ಜಿಲ್ಲೆ

ಬಣಕಾರ, ಕೋಳಿವಾಡ ಕ್ಷಮೆ ಯಾಚಿಸದಿದ್ದರೆ ಹೋರಾಟ

ಹುಬ್ಬಳ್ಳಿ:ರೈತರ ಆತ್ಮಹತ್ಯೆ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಹಿರೇಕೆರೂರ ಶಾಸಕ ಯು.ಬಿ. ಬಣಕಾರ ಹಾಗೂ ರಾಣೆಬೆನ್ನೂರ ಶಾಸಕ ಪ್ರಕಾಶ ಕೋಳಿವಾಡ ಇಬ್ಬರೂ ಬಹಿರಂಗವಾಗಿ ಕ್ಷಮೆ ಯಾಚಿಸದಿದ್ದರೆ ರೈತ ಸಂಘಟನೆಗಳನ್ನು ಸೇರಿಸಿಕೊಂಡು ಉಗ್ರ ಹೋರಾಟ ರೂಪಿಸುತ್ತೇವೆ ಎಂದು ಕರ್ನಾಟಕ ರೈತರ ಸಂಘದ ಅಧ್ಯಕ್ಷ ಸಿದ್ದರಾಜ ಕುಂದಗೋಳ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಅಧಿವೇಶನದಲ್ಲಿ ಶಾಸಕ ದರ್ಶನ ಪುಟ್ಟಣ್ಣಯ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ರೈತರ ಆತ್ಮಹತ್ಯೆ ಬಗ್ಗೆ ಪ್ರಸ್ತಾಪಿಸಿದಾಗ ಶಾಸಕರಾದ ಬಣಕಾರ ಹಾಗೂ ಕೋಳಿವಾಡ ಇಬ್ಬರೂ ಪತ್ರಿಕೆಗಳಲ್ಲಿ ಬೋಗಸ್ ವರದಿ ಬರುತ್ತದೆ. ಹಾವೇರಿ ಜಿಲ್ಲೆಯಲ್ಲಿ ಕೇವಲ 6 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಎಫ್​ಐಆರ್ ದಾಖಲಾಗಿದೆ ಎಂದು ಸುಳ್ಳು ಹೇಳಿದ್ದಾರೆ. ನಮ್ಮ ಪ್ರಕಾರ 18 ರೈತರ ಆತ್ಮಹತ್ಯೆ ಬಗ್ಗೆ ಎಫ್​ಐಆರ್ ಅಗಿವೆ ಎಂದರು.

ಚುನಾವಣೆ ಪೂರ್ವ ಬಿಜೆಪಿ ಸರ್ಕಾರ, 1 ತಿಂಗಳಲ್ಲಿ ಟೆಂಡರ್ ಕರೆದು ಮಹದಾಯಿ, ಕಳಸಾ -ಬಂಡೂರಿ ನಾಲಾ ಕಾಮಗಾರಿ ಆರಂಭಿಸುತ್ತೇವೆ ಎಂದು ಹೇಳಿತ್ತು. ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಆದಷ್ಟು ಶೀಘ್ರ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸುಭಾಷ ಧಾರವಾಡ, ಬಸವರಾಜ ಗಾಳಿ, ಅಶೋಕ ದೊಡ್ಡಮನಿ, ಇತರರು ಇದ್ದರು.