ನಿನಾದ್ ಮ್ಯೂಸಿಕಲ್ ಟ್ರಸ್ಟ್, ಪ್ರಸನ್ನ ಫಿಲ್ಮ್ ಹಿಟ್ಸ್ ವತಿಯಿಂದ ‘ಬಾಲು ನಮನ’ ಸಂಗೀತ ಕಾರ್ಯಕ್ರಮವನ್ನು ಏ.6ರಂದು ಸಂಜೆ 5 ಗಂಟೆಗೆ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಲಾಗಿದೆ.
ಎ.ಎಸ್.ಪ್ರಸನ್ನ ಕುಮಾರ್ ಅವರ ಸಂಗೀತ ನಿರ್ದೇಶನದಲ್ಲಿ ಲೈವ್ ಮ್ಯೂಸಿಕ್ ನಡೆಯಲಿದ್ದು, ಗಾಯಕರಾದ ಡಾ.ಸುಭಾಷ್, ವಿಶ್ವನಾಥ್, ರಂಗಸ್ವಾಮಿ, ಶಿವಣ್ಣ, ಕೆ.ವಿ.ಜಗದೀಶ್, ಕೆ.ಮಹೇಶ್, ಕಿರಣ್, ಪಾಪಣ್ಣ, ಗುರುರಾಜ್, ರೇಖಾ, ದೇವಿಕಾ, ಸುಮಾ, ದಕ್ಷ, ಪೂರ್ಣಿಮಾ, ಜಯಲಕ್ಷ್ಮೀ ಸೇರಿದಂತೆ 25ಕ್ಕೂ ಹೆಚ್ಚು ಜನ ಹಾಡಲಿದ್ದಾರೆ.
ಇವರಿಗೆ ನೀತು ನಿನಾದ್ (ಕೊಳಲು), ಬಸವರಾಜ್, ಟೋನಿ(ಕೀಬೋರ್ಡ್), ಕಿರಣ್ (ತಬಲಾ), ವಿನಯ್(ಗಿಟಾರ್) ಸಾಥ್ ನೀಡಲಿದ್ದಾರೆ.