ಬಾದಾಮಿ : ರಾಷ್ಟ್ರಮಟ್ಟದ ಸ್ವಚ್ಛ ವಿದ್ಯಾಲಯ ಪುರಸ್ಕಾರಕ್ಕೆ ಶಿಫಾರಸುಗೊಂಡಿರುವ ತಾಲೂಕಿನ ಬನಶಂಕರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯು ರವೀಂದ್ರನಾಥ ಟ್ಯಾಗೋರ್ ಅವರ ಶಾಂತಿನಿಕೇತನಕ್ಕೆ ಮಾದರಿಯಾಗಿದೆ ಎಂದು ಬೆಂಗಳೂರಿನ ಪಠ್ಯಪುಸ್ತಕ ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡರು ಹೇಳಿದರು.
ಬನಶಂಕರಿ ದೇವಿಯ ದರ್ಶನ ಪಡೆದ ನಂತರ ಅನಿರೀಕ್ಷಿತವಾಗಿ ಶಾಲೆಗೆ ಭೇಟಿ ನೀಡಿ ಅವರು ಮಾತನಾಡಿದರು.
ಶಾಲೆಯ ವಿಹಂಗಮ ನೋಟ ಹಾಗೂ ಸಮುದಾಯದ ಸಹಕಾರದಿಂದ ಭೌತಿಕ ಸೌಲಭ್ಯ ಹೊಂದುವುದರೊಂದಿಗೆ ಶಾಲಾ ಪರಿಸರ ತುಂಬ ಆಕರ್ಷಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯಶಿಕ್ಷಕಿ ಪಿ.ಎನ್. ಚಳಗೇರಿ, ಸಾಶಿಇ ಜಿಲ್ಲಾ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಎಂ.ಬಿ. ಬೆಳ್ಳೆನ್ನವರ, ವಿಷಯ ಪರಿವೀಕ್ಷಕ ಎಂ.ಎ. ಬಾಳಿಕಾಯಿ, ಶಿಕ್ಷಣ ಸಂಯೋಜಕರಾದ ವಿ.ಎಸ್. ಹಿರೇಮಠ, ಹನುಮಂತರಾಜು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರವಿ ಕಂಗಳ, ಎಸ್‌ಡಿಎಂಸಿ ಸದಸ್ಯರಾದ ಚಿದಾನಂದ ಮೆಣಸಗಿ, ಮುರಳೀಧರ ಇನಾಮದಾರ, ಡಿ.ವೈ.ಹೊಸಮನಿ, ಈಶ್ವರ ಹಡಪದ, ಆರ್.ಎ.ಪಾಟೀಲ ಉಪಸ್ಥಿತರಿದ್ದರು.