ಸಿಂಧನೂರಿನಲ್ಲಿ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಮಾಜದ ಪ್ರಮುಖ ಸಿದ್ದರಾಮಪ್ಪ ಮಾಡಸಿರವಾರ ಉದ್ಘಾಟಿಸಿದರು. ಪ್ರಮುಖರಾದ ಲಿಂಗಪ್ಪ ದಢೇಸುಗೂರು, ಎನ್.ಅಮರೇಶ, ಪ್ರಮುಖರಾದ ಬಸವರಾಜಪ್ಪ ತೊಂತನಾಳ, ಶಾಂತಪ್ಪ ಚಿಂಚರಕಿ, ಗುಂಡಪ್ಪ ಬಳಿಗಾರ, ವೀರೇಶ ದಿದ್ದಗಿ ಇದ್ದರು. 
ಜಿಲ್ಲೆ

ಬಣಜಿಗ ಸಮಾಜ ಒಗ್ಗೂಡಿ ಮುನ್ನಡೆಯಲಿ

Kopala - Desk - Eraveni

ಸಿಂಧನೂರು: ಎಲ್ಲ ಸಮುದಾಯದವರು ಮೀಸಲಿಗಾಗಿ ಹೋರಾಟ ನಡೆಸುತ್ತಿರುವ ನಡುವೆಯೇ ಬಣಜಿಗ ಯುವಜನರಿಗೂ ಸರ್ಕಾರದ ಅಗತ್ಯ ಸೌಲಭ್ಯಕ್ಕಾಗಿ ಮೀಸಲಾತಿ ದೊರೆಯುವಂತಾಗಬೇಕು ಎಂದು ಉಪನ್ಯಾಸಕ ಬಸವರಾಜ ಬಳಿಗಾರ ಹೇಳಿದರು.

ನಗರದ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದಿಂದ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲ ಸಮುದಾಯದ ಜನತೆ ಒಗ್ಗೂಡುವಂತೆಯೇ ಬಣಜಿಗರು ಒಗ್ಗಟ್ಟಿನಿಂದ ಮುನ್ನಡೆಯಬೇಕು.

ರಾಜ್ಯದಲ್ಲಿ ಸಮಾಜದ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯಡಿ ಸವಲತ್ತು ದೊರೆಯುವಂತಾಗಬೇಕು. ಮುಂಬರುವ ಪೀಳಿಗೆಗೆ ಸಮಾಜದ ಇತಿಹಾಸ ತಿಳಿಸಿಕೊಡುವ ಕೆಲಸವಾಗಬೇಕು ಎಂದರು.

ಸಮಾಜದ ಪ್ರಮುಖ ಸಿದ್ದರಾಮಪ್ಪ ಮಾಡಸಿರವಾರ ಮಾತನಾಡಿ, ಬೇರೊಂದು ಸಮಾಜಕ್ಕೆ ತೊಂದರೆ ಕೊಟ್ಟು, ನಾವು ಚೆನ್ನಾಗಿ ಇರಲು ಸಾಧ್ಯವಿಲ್ಲ. ನಮಗೆ ಸಿಗುವ ಮೀಸಲಾತಿ ಪಡೆದು ಸಮಾಜದ ಏಳಿಗೆಗೆ ಶ್ರಮಿಸಬೇಕು. ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಲು ಪ್ರೇರಣೆ ನೀಡಬೇಕು ಎಂದರು.

ತಾಲೂಕು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಲಿಂಗಪ್ಪ ದಢೇಸುಗೂರು, ಪ್ರಮುಖರಾದ ಬಸವರಾಜಪ್ಪ ತೊಂತನಾಳ, ಶಾಂತಪ್ಪ ಚಿಂಚರಕಿ, ಗುಂಡಪ್ಪ ಬಳಿಗಾರ, ವೀರೇಶ ದಿದ್ದಗಿ ಮಾತನಾಡಿದರು. ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಎನ್.ಅಮರೇಶ,

ಯುವ ಘಟಕ ಅಧ್ಯಕ್ಷ ಬಸವರಾಜ ಅಂಗಡಿ ಬೂತಲದಿನ್ನಿ, ಮುಖಂಡ ಶಿವಕುಮಾರ ಜವಳಿ, ಸಿರಗುಪ್ಪ ತಾಲೂಕು ಘಟಕ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಕಡಗಲ್, ಮಹಿಳಾ ಘಟಕ ಗೌರವಾಧ್ಯಕ್ಷೆ ಸುನಂದಮ್ಮ ದೊಡ್ಡಪ್ಪ ಸಾಹುಕಾರ, ಮಹಿಳಾ ಘಟಕ ಅಧ್ಯಕ್ಷೆ ನಂದಿನಿ ಮೇರನಾಳ, ಯುವ ಕಲಾವಿದ ಪ್ರೀತಂ ಇತರರಿದ್ದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.