ಜಿಲ್ಲೆ

ವಂದಾಲ ಬನಶಂಕರಿ ದೇವಿ ರಥೋತ್ಸವ

ಗೊಳಸಂಗಿ: ಸಮೀಪದ ವಂದಾಲ ಗ್ರಾಮದ ಬನಶಂಕರಿ ದೇವಿ ರಥೋತ್ಸವ ಸಹಸ್ರಾರು ಭಕ್ತರ ನಡುವೆ ಶುಕ್ರವಾರ ವೈಭವದಿಂದ ನೆರವೇರಿತು. ಬೆಳಗ್ಗೆ 5ಕ್ಕೆ ಶ್ರೀಬನಶಂಕರಿ ದೇವಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು.

ಮಧ್ಯಾಹ್ನ 2.30ಕ್ಕೆ ಸಕಲ ವಾಧ್ಯಮೇಳದೊಂದಿಗೆ ಕಲಶೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.

ಸಂಜೆ 6ಕ್ಕೆ ಸಹಸ್ರಾರು ಭಕ್ತಾದಿಗಳ ಮಧ್ಯೆ ಬನಶಂಕರಿ ದೇವಿ ರಥೋತ್ಸವ ವಿಜ್ರಂಭಣೆಯಿಂದ ಜರುಗಿತು. ಭಕ್ತರು ಹೂವು, ಹಣ್ಣು, ಬಾಳೆಹಣ್ಣು ಮತ್ತಿತರ ಪದಾರ್ಥಗಳನ್ನು ಸಮರ್ಪಿಸಿ ಭಕ್ತಿಮೆರೆದರು.