ಬೆಂಗಳೂರಿನಿAದ ದಿಂಡಿಗಲ್‌ವರೆಗೆ ನಿರ್ಮಾಣವಾಗುತ್ತಿರುವ 209 ರಾಷ್ಟ್ರೀಯ ಹೆದ್ದಾರಿಯಲ್ಲಿ ಹತ್ತಾರು ಸಮಸ್ಯೆಗಳು ಕಂಡು ಬರುತ್ತಿದ್ದು ಹಾರೋಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಗಾಣಾಳುದೊಡ್ಡಿ, ತಾಮಸಂದ್ರ ಗೇಟ್ ಬಳಿ ಅಂಡರ್ ಪಾಸ್ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಣಾಳು ದೊಡ್ಡಿ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ತಾಲೂಕಿನ ತಾಮಸಂದ್ರ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಸೋಮವಾರ ಜಮಾಯಿಸಿದ ಗ್ರಾಮಸ್ಥರು ಅಂಡರ್ ಪಾಸ್ ನಿರ್ಮಿಸಿ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಿ ಜನತೆಯ ಹಿತ ಕಾಯಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗಾಣಾಳುದೊಡ್ಡಿ ಗ್ರಾಮದ ಮುಖಂಡರಾದ ಶೇಷಾದ್ರಿರಾಮು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಲವಾರು ವರ್ಷದ ಬಳಿಕ ಚಾಲ್ತಿಗೊಂಡಿದೆ. ಹೀಗಿರುವಾಗ ಜನತೆಯ ಹಿತದೃಷ್ಟಿಯಿಂದ ಕೆಲಸ ನಿರ್ವಹಿಸಬೇಕಾದ ಅಧಿಕಾರಿಗಳು ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ಬೇಕಾಬಿಟ್ಟಿಯಾಗಿ ಕಾಮಗಾರಿಯನ್ನು ನಡೆಸುತ್ತಿದ್ದಾರೆ. ತಾಮಸಂದ್ರ ಬಳಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ ಇದನ್ನು ಮನಗಂಡ ಗ್ರಾಮಸ್ಥರು ಅಂಡರ್ ಪಾಸ್ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದೇವೆ ಆದರೆ ಯಾವುದೇ ಅಧಿಕಾರಿ ವರ್ಗದವರು ಇತ್ತ ತಲೆ ಕೆಡಿಸಿಕೊಳ್ಳುತ್ತಿಲ್ಲ, ಸಾರ್ವಜನಿಕರ ಹಿತ ಕಾಯಬೇಕಾದವರು ಬೇಕಾ ಬಿಟ್ಟಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಇನ್ನು ಈ ಸಂಬಂಧ ಜಿಲ್ಲಾಧಿಕಾರಿಗಳು ತಹಸೀಲ್ದಾರ್,ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಯಾವುದೇ ಕ್ರಮವಿಲ್ಲ ಸಂಬಂಧಪಟ್ಟವರು ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗಾಣಾಳುದೊಡ್ಡಿ ಗ್ರಾಮಸ್ಥರಾದ ನರಸಿಂಹಯ್ಯ, ಅರವಿಂದ್, ಮಹೇಶ್,ಕೇಶವಮೂರ್ತಿ, ಚಿನ್ನೇಗೌಡ, ರಾಮು, ಸ್ವಾಮಿ, ಶಿವರಾಜು, ಪ್ರಸನ್ನ, ವೆಂಕಟರಮಣ, ಪ್ರದೀಪ್, ಶಂಕರ್, ಲಕ್ಷ್ಮಣ್, ಮೋಹನ್ ಸೇರಿದಂತೆ ಇನ್ನಿತರರು ಹಾಜರಿದ್ದರು.