ಜಿಲ್ಲೆ

ಸೆ.3 ರಂದು ಬಣಜಿಗ ಸಮಾಜದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ನಗರದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಸೆ.3 ರಂದು ಬೆಳಗ್ಗೆ 10.30 ಕ್ಕೆ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ನಾಗೇಶ ಸವಡಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಜರುಗಿದ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಚಿವ ಎಚ್.ಕೆಮ ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತೋಂಟದ ಶ್ರೀಗಳು ಸಾನ್ನಿಧ್ಯ, ಶಾಂತಲಿಂಗ ಶ್ರೀಗಳು ಸಮ್ನುಖ ವಹಿಸಲಿದ್ದಾರೆ ಎಂದರು.

ಕಾರ್ಯದರ್ಶಿ ಸುರೇಶ ನಿಲುಗಲ್ ಮಾತನಾಡಿ, ನಗರದಲ್ಲಿ ಸಮುದಾಯದ ವತಿಯಿಂದ ಬಸವಭವನ ನಿರ್ಮಾಣಗೊಳ್ಳುತ್ತಿದ್ದು, ಕೆಲವೇ ತಿಂಗಳಲ್ಲಿ ಉದ್ಘಾಟನೆ ಆಗಲಿದೆ ಎಂದು ಮಾಹಿತಿ ನೀಡಿದರು.

ಗಂಗಣ್ಣ ಕೋಟಿ, ಈಶಣ್ಣ ಮುನವಳ್ಳಿ, ಕಿರಣ ಗೋಡಬಾಳ, ರವಿ ಮಾನ್ವಿ, ಕಿರಣ ಕೂಬಾ, ಅಮರನಾಥ, ಎಸ್ ಎಂ ಅಗಡಿ, ವೀರಣ್ಣ ಗಡಗಿ ಇತರರು ಇದ್ದರು.