ಜಿಲ್ಲೆ

ಅಕ್ರಮ ಕಲ್ಲು,ಮರಳು ಗಣಿಗಾರಿಕೆಗೆ ಕಡಿವಾಣ,ಡಿಸಿ

Chitradurga

ಚಿತ್ರದುರ್ಗ: ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ,ಮರಳು ಗಣಿಗಾರಿಕೆ ಕಡಿವಾಣ ಹಾಕುವುದಾಗಿ ಜಿಲ್ಲಾಧಿಕಾರಿ ಜಿಆರ್‌ಜಿ ಪ್ರಭು ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ,ಅಕ್ರಮ ಗಣಿಗಾರಿಕೆಗಳ ನಿಯಂತ್ರಣಕ್ಕಾಗಿ ವಿಶೇಷ ಪಡೆಗಳನ್ನು ರಚಿಸಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗುವುದು.

ಅಕ್ರಮ ಗಣಿಗಾರಿಕೆ ಮಾಡುವಂಥವರು ಯಾರೇ ಆಗಿರಲಿ ಅವರ ವಿರುದ್ಧ ಕ್ರಮ ಜರುಗಿಸು ವುದಾಗಿ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ನೂತನ ಕಟ್ಟಡ ನಿರ್ಮಾಣ ಪ್ರಾರಂಭವಾಗಿದೆ. ಈ ಕಟ್ಟಡಕ್ಕೆ 48 ಕೋಟಿ ರೂ.ಅಗತ್ಯವಿದೆ. ಸರ್ಕಾರದ ಹಂತ ದಲ್ಲಿರುವ ಈ ಅಗತ್ಯ ಅನುದಾನದ ಪ್ರಸ್ತಾವನೆಗೆ ಶೀಘ್ರದಲ್ಲೇ ಸಂಪುಟದ ಒಪ್ಪಿಗೆ ಸಿಗಬೇಕಿದೆ.

ಕಚೇರಿ ನಿರ್ಮಾಣ ಜಾಗದಲ್ಲಿ ಕಲ್ಲು, ಮಣ್ಣು ಅಕ್ರಮ ಮಾರಾಟವಾಗಿದೆ ಎಂಬ ದೂರನ್ನು ಗಮನಿಸಿದ್ದೇನೆ. ಈ ಕುರಿತಂತೆ ನ್ಯಾಯಾಲಯ ನೀಡಿರುವ ಆದೇಶಗಳನ್ನೂ ಪರಿ ಶೀಲಿಸಿ ನಿಯ ಮಾನುಸಾರ ಕ್ರಮ ವಹಿಸುವುದಾಗಿ ಹೇಳಿದರು. ಜಿಲ್ಲೆಯಲ್ಲಿ ಅಕ್ರಮ ಲೇಔಟ್‌ಗಳು ತಲೆ ಎತ್ತುತ್ತಿವೆ ಎಂಬ ದೂರನ್ನು ಪರಿಶೀಲಿಸುವುದಾಗಿ ತಿಳಿಸಿದರು.

---