ಜಿಲ್ಲೆ

ಪಾಲಿಕೆಯ ಸಹಕಾರದೊಂದಿಗೆ ಬೆಂಗಳೂರು ಹಬ್ಬ

ಬೆಂಗಳೂರು: ಬಿಬಿಎಂಪಿಯ ಎಲ್ಲೆಡೆ ‘ಅನ್‌ಬಾಕ್ಸಿಂಗ್ ಬೆಂಗಳೂರು ೌಂಡೇಷನ್’ ವತಿಯಿಂದ ಡಿಸೆಂಬರ್‌ನಲ್ಲಿ ‘ಬೆಂಗಳೂರು ಹಬ್ಬ-2023’ ಆಚರಿಸಲು ಆಯಾ ವಲಯ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಈ ಸಂಬಂಧ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ವರ್ಚುವಲ್ ಸಭೆಯಲ್ಲಿ ವಿವಿಧ ವಲಯಗಳ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಬೆಂಗಳೂರಿನ ಬ್ರ್ಯಾಂಡ್ ಅನ್ನು ಹೆಚ್ಚಿಸುವ ಸಲುವಾಗಿ ಡಿಸೆಂಬರ್‌ನಲ್ಲಿ ಬೆಂಗಳೂರು ಹಬ್ಬವನ್ನು ಆಚರಿಸಲಿದೆ. ಇದಕ್ಕೆ ಬೇಕಾದಂತಹ ಸಹಕಾರವನ್ನು ಪಾಲಿಕೆಯಿಂದ ನೀಡಬೇಕಿದ್ದು, ಆಯಾ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು ಸೂಕ್ತ ಕ್ರಮ ಕೈಗೊಂಡು ಸಹಕಾರ ನೀಡಬೇಕೆಂದು ಸೂಚನೆ ನೀಡಿದರು.

ಬೆಂಗಳೂರು ಹಬ್ಬವನ್ನು 2024ರಿಂದ ಆಯಾ ಖುತುವಿಗೆ ತಕ್ಕಂತೆ ಹಬ್ಬಗಳನ್ನು ಆಚಾರಿಸಲಾಗುತ್ತದೆ. ಬೆಂಗಳೂರು ಹಬ್ಬಕ್ಕೆ ಪ್ರಮುಖ ಸ್ಥಳ, ಜಂಕ್ಷನ್‌ಗಳು, ಮೇಲುಸೇತುವೆ, ಉದ್ಯಾನವನ, ಮಾರುಕಟ್ಟೆಗಳನ್ನು ಗುರುತಿಸಿ ಆಯಾ ಸ್ಥಳಗಳಲ್ಲಿ ಸ್ವಚ್ಚತಾ ಕಾರ್ಯ ಕೈಗೊಳ್ಳಬೇಕು. ಪಾರಂಪರಿಕ ಕಟ್ಟಡಗಳು ಹಾಗೂ ಪ್ರಮುಖ ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಡಿ.1ರಿಂದ 11ರವರೆಗೆ ಹಬ್ಬ:

ಬೆಂಗಳೂರು ಹಬ್ಬದ ನಿರ್ದೇಶಕ ರವಿಚಂದರ್ ಮಾತನಾಡಿ, ಅನ್ ಬಾಕ್ಸಿಂಗ್ ಬೆಂಗಳೂರು ಫೌಂಡೇಷನ್ ವತಿಯಿಂದ ಡಿ.1ರಿಂದ 11ರವರೆಗೆ ಅನ್ ಬಾಕ್ಸಿಂಗ್ ಬಿ.ಎಲ್.ಆರ್ ಹಬ್ಬವನ್ನು ಆಚರಿಸಲಾಗುತ್ತಿದೆ. ಇದನ್ನು 12 ವರ್ಗಗಳಾಗಿ ವಿಂಗಡಿಸಿ 45 ಮಾದರಿಗಳಲ್ಲಿ ಆಚರಣೆ ಮಾಡಲಾಗುತ್ತಿದೆ. ಬೆಂಗಳೂರು ಹಬ್ಬದ ಆಚರಿಸುವ ಸಂಬಂದ ದೃಶ್ಯಾವಳಿಗಳನ್ನು ಚಿತ್ರೀಕರಿಸಲಾಗುವುದು. ಈ ಆಚರಣೆಯ ಕುರಿತು ಠಿಠಿ://ಚಿಚಿ.್ಠ್ಞಚಿಟ್ಡಜ್ಞಿಜಚ್ಝ್ಟಿ.್ಚಟಞ/ ವೆಬ್‌ಸೈಟ್‌ನಲ್ಲಿ ವಿವರಗಳನ್ನು ನಾಗರಿಕರು ಪಡೆದುಕೊಂಡು ನೋಂದಣಿಯಾಗಬಹುದು ಎಂದು ತಿಳಿಸಿದರು.

ಓಪನ್ ಸ್ಟ್ರೀಟ್ ಮೇಳ:

ನಗರದಲ್ಲಿ ಆಯ್ದ ಪ್ರಮುಖ ಆರು ರಸ್ತೆಗಳಲ್ಲಿ ಡಿ.9 ಹಾಗೂ 10ರಂದು ಎರಡು ದಿನಗಳ ಓಪನ್ ಸ್ಟ್ರೀಟ್ ಮೇಳವನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ಮಾರುಕಟ್ಟೆ ಮಳಿಗೆಗಳು, ಸ್ಟ್ರೀಟ್ ಆರ್ಟಿಸ್ಟ್ ಅಲಂಕಾರಗೊಳಿಸುದು, ಬಂಟ್ಟಿಂಗ್ ಮತ್ತು ಲೈಟಿಂಗ್ ಸೇರಿದಂತೆ ನಾಗರಿಕರನ್ನು ಸೆಳಯಲು ಆಕರ್ಷಕ ರೀತಿಯ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತದೆ.

ದಿ ಬಿಗ್ ಫೀಡ್ ಫೆಸ್ಟಿವಲ್:

ಡಿ.9ರಿಂದ 10ರಂದು ‘ಬಿಗ್ ಫೀಡ್ ಫೆಸ್ಟಿವಲ್’ ಕಾರ್ಯಕ್ರಮವನ್ನು ಬೆಂಗಳೂರು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದು, ಎರಡೂ ದಿನ ಸದರಿ ಸ್ಥಳದಲ್ಲಿ ಫುಡ್ ಸ್ಟಾಲ್, ಸಂಗೀತ ಕಾರ್ಯಕ್ರಮ, ಮಾರುಕಟ್ಟೆಯ ಮಳಿಗೆಗಳು ಹಾಗೂ ಇತರ ಮನರಂಜನಾ ಕಾರ್ಯಕ್ರಮಗಳನ್ನು ಅಯೋಜಿಸಲಾಗುತ್ತದೆ.