸ್ ಮಠ, ಜಿಲ್ಲಾ ಉಪಾಧ್ಯಕ್ಷ ಲಿಂಗಾರೆಡ್ಡಿ ಪಾಟೀಲ್, ಬಸವರಾಜ ಮಾಲಿಪಾಟೀಲ್, ಜಿಲ್ಲಾ ಕೋಶಾಧ್ಯಕ್ಷ ವಿ.ಭೀಮೇಶ್ವರರಾವ್, ಮುಖಂಡರಾದ ಅಮರೇಶ ಆಲ್ದಾಳ, ದೇವೇಂದ್ರಪ್ಪ ಇದ್ದರು.