ಲೋಕಾಪುರ ಪಟ್ಟಣದ ಬನಶಂಕರಿದೇವಿಗೆ ಜಾತ್ರೆ ನಿಮಿತ್ತ ವಿಶೇಷ ಅಲಂಕಾರ ಮಾಡಲಾಗಿತ್ತು. 
ಜಿಲ್ಲೆ

ಬನಶಂಕರಿ ದೇವಿ ಜಾತ್ರೆ ಪ್ರಾರಂಭ

Vijayapura - Desk - Gurappa Lokuri

ಲೋಕಾಪುರ: ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಭಾನುವಾರ ದೇವಿಯ ಜಾತ್ರೆ ವೈಭವದಿಂದ ಪ್ರಾರಂಭವಾಯಿತು.

ಬೆಳಗ್ಗೆ ದೇಸಾಯಿ ವಾಡೆಯಿಂದ, ಜ್ಞಾನೇಶ್ವರ ಮಠ, ದುರ್ಗಾದೇವಿ ದೇವಸ್ಥಾನ, ಗ್ರಾಮದೇವತೆ ಬನಶಂಕರಿ ದೇವಸ್ಥಾನದವರೆಗೆ ದೇವಿಯ ಪಲ್ಲಕ್ಕಿ ಉತ್ಸವ ಹಾಗೂ ಸರ್ವ ದೇವತೆಗಳಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಿತು.

ರಾತ್ರಿ 10 ಗಂಟೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ.

ಜ. 13 ರಂದು ಬೆಳಗ್ಗೆ ದೇವಿಯ ಮಹಾಅಭಿಷೇಕ, ಅಲಂಕಾರ, ವಿಶೇಷ ಪೂಜೆ, ಮಹಾ ಮಂಗಳಾರತಿ 10 ಗಂಟೆಗೆ ದೇವಿಯ ಉಡಿತುಂಬುವುದು. ಮಧ್ಯಾಹ್ನ 12.30 ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಲೋಕಾಪುರ ಪಟ್ಟಣ ಹಾಗೂ ಸುತ್ತಲಿನ ಗ್ರಾಮಸ್ಥರು ದೇವಿ ಜಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ದೇವಸ್ಥಾನ ಪ್ರಕಟಣೆ ತಿಳಿಸಿದೆ.