ಜಿಲ್ಲೆ

ಸಾಜಿದಾಬಾನು ಅವಿರೋಧ ಆಯ್ಕೆ

ಎ. ಆರ್. ರಘುರಾಮ

ಅರಸೀಕೆರೆ ಗ್ರಾಮಾಂತರ: ಬಾಣಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸಾಜಿದಾ ಬಾನು ಅವಿರೋಧ ಆಯ್ಕೆಯಾಗಿದ್ದಾರೆ.
ವೀಣಾ ಸುರೇಶ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬುಧವಾರ ಚುನಾವಣೆ ಪ್ರಕ್ರಿಯೆ ನಡೆಯಿತು.
ಕಾಂಗ್ರೆಸ್ ಬೆಂಬಲಿತ ಸಾಜಿದಾ ಬಾನು ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಕಾರಣ ಚುನಾವಣಾ ಅಧಿಕಾರಿ ನಾಗರಾಜು ಅವರು ಅವಿರೋಧ ಆಯ್ಕೆ ಘೋಷಣೆ ಮಾಡಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸರಸ್ವತಿ ಶ್ರೀನಿವಾಸ, ವೀಣಾ ಸುರೇಶ, ಶಾಹಿನಾ ಇಂತಿಯಾಜ್, ಉಪಾಧ್ಯಕ್ಷರಾದ
ಭಾಗ್ಯಮ್ಮ ನಂಜುಂಡ ಶೆಟ್ಟಿ, ನೇತ್ರಾವತಿ, ಗೀತಾ ಕೃಷ್ಣಮೂರ್ತಿ. ಬಿ.ಆರ್. ಶ್ರೀಧರ, ಧರ್ಮಣ್ಣ, ಬಿ.ಆರ್. ಸುರೇಶ,
ಮಹಮದ್ ಆಸಿಫ್, ಸಂಜಯ ಮೋಮಿನ್, ಹೇಮಾವತಿ, ಶ್ರುತಿ, ಆಶಾ ಹರೀಶ ಇತರರು ಹಾಜರಿದ್ದರು. ನೂತನ ಅಧ್ಯಕ್ಷರಿಗೆ ಸದಸ್ಯರು ಅಭಿನಂದಿಸಿದರು.