ತೇರದಾಳ ಪಟ್ಟಣದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಬಣಜಿಗ ಸಮಾಜದ ಸಭೆಯಲ್ಲಿ ಬಾದಾಮಿಯ ಮುಖಂಡ ಗಂಗಾಧರ ಘಟ್ಟದ ಮಾತನಾಡಿದರು. ಸ್ಥಳೀಯ ರಮೇಶ ಪಟ್ಟಣಶೆಟ್ಟಿ, ಅಪ್ಪು ಮಂಗಸೂಳಿ ಇದ್ದರು. 
ಜಿಲ್ಲೆ

ಬಣಜಿಗ ಸಮಾಜ ಶಾಂತಿಯ ಸಂಕೇತ

ತೇರದಾಳ: ಎಲ್ಲ ಸಮಾಜದವರ ಜತೆಗೆ ಸೌಹಾರ್ದಯುತವಾಗಿರುವ ಬಣಜಿಗರು ಶಾಂತಿಯ ಸಂಕೇತರಾಗಿದ್ದಾರೆ ಎಂದು ಬಾದಾಮಿ ಬಣಜಿಗ ಸಮಾಜದ ಮುಖಂಡ ಗಂಗಾಧರ ಘಟ್ಟದ ಹೇಳಿದರು.

ಇಲ್ಲಿನ ಪೇಟೆ ಭಾಗದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ನಾವು ಸಂಘಟಿತರಾದಾಗ ಮಾತ್ರ ನಮ್ಮನ್ನು ಗುರುತಿಸುತ್ತಾರೆ. ಮಾ. 1 ರಂದು ಬಾದಾಮಿಯಲ್ಲಿ ಬಣಜಿಗ ಸಮಾವೇಶ ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ತೇರದಾಳ ಘಟಕದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಹೇಳಿದರು.

ಸುರೇಶ ಮುಚ್ಚಂಡಿ, ಈರಪ್ಪ ಪಟ್ಟಣಶೆಟ್ಟಿ, ಬಾಬುರಾಜೇಂದ್ರ ಹಂಜಿ, ಸ್ಥಳೀಯ ಘಟಕದ ಅಧ್ಯಕ್ಷ ರಮೇಶ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ದೇವಸ್ಥಾನ ಜಿರ್ಣೋದ್ಧಾರ ಸೇವಾ ಸಮಿತಿ ಅಧ್ಯಕ್ಷ ಅಪ್ಪು ಮಂಗಸೂಳಿ, ಬಾದಾಮಿಯ ಗಂಗಪ್ಪ ಜಂಬಗಿ, ಶರಣಪ್ಪ ಕಲಬಾಶೆಟ್ಟಿ, ಬಿ.ಎಂ. ಟೆಂಗಿನಕಾಯಿ, ವಿರೂಪಾಕ್ಷ ಮಿಟ್ಟಲಕೋಡ, ಹೊಸೂರ, ಬಾಲಚಂದ್ರ ಯಾದವಾಡ, ಬಸವರಾಜ ಅವರಾದಿ, ಶ್ರೀನಾಥ ಸೊಟ್ಟಿ, ಅನಿಲ ಹಂಜಿ, ನಿರಂಜಪ್ಪ ಪಟ್ಟಣಶೆಟ್ಟಿ, ಬಸವರಾಜ ಹಂಜಿ, ರವಿ ಅವರಾದಿ, ಸಂತೋಷ ಮಹಾಬಳಶೆಟ್ಟಿ ಇತರರಿದ್ದರು.